ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸದೃಢ ಭಾರತ ನಿರ್ಮಾಣವಾಗಲಿ: ಶಾಸಕ ವಾಸು

Srinivasa Murthy VN
Updated On : 16 Feb 2014, 10:32 am

ಮೈಸೂರು: ಎಂಜಿನಿಯರ್‌ಗಳು ಸದೃಢ ಸಮೃದ್ಧ ಭಾರತ ಕಟ್ಟುವ ಶಿಲ್ಪಿಗಳಾಗಬೇಕು ಎಂದು ಶಾಸಕ ವಾಸು ಕರೆ ನೀಡಿದರು.
ಬಿಲ್‌ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆ ಎಸ್‌ಜೆಸಿಇ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಶಿಲ್ಪಿಕಪ್- 2014ರ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 100 ವರ್ಷದ ಹಿಂದೆ ನಿರ್ಮಿಸಿದ ಕಟ್ಟಡಗಳು ಈಗಲೂ ಚೆನ್ನಾಗಿದೆ. ಆದರೆ ಎಂಜಿನಿಯರ್‌ಗಳು ಮತ್ತು ತಂತ್ರಜ್ಞಾನ ಇದ್ದರೂ ಕೆ.ಆರ್. ಆಸ್ಪತ್ರೆಯಂತ ಕಟ್ಟಡ ಕಟ್ಟಲು ಸಾಧ್ಯವಾಗಿಲ್ಲ. ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿಲ್ಲ. ಕ್ರೀಡಾ ಕ್ಷೇತ್ರಮೊಂದರಲ್ಲಿ ಮಾತ್ರ ಪಕ್ಷಾತೀತ, ಜಾತ್ಯಾತೀತ ಮನೋಭಾವನೆ ಇದೆ. ಗೆದ್ದವರಿಗೆ ಅಭಿನಂದನೆ ಮತ್ತು ಸೋತವರಿಗೆ ಮತ್ತೆ ಗೆಲ್ಲುವ ಅವಕಾಶ ಇದೆ ಎಂದು  ಅಲರು ಹೇಳಿದರು. ಶಿಲ್ಪಿಕಪ್‌ನ ಸಂಚಾಲಕ ವಿ. ನಾಗರಾಜ್ ಬೈರಿ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೆಸಿಇ, ವಿದ್ಯಾವಿಕಾಸ್, ಎನ್‌ಐಇ, ಮಂಡ್ಯ ಪಿಇಎಸ್, ಎಂಐಟಿ, ಇಐಟಿ ಸೇರಿದಂತೆ ಆರು ಕಾಲೇಜುಗಳ ತಂಡ ಭಾಗವಹಿಸಲಿವೆ. ಮೊದಲ ಬಹುಮಾನವಾಗಿ ಹತ್ತು ಸಾವಿರ, ಟ್ರೋಫಿ, 2ನೇ ಬಹುಮಾನವಾಗಿ ಐದು ಸಾವಿರ ನೀಡುವುದಾಗಿ ತಿಳಿಸಿದರು. ಡಾ.ಬಿ.ಜಿ. ಸಂಗಮೇಶ್ವರ್, ಡಾ. ಸೈಯದ್‌ಶಕೀಬ್ ಉರ್ ರೆಹಮಾನ್, ಎನ್.ಪಿ. ವಿಶ್ವನಾಥ್ ಮಾತನಾಡಿದರು. ಕೆ.ಎಂ. ರಘುನಾಥ್, ಮಹಾದೇವಸ್ವಾಮಿ, ವೆಂಕಟೇಶ್ ಪ್ರಸಾದ್, ಬಿ.ಎಚ್. ರೇವಣ್ಣ ಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement