ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಲಾಧಾರಾ ಚಿತ್ರಕಲಾ ಪ್ರದರ್ಶನ ಶುರು

Srinivasa Murthy VN
Updated On : 16 Feb 2014, 10:32 am

ಮೈಸೂರು: ವಿವಿಧ ಕಲಾವಿದರು ರಚಿಸಿ ಸಾದರ ಪಡಿಸಿರುವ ಕಲಾ ಧಾರ ಚಿತ್ರಕಲಾ ಪ್ರದರ್ಶನವು ಭಾನುವಾರ ನಜರಬಾದಿನ ಪ್ರತಿಮಾ ಗ್ಯಾಲರಿಯಲ್ಲಿ ಆರಂಭವಾಯಿತು.
ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಆಯೋಜಿಸಿರುವ ಈ ಕಲಾಪ್ರದರ್ಶನವನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಎಸ್. ನಾಗರಾಜನ್ ಉದ್ಘಾಟಿಸಿದರು. ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಎಂ. ರಾಜೇಂದ್ರ, ಪ್ರತಿಷ್ಠಾನ ಅಧ್ಯಕ್ಷ ಡಿ. ರಾಮ್‌ಸಿಂಗ್, ಕಾರ್ಯದರ್ಶಿ ಆರ್.ಜಿ. ಸಿಂಗ್ ಮತ್ತಿತರರು ಇದ್ದರು.
ಕೆಲವು ಸಾಂಪ್ರದಾಯಿಕ ಕಲಾಕೃತಿಗಳನ್ನು ಹೊರತು ಪಡಿಸಿದರೆ, ಬಹುತೇಕ ಚಿತ್ರಗಳು ಕಲಾವಿದನ ಪರಿಕಲ್ಪನೆಯಲ್ಲಿ ಮೂಡಿರುವ ಸಮಕಾಲೀನ ಕೃತಿಗಳಾಗಿವೆ. ಜಲವರ್ಣ, ತೈಲವರ್ಣ, ಅಕ್ರೆಲಿಕ್ ಕ್ಯಾನ್ವಸ್, ಕೋಲಾಜ್ ಮಾಧ್ಯಮಗಳಲ್ಲಿ ಬಿಡಿಸಿರುವ ರೇಖಾ ಚಿತ್ರ, ಸಾಂಪ್ರದಾಯಿಕ ಚಿತ್ರಪಟ, ಮೈಸೂರು ಶೈಲಿ, ಸುರಪುರ ಶೈಲಿ, ನಿಸರ್ಗಚಿತ್ರ, ನವ್ಯಕಲೆ ಸೇರಿದಂತೆ 150 ಕ್ಕೂ ಹೆಚ್ಚಿನ ಕಲಾಕೃತಿಗಳು ಪ್ರದರ್ಶಿತವಾಗಿವೆ.
ರಾಜ್ಯದ ನಾನಾ ಭಾಗಗಳ 90 ಮಂದಿ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು, 15 ದಿನಗಳಿಗೊಮ್ಮೆ ಹೊಸ ಕಲಾವಿದರು ಸೇರ್ಪಡೆಗೊಳ್ಳುವುದು ಹಾಗೂ ಹಿರಿಯ ಕಲಾವಿದರಿಂದ ಉಪನ್ಯಾಸ ಏರ್ಪಡಿಸಿರುವುದು ಕಲಾ ಧಾರಾ ವಿಶೇಷ. ಮೇ. 4 ರವರೆಗೆ ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನ ವೀಕ್ಷಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement