ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಪರ್ಕ ಕಾರ್ಯಕ್ರಮ

Srinivasa Murthy VN
Updated On : 12 Feb 2014, 12:50 pm

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗವು 2013-14ನೇ ಸಾಲಿನ ಅಂತಿಮ ಎಂ.ಎಸ್ಸಿ ಮನೋವಿಜ್ಞಾನದ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳನ್ನು ಫೆ.14ರಿಂದ 27ರವರೆಗೆ ಮುಕ್ತ ಗಂಗೋತ್ರಿಯ ನಳ ಕಟ್ಟಡದಲ್ಲಿ ಏರ್ಪಡಿಸಲಾಗಿದೆ. ಕಿರು ಪರೀಕ್ಷೆಗಳು, ಸೆಮಿನಾರ್ ಹಾಗೂ ಫೆ. 26, 27 ರಂದು ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ವಿಭಾಗದ ಮುಖ್ಯಸ್ಥರು ಕೋರಿದ್ದಾರೆ. ಮೊ. 99451 12468 ಸಂಪರ್ಕಿಸಬಹುದು.

ಉಮೇಶ್ ನೇಮಕ
ಮೈಸೂರು: ಬಿಜೆಪಿ ಪ.ಜಾತಿ ಮೋರ್ಚಾದ ರಾಜ್ಯ ಪ್ರಶಿಕ್ಷಣ ಸಂಚಾಲಕರಾಗಿ ಗೋಕುಲಂ 4ನೇ ಹಂತದ ಪಿ. ಉಮೇಶ್ ಅವರನ್ನು ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎ. ನಾರಾಯಣಸ್ವಾಮಿ ನೇಮಿಸಿದ್ದಾರೆ.

ಪರಸ್ಪರ ಟ್ರಸ್ಟ್ನಿಂದ ರಂಗ ತರಬೇತಿ ಶಿಬಿರ
ಮೈಸೂರು: ಪರಸ್ಪರ ಟ್ರಸ್ಟ್ ವತಿಯಿಂದ ರಂಗನಿರ್ದೇಶಕ ಮಂಜುನಾಥ್ ಬೆಳಕೆರೆ ಅವರ ಸಾರಥ್ಯದಲ್ಲಿ ಫೆ.15ರಿಂದ 45 ದಿನಗಳ ರಂಗ ತರಬೇತಿ ಶಿಬಿರ ಮತ್ತು ನಾಟಕ ತಯಾರಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ರಂಗಭೂಮಿಯ ವಿವಿಧ ಮಜಲುಗಳ ಬಗ್ಗೆ ಉಪನ್ಯಾಸ ಮಾಲಿಕೆ, ಮೇಕ್ಅಪ್, ನಟನೆ, ರಂಗಸಜ್ಜಿಕೆ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ನಾಟಕ ತರಬೇತಿಯನ್ನೂ ನೀಡಲಿದ್ದು, ಪ್ರತಿದಿನ ಸಂಜೆ 5.45ರಿಂದ ರಾತ್ರಿ 8ರವರೆಗೆ ತಾಲೀಮು ನಡೆಯಲಿದೆ. ಸಹ ನಿರ್ದೇಶಕರಾಗಿ ಯಶವಂತ ಕಾರ್ಗಳ್ಳಿ ಶಿಬಿರದಲ್ಲಿ ಪಾಲ್ಗೊಳ್ಳುವರು. ಕಲಾ ನಿರ್ದೇಶನವನ್ನು ಬಾದಲ್ ನಂಜುಂಡಸ್ವಾಮಿ, ನಿರ್ವಹಣೆ ಜವಾಬ್ದಾರಿಯನ್ನು ಎಸ್. ರಾಜಶೇಖರ್, ರಂಜನ್ ಶೆಟ್ಟಿ ವಹಿಸಿಕೊಳ್ಳುವರು. ಹೆಚ್ಚಿನ ಮಾಹಿತಿಗಾಗಿ ಮೊ. 94496 53300 ಸಂಪರ್ಕಿಸಬಹುದು.

15ರಿಂದ ಅವಲಂಬಿತ ಕಾರ್ಯಾಗಾರ
ಮೈಸೂರು: ರಂಗ ಸಂಗಮ ಸಂಸ್ಥೆಯು ಫೆ. 15ರಿಂದ 17ರವರೆಗೆ ರಂಗಭೂಮಿ ಅವಲಂಬಿತ ಕಾರ್ಯಾಗಾರ ಆಯೋಜಿಸಿದ್ದು, ಹವ್ಯಾಸಿ ಕಲಾವಿದರು, ದೂರ ಶಿಕ್ಷಣದ ಡಿಪ್ಲೊಮಾ ಪಡೆದಿರುವ ಹಾಗೂ ಕಾರ್ಮಿಕ ಕಲಾವಿದರು ತರಬೇತಿ ಪಡೆಯಬಹುದಾಗಿದೆ ಎಂದು ಅಧ್ಯಕ್ಷ ಮೋಹನ್ರಾಜ್ ತಿಳಿಸಿದ್ದಾರೆ. ಮೊ. 94812 18170 ಸಂಪರ್ಕಿಸಬಹುದು.

ಕೈ ತೋಟ ತರಬೇತಿ
ಮೈಸೂರು: ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೈತೋಟ ಮತ್ತು ತಾರಸಿಗಳ ಕುಂಡಗಳಲ್ಲಿ ತರಕಾರಿ ಗಿಡ ಬೆಳೆಸುವ ಕುರಿತು ಫೆ. 15, 16ರಂದು ತರಬೇತಿ ಏರ್ಪಡಿಸಿದೆ. ಫೆ.15ರಂದು ಬನ್ನಿಮಂಟಪದ ಸೇಂಟ್ ಜಾನ್ ಆಸ್ಪತ್ರೆಯ ಮುಂದಿನ ರೋಟರಿ ಶಾಲೆಯಲ್ಲಿ ಮತ್ತು ಫೆ. 16ರಂದು ಮೇಟಗಳ್ಳಿಯ ನೋಟು ಮುದ್ರಣಾಲಯದಲ್ಲಿ ಈ ತರಬೇತಿ ಶಿಬಿರ ನಡೆಯಲಿದೆ. ಭಾಗವಹಿಸುವವರಿಗೆ ತರಕಾರಿ ಸಸಿ ಮತ್ತು ಬೀಜಗಳನ್ನು ಉಚಿತವಾಗಿ ವಿತರಿಸುವುದಾಗಿ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ
ಮೈಸೂರು: ಕಲಾಧಾರೆ ಕಲ್ಚರಲ್ ಟ್ರಸ್ಟ್ ಹಾಗೂ ಬಹುಜನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ 14ನೇ ವರ್ಷದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಫೆ.22, 23ರಂದು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದೆ. ಜಾನಪದ ನೃತ್ಯ, ಪಾಶ್ಚಿಮಾತ್ಯ, ಭರತನಾಟ್ಯ, ಹಾಡುಗಾರಿಕೆ, ಅಭಿನಯ, ಚಿತ್ರಕಲೆ, ಫ್ಯಾಷನ್ ಶೋ ಸ್ಪರ್ಧೆ ನಡೆಯಲಿದೆ. ಅಂಗವಿಕಲರಿಗೆ ನೃತ್ಯ ಸ್ಪರ್ಧೆಯಲ್ಲಿ ಉಚಿತ ಪ್ರವೇಶವಿದೆ. ಆಸಕ್ತರು ಫೆ. 19ರೊಳಗೆ ತಮ್ಮ ಹೆಸರನ್ನು ಕಲಾಧಾರೆ ಕಲ್ಚರಲ್ ಟ್ರಸ್ಟ್, ನಂ. 1160, ಎಂಐಜಿ ವಿವೇಕಾನಂದ ನಗರ ವೃತ್ತ, ಮೈಸೂರು ಅಥವಾ ಸಂಸ್ಥಾಪಕ ಅಧ್ಯಕ್ಷ ಚಾಮರಾಜ್ ಅವರ ಮೊ. 9880777121 ಇವರಲ್ಲಿ ನೋಂದಾಯಿಸಿಕೊಳ್ಳಬಹುದು.

ಬೆಸ್ಟ್ ಫೈಟರ್ ಕರಾಟೆ ಪಂದ್ಯ
ಮೈಸೂರು: ವಡೋರಿಯು ಕರಾಟೆ ಡು ಅಸೋಸಿಯೇಷನ್ ಫೆ.16ರಂದು ಭಾರತೀಯ ವಿದ್ಯಾಭವನದ ಪ್ರೊ. ತಾತಾಚಾರಿ ಆಡಿಟೋರಿಯಂನಲ್ಲಿ ರಾಜ್ಯ ಮಟ್ಟದ ಬೆಸ್ಟ್ ಫೈಟರ್ ಕರಾಟೆ ಪಂದ್ಯಾವಳಿ ಆಯೋಜಿಸಿದೆ. ಬಾಲಕರಿಗೆ 6 ವಿಭಾಗ, ವಯಸ್ಕರಿಗೆ 3 ವಿಭಾಗ ಇದೆ. ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 2 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ದ್ವಿತೀಯ ಸ್ಥಾನಕ್ಕೆ 1,500 ಮತ್ತು ಟ್ರೋಫಿ, ತೃತೀಯ ಬಹುಮಾನಕ್ಕೆ ಟ್ರೋಫಿ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಹರೀಶ್ ಮತ್ತು ಕಾರ್ಯದರ್ಶಿ ಸೆನ್ಸಾಯ್ ಚಿದಾನಂದ ತಿಳಿಸಿದ್ದಾರೆ.

ಬ್ರಹ್ಮಾಜೀ ಪ್ರವಚನ
ಮೈಸೂರು: ಚಿನ್ಮಯ ಮಿಷನ್ನ ಸ್ವಾಮಿ ಬ್ರಹ್ಮಾಜೀ ಅವರು ಫೆ.16ರಿಂದ 23ರವರೆಗೆ ಪ್ರತಿದಿನ ಸಂಜೆ 6.30ರಿಂದ 8ರವರೆಗೆ ಫೋರ್ಟ್ ಮೊಹಲ್ಲಾದ ಶ್ರೀ ಶೃಂಗೇರಿ ಶಂಕರ ಮಠದ ಅಭಿನವ ಶಂಕರಾಲಯದಲ್ಲಿ ಧ್ಯಾನದ ವಿಧಾನ, ಧ್ಯೇಯ, ಅಡಚಣೆಗಳು ಮತ್ತು ಪರಿಹಾರ ಕುರಿತು ಪ್ರವಚನ ನೀಡುವರು. ಶಂಕರಾಚಾರ್ಯರ ದೃಗ್ ದೃಶ್ಯ ವಿವೇಕ ಪ್ರವಚನದ ಮೂಲ ವಿಷಯ.

ನಾಳೆ ದುಂಡು ಮೇಜಿನ ಸಭೆ
ಮೈಸೂರು: ಸಣ್ಣ ಉದ್ದಿಮೆಯಲ್ಲಿ ಮಹಿಳೆ (ವೈಸ್) ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು (ಎಂಸಿಸಿಐ) ಇ- ಮರ್ಜ್ ಸಹಯೋಗದೊಂದಿಗೆ ಫೆ.13ರ ಬೆಳಗ್ಗೆ 10.30ಕ್ಕೆ ಎಂಸಿಸಿಐ ಸಭಾಂಗಣದಲ್ಲಿ ಕರ್ನಾಟಕದಲ್ಲಿ ಮಹಿಳಾ ಉದ್ದಿಮೆಗಳಿಗೆ ಉತ್ತೇಜನ ಕುರಿತ ದುಂಡು ಮೇಜಿನ ಸಭೆ ಏರ್ಪಡಿಸಿದ್ದು, ದೂ. 0821- 3240404 ಸಂಪರ್ಕಿಸಬಹುದು.

ಕಿನ್ನಾಳ ಕಲೆ ತರಬೇತಿ
ಇರ್ವಿನ್ ರಸ್ತೆಯಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿ ಫೆ.13ರಿಂದ 27ರವರೆಗೆ ಮಾಡು ಮತ್ತು ಕಲಿ ಸರಣಿಯ ಭಾಗವಾಗಿ ಕರ್ನಾಟಕದ ಕಿನ್ನಾಳ ಕಲೆ ತರಬೇತಿ ಏರ್ಪಡಿಸಿದ್ದು, ಆಸಕ್ತರು 50  ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ದೂ. 0821- 2448231 ಸಂಪರ್ಕಿಸಬಹುದು.

ಕ್ರೇಜಿಸ್ಟಾರ್ ಸಂಘ ಅಸ್ತಿತ್ವಕ್ಕೆ
ಕ್ರೇಜಿಸ್ಟಾರ್ ವಿಆರ್ಸಿ ಗ್ರೂಪ್ ಮೈಸೂರು ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ರಾಜ್ಯದ 19 ಜಿಲ್ಲೆಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಸಂಘದ ಮೂಲಕ ನೇತ್ರದಾನ ಮಹಾದಾನ, ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎಂಬ ಅರಿವು ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಫೆ.13ರಂದು ಬೆಂಗಳೂರು, ಮೈಸೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ವಿಜಿಯಣ್ಣ, ಪ್ರಧಾನ ಕಾರ್ಯದರ್ಶಿ ಸಿ. ಸಂತೋಷಗೌಡ ತಿಳಿಸಿದ್ದಾರೆ. ಮೊ. 99003 72013.

ಆರ್ಟಿಐ ಕುರಿತ ಕಾರ್ಯಾಗಾರ
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಂಗ ಸಂಸ್ಥೆಯಾದ ವಿ- ಲೀಡ್ನಲ್ಲಿ ಫೆ.15ರ ಬೆಳಗ್ಗೆ 10ಕ್ಕೆ ಮಾಹಿತಿ ಹಕ್ಕು ಅಧಿನಿಯಮ 2005 ಕುರಿತ ಕಾರ್ಯಾಗಾರ ಏರ್ಪಡಿಸಿದ್ದು, ಆಸಕ್ತರು ಮೊ. 96633 44400 ಸಂಪರ್ಕಿಸಬಹುದು.

ಪ್ರಾಣಾಯಾಮ ತರಗತಿ
ಕುವೆಂಪುನಗರದ ಉಪನಿಷತ್ ಯೋಗ ಕೇಂದ್ರದಲ್ಲಿ ಫೆ.13ರಿಂದ ಏಳು ದಿನಗಳ ಕಾಲ ಪ್ರಾಣಾಯಾಮ, ಧ್ಯಾನದ ತರಗತಿ ನಡೆಸಲಿದ್ದು, ದೂ. 0821- 2541801 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement