ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಾಮಾಜಿಕ ಸಂಕಷ್ಟಕ್ಕೆ ಬಂಡವಾಳಶಾಹಿ ಕಾರಣ'

Srinivasa Murthy VN
Updated On : 16 Feb 2014, 10:31 am

ಮೈಸೂರು: ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತದಿಂದ ನಿರ್ಮಾಣವಾದ ಅವ್ಯವಸ್ಥೆಯಿಂದ ಮಾನವ ಸಮಾಜ ಸಂಕಷ್ಟಕ್ಕೆ ಸಿಲುಕಿದೆ ಎಂದು ಆನಂದಮಾರ್ಗ ಪ್ರಚಾರಕ ಸಂಘದ ಮುಖ್ಯ ತರಬೇತುದಾರ ಆಚಾರ್ಯ ರಾಗಾನುರಾಗಾನಂದರು ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಆನಂದಮಾರ್ಗ ಪ್ರಚಾರಕ ಸಂಘದಲ್ಲಿ ಏರ್ಪಡಿಸಿರುವ ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ರೈತರು ತಮಗಾಗುತ್ತಿರುವ ನಷ್ಟಕ್ಕೆ ಹೆದರಿ ವ್ಯವಸಾಯ ಬಿಡುತ್ತಿದ್ದಾರೆ. ಮತ್ತೆ ಕೆಲವರು ಸಾಲದ ಸುಳಿಗೆ ಸಿಲುಕಿ ಮೇಲೇಳಲಾಗದೆ ಪ್ರಾಣ ಬಿಡುತ್ತಿದ್ದಾರೆ. ಇಂತಹ ವ್ಯವಸ್ಥೆಗೆ ಸೂಕ್ತ ಪರ್ಯಾಯವಾಗಿ ಪ್ರಗತಿಶೀಲ ಉಪಯೋಗಿ ತತ್ವ ಇದೆ ಎಂದರು.
ಪ್ರಗತಿಶೀಲ ಉಪಯೋಗಿ ತತ್ವ ಎಂದರೆ ಸರ್ವಜನ ಹಿತ ಮತ್ತು ಸರ್ವಜನ ಸುಖ ಎಂಬುದಾಗಿದೆ. ಆದ್ದರಿಂದ ಶೋಷಣೆಯನ್ನು ಪೋಷಣೆ ಮಾಡುವ ಕೆಟ್ಟ ನೀತಿಗೆ ಇಲ್ಲಿ ಆಸ್ಪದ ಇಲ್ಲ ಎಂಬುದು ನರಳುತ್ತಿರುವ ನಾಗರೀಕತೆಗೆ ಆಶಾಕಿರಣವಾಗಿದೆ. ಸಾಮಾಜಿಕ- ಆರ್ಥಿಕ ಘಟಕಗಳ ಸ್ಥಾಪನೆ, ಆ ಘಟಕಗಳ ಸಂಪನ್ಮೂಲಗಳನ್ನು ಸ್ಥಳೀಯರ ನಿಯಂತ್ರಣಕ್ಕೆ ಒಳಪಡಿಸುವುದು, ಉತ್ಪಾದನೆಯನ್ನು ಅಗತ್ಯಕ್ಕೆ ಅನುಗುಣವಾಗಿ ಮಾಡುವುದು, ಉದ್ಯೋಗಾವಕಾಶವನ್ನು ಸ್ಥಳೀಯರಿಗೆ ನೀಡುವುದು, ಹೊರಿಗಿನಿಂದ ಬಂದ ವಸ್ತುಗಳನ್ನು ಮಾರುಕಟ್ಟೆಯಿಂದ ಬಹಿಷ್ಕರಿಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ.ಜೆ. ಪಾಪೇಗೌಡ, ದೀನದಯಾಳು, ಜೆಮ್ಕೋ ವ್ಯವಸ್ಥಾಪಕ ಕೋರಾನಿ, ಚತುರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement