ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರೀನ್‌ಬಡ್ಸ್ ಸಂಸ್ಥೆ ವಿರುದ್ಧ ಕಾರ್ಯಕರ್ತರ ಪ್ರತಿಭಟನಾ ಸಭೆ

Srinivasa Murthy VN
Updated On : 10 Feb 2014, 11:56 am

ಮೈಸೂರು: ಮುಗ್ಧ ಜನರನ್ನು ವಂಚಿಸಿರುವ ಗ್ರೀನ್‌ಬಡ್ಸ್ ಆಗ್ರೋ ಫಾರಂ ಸಂಸ್ಥೆಯ ಬಿ.ಎಲ್.ರವೀಂದ್ರನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರೀನ್‌ಬಡ್ಸ್ ಕಾರ್ಯಕರ್ತರ ಹಾಗೂ ಠೇವಣಿದಾರರ ರಕ್ಷಣಾ ಸಮಿತಿ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಮೀಪದ ಉದ್ಯಾನವನದಲ್ಲಿ ರಕ್ಷಣಾ ಸಮಿತಿ ಪದಾಧಿಕಾರಿಗಳು ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಿದರು.
ಗ್ರೀನ್‌ಬಡ್ಸ್ ಆಗ್ರೋ ಫಾರಂ ಲಿಮಿಟೆಡ್ ಎಂಬ ವೈಜ್ಞಾನಿಕ ಅರಣ್ಯ ಕೃಷಿ ಆಧಾರಿತ ಸಂಸ್ಥೆಯು ಎಷ್ಟೋ ಬಡವರಿಗೆ ನಂಬಿಸಿ ಲಕ್ಷಾಂತರ ಕಾರ್ಯಕರ್ತರನ್ನು ಸೃಷ್ಟಿಸಿ ಹಳ್ಳಿ ಹಳ್ಳಿಗಳಿಂದ ಹಣ ಸಂಗ್ರಹಿಸಿ ಮೋಸ ಮಾಡಿದೆ. ಈ ಸಂಸ್ಥೆಯಲ್ಲಿ ಕೋಟ್ಯಂತರ ರು. ಠೇವಣಿ ಇಡಲಾಗಿತ್ತು. ಆ ಹಣವನ್ನು ದ್ವಿಗುಣಗೊಳಿಸುವುದಾಗಿ ಹೇಳಿ ವಂಚಿಸಿದ ಹಣವು ನಿರ್ದೇಶಕ ರವೀಂದ್ರನಾಥ್, ಅವರ ಪತ್ನಿ ದ್ರಾಕ್ಷಾಯಿಣಿ ಮತ್ತು ಪ್ರಧಾನ ವ್ಯವಸ್ಥಾಪಕಿ ಗಾಯಿತ್ರಿ ಅವರ ಹೆಸರಿನಲ್ಲಿದೆ. ಆದರೆ ಹಣ ಹಿಂದಿರುಗಿಸುವಂತೆ ಸಾರ್ವಜನಿಕರು ಕೇಳಿದಾಗ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಸಮಿತಿಯ ಜಿ.ವಿ. ಲಕ್ಷ್ಮೀದೇವಿ ಆರೋಪಿಸಿದರು.
ಮಾಧ್ಯಮಗಳಲ್ಲಿ ಏಜೆಂಟರಿಗೆ ಮೆಚ್ಯೂರಿಟಿ ಹಣ ಕೊಟ್ಟಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ ಏಜೆಂಟರು ಊರು ಬಿಟ್ಟು ಹೋಗುವ ಸ್ಥಿತಿ ಬಂದಿದೆ. ಈ ಸಂಸ್ಥೆಯಲ್ಲಿ ಶೇ.75ರಷ್ಟು ಮಹಿಳೆಯರೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿಯ ಗೌರವಾಧ್ಯಕ್ಷ ಎಸ್. ಶಿವಪ್ಪ, ಉಪಾಧ್ಯಕ್ಷ ಸೈಯದ್ ಕಲಿಂ, ನಾಗರಾಜು, ಮಹದೇವಸ್ವಾಮಿ, ಮಂಗಳಮ್ಮ, ನಿರ್ಮಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement