ದುಶ್ಚಟಗಳಿಂದ ದೂರವಿರಲು ಮಣಿಕರ್ಣಿಕಾ ಕರೆ
ಮೈಸೂರು: ಹದಿಹರೆಯದವರು ದುಶ್ಚಟಗಳಿಂದ ದೂರವಾಗಿ ಭವ್ಯ ಭಾರತ ನಿರ್ಮಿಸಬೇಕು ಎಂದು ಡಾ.ಎಚ್.ಆರ್. ಮಣಿಕರ್ಣಿಕಾ ಹೇಳಿದರು.
ಡಿ. ಬನುಮಯ್ಯ ಬಾಲಕರ ಪ್ರೌಢಶಾಲೆಯ ಕಲಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲ ಅವರು ಹದಿಹರೆಯ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರ ಕುರಿತು ಮಾತನಾಡಿದರು.
ಹದಿಹರೆಯ ಎಂಬುದು ಮನುಷ್ಯನ ಜೀವನದಲ್ಲಿ ಸಂಕೀರ್ಣ ಹಾಗೂ ನಿರ್ಣಾಯಕ ಹಂತ. ಹದಿಹರೆಯದವರು ದೇಶದ ಭವಿಷ್ಯದ ಸಂಪತ್ತು. ಈ ಹಂತದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಪ್ರಮುಖ ಶಾರೀರಿಕ ಬದಲಾವಣೆಗಳು, ಮಾನಸಿಕ ಬದಲಾವಣೆ, ಚಂಚಲತೆ, ವ್ಯಸನ, ಹಠಮಾರಿತನ, ಹಗಲುಗನಸು ಕಾಣುವುದು, ಸಂಕೋಚ, ಉದ್ವೇಗ ಗೋಚರಿಸುತ್ತದೆ. ಯುವಕ- ಯುವತಿಯರು ತಂಬಾಕು ಸೇವನೆ, ಗಾಂಜಾ ಮುಂತಾದ ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತರಾಗಿ ಬಾಳಿ ಭವ್ಯ ಭಾರತ ಕಟ್ಟಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಬೇಲೂರೆಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ. ಜಗದೀಶ್, ಡಾ. ಜಯದೇವ್ ಮುಖ್ಯ ಅತಿ ಥಿಗಳಾಗಿದ್ದರು. ಬೋರೇಗೌಡ ಸ್ವಾಗತಿಸಿದರು. ಕೆ.ಕೃಷ್ಣೇಗೌಡ ವಂದಿಸಿದರು.