ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಹಕಾರ ಬ್ಯಾಂಕ್ ಚುನಾವಣೆ: ಬಿಜೆಪಿ ಮೇಲುಗೈ

Srinivasa Murthy VN
Updated On : 16 Feb 2014, 10:32 am

ಎಚ್.ಡಿ. ಕೋಟೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 6 ಅಭ್ಯರ್ಥಿಗಳು, ಜೆಡಿಎಸ್ ಬೆಂಬಲಿತ ನಾಲ್ವರು ಮತ್ತು ಕಾಂಗ್ರೆಸ್‌ನ ಬೆಂಬಲಿತ ಇಬ್ಬರು ಸದಸ್ಯರು ಜಯಗಳಿಸಿದ್ದು, ಆಡಳಿತಾರೂಢ ಜೆಡಿಎಸ್ ಮುಖಭಂಗ ಅನುಭವಿಸಿದೆ. ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ನ 12 ನಿರ್ದೇಶಕರ ಸ್ಥಾನಕ್ಕೆ  ಚುನಾವಣೆ ನಡೆಯಿತು. ಮಾದಪ್ಪ, ಎಚ್.ಎನ್. ಶಿವಣ್ಣ, ಸಿ.ಡಿ. ನಾಗೇಂದ್ರ, ಗಾಡಿ ಸೋಮಣ್ಣ, ದಾಸಪ್ಪ, ವಸಂತಮ್ಮ ಹಾಗು ಸಿದ್ದಪ್ಪ, ಕಸಬಾ ಹೋಬಳಿಯ 5 ಕ್ಷೇತ್ರಗಳಿಗೆ ಪ.ಜಾತಿ, ಪ.ಪಂಗಡದಿಂದ ಎಸ್. ಮಣಿ, ಮಹಿಳಾ ಕ್ಷೇತ್ರದಿಂದ ಸುಜಾತ, ಸಾಮಾನ್ಯ ಕ್ಷೇತ್ರದಿಂದ ಬಿ.ಎಂ. ಶಂಕರಲಿಂಗೇಗೌಡ, ಕೆ.ಎನ್. ಮಲ್ಲಿಕಾರ್ಜುನ, ಮಹದೇವು ಆಯ್ಕೆಯಾಗಿದ್ದಾರೆ.

'ಯುವ ಕವಿಗಳಿಗೆ ವೇದಿಕೆ ಸಿಗುತ್ತಿಲ್ಲ'
ಎಚ್.ಡಿ. ಕೋಟೆ: ಕನ್ನಡಿಗರನ್ನು ಕನ್ನಡವಂತರನ್ನಾಗಿ ಮಾಡುವ ವೇದಿಕೆಯಾಗಿ ಮನೆ ಮನೆ ಕವಿಗೋಷ್ಠಿ ರೂಪುಗೊಳ್ಳಬೇಕು ಎಂದು ಕಸ್ತೂರಿ ಜನನಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಕಸ್ತೂರಿ ಜನನಿ ಸಂಸ್ಥೆ ವತಿಯಿಂದ ಪಿರಿಯಾಪಟ್ಟಣದ ಕಂಪ್ಲಾಪುರ ಮೋಹನ್ ನೇತೃತ್ವದಲ್ಲಿ ನಡೆದ 169ನೇ ಮನೆ ಮನೆ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಅನೇಕ ಕನ್ನಡ ಕವಿಗಳಿದ್ದಾರೆ. ಆದರೆ ಅವರ ಕವಿತೆಗಳಿಗೆ ವೇದಿಕೆ ಸಿಗುತ್ತಿಲ್ಲ. ಕವಿಗಳಿಗೆ ಉತ್ತಮ ವೇದಿಕೆ ಸಿಗುವಂತೆ ಆಗಬೇಕು. ಕನ್ನಡ ಸಾಹಿತ್ಯ ಎನ್ನುವುದು ಸಾಹಿತ್ಯ ಕಾಶಿಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರು ಪ್ರಾಮಾಣಿಕ ಪ್ರಯತ್ನ ಪಡಬೇಕು. ಕನ್ನಡ ಉಪನ್ಯಾಸಕ ಆನಂದ್, ಕಸ್ತೂರಿ ಸತೀಶ್ ಮಾತನಾಡಿದರು. ಭಾಗವಹಿಸಿದ್ದ ಎಲ್ಲಾ ಕವಿಗಳಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಕಸಾಪ ಅಧ್ಯಕ್ಷ ಡಿ.ಆರ್. ಮಹೇಶ್, ಮನೆ ಮನೆ ಕವಿಗೋಷ್ಠಿಯಲ್ಲಿ ಕಂಪ್ಲಾಪುರ ಮೋಹನ್, ಸಂಚಾಲಕಿ ತ್ರಿವೇಣಿ, ಜಿ. ರವಿ, ಎಂ.ಎನ್. ರವಿಶಂಕರ್, ಮಹದೇವಪ್ಪ, ಬಿ.ವಿ. ಶ್ರೀನಿವಾಸ್, ಮಹೇಶ್, ರೇವಣ್ಣ, ಗುರುಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement