ಶುಭೋದಯ ಆಸ್ಪತ್ರೆಗೆ ಸುತ್ತೂರುಶ್ರೀ ಚಾಲನೆ
ಮೈಸೂರು: ನಗರದ ಶಿಕ್ಷಕರ ಬಡಾವಣೆಯಲ್ಲಿ ನಿರ್ಮಿಸಿರುವ ವಿಶಿಷ್ಟ ಸೇವೆಗಳನ್ನು ಒಳಗೊಂಡ ಶುಭೋದಯ ಅಪಘಾತ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶನಿವಾರ ಉದ್ಘಾಟಿಸಿದರು.
ಶುಭೋದಯ ಆಸ್ಪತ್ರೆಯು ದಿನದ 24 ಗಂಟೆಯೂ ಟ್ರಾಮಾ, ತುರ್ತು ಹಾಗೂ ತೀವ್ರ ನಿಗಾ ಘಟಕ (ಐಸಿಯು) ಸೌಲಭ್ಯ ಹೊಂದಿದೆ. ಇದರ ಜೊತೆಗೇ, ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಆರೋಗ್ಯ ಹಾಗೂ ಆರೋಗ್ಯ ಸಂಬಂಧಿ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಮೂಳೆ ಶಸ್ತ್ರಚಿಕಿತ್ಸೆ, ನರರೋಗ/ ನರಸಂಬಂಧಿ ಶಸ್ತ್ರಚಿಕಿತ್ಸೆ, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ, ಸ್ತ್ರೀರೋಗಶಾಸ್ತ್ರ, ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ, ಮಕ್ಕಳ ಚಿಕಿತ್ಸಾ ಸೌಲಭ್ಯ, ಇಎನ್ಟಿ, ನೇತ್ರಚಿಕಿತ್ಸಾ ಸೌಲಭ್ಯಗಳು ಹೊಂದಿದೆ.
ಶುಭೋದಯ ಆಸ್ಪತ್ರೆಯ ಸಿಇಒ ಡಾ.ಆರ್. ಬಸವರಾಜು ಮಾತನಾಡಿ, ರೋಗಿಗಳಿಗೆ ಒಂದೇ ಕಡೆಯಲ್ಲಿ ಹಾಗೂ ಕೈಗೆಟಕುವ ದರದಲ್ಲಿ ಎಲ್ಲ ರೀತಿಯ ಅಪಘಾತ ಸಂಬಂಧಿ ಚಿಕಿತ್ಸೆಯನ್ನು ಒದಗಿಸುವ ಉದ್ದೇಶದಿಂದಲೇ ಈ ಆಸ್ಪತ್ರೆ ಸ್ಥಾಪಿಸಲಾಗಿದೆ ಎಂದರು.
ಶುಭೋದಯ ಆಸ್ಪತ್ರೆಯ ಆಡಳಿತ ನಿರ್ದೇಶಕಿ ಡಾ.ಎಸ್. ರೂಪಾ, ಪಾಲಿಕೆ ಸದಸ್ಯೆ ರಜಿನಿ ಅಣ್ಣಯ್ಯ ಇದ್ದರು.