ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಾಲಾ ಜಾಗ ಒತ್ತುವರಿ: ಆರೋಪ

Srinivasa Murthy VN
Updated On : 16 Feb 2014, 10:34 am

ಮೈಸೂರು: ತಾಲೂಕಿನ ಜಯಪುರ ಹೋಬಳಿ ಕಲ್ಲಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ದಾನವಾಗಿ ನೀಡಲಾಗಿರುವ ಜಾಗವನ್ನು ವ್ಯಕ್ತಿಯೊಬ್ಬರು ಕಬಳಿಸಿ ಮನೆ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿಯ ಸದಸ್ಯ ಧನಗಳ್ಳಿ ಸ್ವಾಮಿ ಆರೋಪಿಸಿದರು. ಸಿದ್ದಪ್ಪ ಎಂಬವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ. ಆ ಜಾಗದಲ್ಲಿ ಮನೆ ನಿರ್ಮಿಸಲು ಅವಕಾಶ ನೀಡಬಾರದು. ದಾನವಾಗಿ ನೀಡಿರುವ ಜಾಗವನ್ನು ಸರ್ಕಾರಿ ಶಾಲೆಗೆ ವಶಪಡಿಸಿಕೊಂಡು, ಜಾಗ ಕಬಳಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಗ್ರಾಪಂ ಸದಸ್ಯ ನಾಗರಾಜು, ಮುಖಂಡರಾದ ಲಿಂಗರಾಜು, ಶಿವಣ್ಣ ಇದ್ದರು.

27 ರಂದು ಜಾತ್ರೆ
ಮೈಸೂರು: ತಾಲೂಕಿನ ಕೆ. ಹೆಮ್ಮನಹಳ್ಳಿಯ  ಮಹಾಲಿಂಗೇಶ್ವರ ದೇವಾಲಯದಲ್ಲಿ ಫೆ.27ರಂದು ಮಹಾಶಿವರಾತ್ರಿಯ ಅಂಗವಾಗಿ ವಾರ್ಷಿಕ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.
 ಪ್ರತಿ ಮೂರು ಗಂಟೆಗೆ ಒಂದರಂತೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಮಂಗಳಾರತಿಯು ಫೆ.27ರ ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರವರೆಗೆ ನಡೆಯುತ್ತದೆ.
 ಬೆಳಗ್ಗೆ 10.30ರಿಂದ ಬಾಲ ಸಂಗಮದ ಗ್ರಾಮೀಣ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಹಾಗೂ ಸಾಮೂಹಿಕ ಯೋಗದ ಮೂಲಕ ಶಿವನಮಸ್ಕಾರ ಕಾರ್ಯಕ್ರಮ ಇದೆ.

ಟೊಮೆಟೋ ಬೆಳೆಗಾರರಿಗೆ ಸಲಹೆ
ಮೈಸೂರು: ಟೊಮೆಟೋ, ಮೆಣಸಿನ ಕಾಯಿಗೆ ಹೂ ಬಿಡುವ ವೇಳೆ ವಿವಿಧ ರೋಗ ಹರಡಬಹುದು ಎಂದು ನಾಗನಹಳ್ಳಿ ಕೃಷಿ ಹವಾಮಾನ ವಿಭಾಗ ತಿಳಿಸಿದೆ. ತಿಂಗಳ ಹುರುಳಿಗೆ ನಂಜು ರೋಗ ತಗಲುವ ಸಾಧ್ಯತೆ ಇದೆ. ಈ ವೇಳೆ ಹುರುಳಿ ಬೆಳೆಯಲ್ಲಿ ನಂಜು ರೋಗ ಕಂಡುಬಂದಿದ್ದು, ಇದರ ಹತೋಟಿಗೆ ರೋಗಗ್ರಸ್ಥ ಗಿಡಗಳನ್ನು ಕಿತ್ತು ಹಾಕಬೇಕು ಮತ್ತು 5 ಮಿಲಿ ನಿಂಬಿಸಿಡಿನ್ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದಾರಜು ಮತ್ತು ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ. ಮಾಹಿತಿಗೆ ಮೊ. 8095227713, 9343532154.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement