ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಕೃತಿ ಅಧ್ಯಯನ ಶಿಬಿರಕ್ಕೆ ಚಾಲನೆ

Srinivasa Murthy VN
Updated On : 15 Feb 2014, 10:28 am

ಕೆ.ಆರ್. ನಗರ: ಪ್ರತಿಯೊಬ್ಬರು ಪ್ರಕೃತಿ ಉಳಿಸಲು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಕರೆ ನೀಡಿದರು. ತಾಲೂಕಿನ ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂಗವಿಕಲ ಮಕ್ಕಳ ಎರಡು ದಿನದ ಪ್ರಕೃತಿ ಅಧ್ಯಯನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿ ನಮಗೆ ನೀಡಿರುವ ನೈಸರ್ಗಿಕ ಸಂಪತ್ತನ್ನು ಮಾನವನ ದುರಾಸೆಗೆ ನಾಶವಾಗುತ್ತಿದ್ದು, ಇದನ್ನು ತಡೆಯದೆ ಹೋದರೆ ಮನುಷ್ಯ ವಿನಾಶವಾಗಲಿದ್ದಾನೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅರಣ್ಯ ನಾಶವಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಅರಣ್ಯ ರಕ್ಷಣೆಯ ಕಾರ್ಯಕ್ರಮಗಳಿಗೆ ನಾವೆಲ್ಲ ಕೈಜೋಡಿಸುವುದು ಅತೀ ಅವಶ್ಯಕವಾಗಿದೆ. ಅರಣ್ಯ ರಕ್ಷಣೆಯಿಂದ ಪರಿಸರ ಸಂರಕ್ಷಣೆಯಾಗುವುದರ ಜೊತೆಗೆ ಮನುಕುಲದ ಉದ್ದಾರವಾಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೈದ್ಯ ಬ್ರಿಜ್ ಮೋಹನ್ ಉದ್ಘಾಟಿಸಿದರು. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 72 ಮಂದಿ ಅಂಗವಿಕಲ ಮಕ್ಕಳಿಗೆ ಐಇಆರ್ಟಿಯ ಪುಟ್ಟಸ್ವಾಮಿ, ರೇಣುಕ, ಹರೀಶ, ಪ್ರಮೀಳ ಗಾಯಿತ್ರಿ ಪ್ರಕೃತಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಜಿ.ಟಿ. ರಾಮೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಸಿ. ದೊಡ್ಡೇಗೌಡ, ಬಿಆರ್ಪಿಗಳಾದ ನಾಗರಾಜು, ಮಹದೇವ್, ಕಿರಣ್ಕುಮಾರ್, ರಾಜನಾಯಕ, ಸಿಆರ್ಪಿ ಮಂಜೇಗೌಡ ಶಿಕ್ಷಕಿ ರೇಖಾ ಇದ್ದರು.

ಧೀನದಯಾಳ್ ಪರಿನಿರ್ವಾಣ ದಿನಾಚರಣೆ
ಟಿ. ನರಸೀಪುರ: ಪಟ್ಟಣದಲ್ಲಿ ಜನಸಂಘದ ಸಂಸ್ಥಾಪಕ ಪಂಡಿತ್ ಧೀನದಯಾಳ್ ಉಪಾಧ್ಯಾಯರ ಪರಿನಿರ್ವಾಣ ದಿನ ಆಚರಿಸಲಾಯಿತು. ಪಟ್ಟಣದ ಬಾಬುಜಗಜೀವನ್ ರಾಂ ಸಮುದಾಯ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸ್ಮರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎಸ್.ಡಿ. ಮಹೇಂದ್ರ ಮಾತನಾಡಿ, ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟ ಪಂಡಿತ್ ಧೀನದಯಾಳ್ ಉಪಾಧ್ಯಾಯರು ಪರಿತ್ಯಾಗಿಗಳಾಗಿ ನಾಡಿನ ಸಂಸ್ಕೃತಿಯನ್ನು ಉಳಿಸಲು ಜನಸಂಘ ಕಟ್ಟಿದರು. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಉಪಾಧ್ಯಾಯರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಸಿ. ರಮೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು, ಕ್ಷೇತ್ರಾಧ್ಯಕ್ಷ ಕೆ.ಎಸ್. ಬಸವರಾಜು, ಹಿರಿಯ ಮುಖಂಡ ಕರೋಹಟ್ಟಿ ಮಹದೇವಯ್ಯ, ಯುವ ಮೋರ್ಚಾ ಅಧ್ಯಕ್ಷ ವಿಜಯ್ಕುಮಾರ್, ಟೌನ್ ಅಧ್ಯಕ್ಷ ಎಸ್.ದಿಲೀಪ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮೀನಾ, ವರುಣ ಯುವ ಮೋರ್ಚಾ ಅಧ್ಯಕ್ಷ ಚೋರನಹಳ್ಳಿ ಮೂರ್ತಿ, ರೈತ ಮೋರ್ಚಾ ಮಾಜಿ ಅಧ್ಯಕ್ಷ ಕೆಬ್ಬೆಹುಂಡಿ ಸೋಮಶೇಖರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement