ಕೆ.ಆರ್. ನಗರ ತಾಪಂಉಪಾಧ್ಯಕ್ಷೆ ಭಾರತಿ ಮಹದೇವ್
ಕೆ.ಆರ್. ನಗರ: ಇಲ್ಲಿನ ತಾಪಂ ಉಪಾಧ್ಯಕ್ಷರಾಗಿ ಗಂಧನಹಳ್ಳಿ ಕ್ಷೇತ್ರದ ಜೆಡಿಎಸ್ ಸದಸ್ಯೆ ಭಾರತಿ ಮಹದೇವ್ ಅವಿರೋಧವಾಗಿ ಆಯ್ಕೆಯಾದರು. ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಭಾರತಿ ಮಹದೇವ್ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಹುಣಸೂರು ಉಪ ವಿಭಾಗಾಧಿಕಾರಿ ಜಗದೀಶ್ ಉಪಾಧ್ಯಕ್ಷರ ಆಯ್ಕೆ ಪ್ರಕಟಿಸಿದರು.
ನೂತನ ಉಪಾಧ್ಯಕ್ಷರನ್ನು ತಾ. ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಮಾಜಿ ಅಧ್ಯಕ್ಷರಾದ ಹೇಮಾವತಿ ಅಶೋಕ್, ಕವಿತಾ ರವಿ, ಮಾಜಿ ಉಪಾಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿ, ಕೃಷ್ಣೇಗೌಡ, ಜೆಡಿಎಸ್ ಮುಖಂಡರಾದ ಬಿ. ರಮೇಶ್, ಗಂಧನಹಳ್ಳಿ ಮಹದೇವ್ ಅಭಿನಂದಿಸಿದರು. ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ ಖಾನ್, ಸದಸ್ಯರಾದ ನಾಗಣ್ಣ, ರಾಮಪ್ಪ, ಸುಷ್ಮಾ ಹಲಗೇಗೌಡ, ಲಕ್ಷ್ಮೀ ಕನಕರಾಜು, ವಿಜಯಲಕ್ಷ್ಮೀ, ಶಂಕುತಲಾ ರಮೇಶ್, ಕಾರ್ಯ ನಿರ್ವಹಣಾಧಿಕಾರಿ ಸಿದ್ದಲಿಂಗಮೂರ್ತಿ ಇದ್ದರು.