ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿವೃತ್ತ ಶಿಕ್ಷಕರ ಸಂಘಕ್ಕೆ ಆಯ್ಕೆ

Srinivasa Murthy VN
Updated On : 10 Jul 2014, 1:14 am

ಕೆ.ಆರ್. ನಗರ:  ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರಾಗಿ ಎಂ.ಎಸ್. ಬಸವರಾಜು ಆಯ್ಕೆಯಾಗಿದ್ದಾರೆ.
ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ 2ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜವರೇಗೌಡ, ಬಿ.ಎಂ. ಬಸವರಾಜು (ಗೌರವಾಧ್ಯಕ್ಷರು), ಎಂ.ಆರ್. ಚಂದ್ರಶೇಖರ್ (ಪ್ರಧಾನ ಕಾರ್ಯದರ್ಶಿ), ಡಿ.ಎಸ್. ಚಂದ್ರಪ್ಪ (ಸಹ ಕಾರ್ಯದರ್ಶಿ), ಚೌಡನಾಯ್ಕ (ಖಜಾಂಚಿ), ಗೋವಿಂದಯ್ಯ (ಸಾಂಸ್ಕೃತಿಕ ಕಾರ್ಯದರ್ಶಿ), ತಮ್ಮನಾಯ್ಕ (ಸಂಘಟನಾ ಕಾರ್ಯದರ್ಶಿ) ಮತ್ತು ಉತರೆ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಜನಸಂಖ್ಯಾ ದಿನಾಚರಣೆ ನಾಳೆ
ಕೆ.ಆರ್. ನಗರ: ಜಿಪಂ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜು. 11ರ ಬೆಳಗ್ಗೆ 11ಕ್ಕೆ ಪಟ್ಟಣದ ತಾಪಂ ಸಭಾಂಗಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ  ನಡೆಯಲಿದೆ.
ಶಾಸಕ ಸಾ.ರಾ. ಮಹೇಶ್ ಉದ್ಘಾಟಿಸುವರು. ತಾಪಂ ಅಧ್ಯಕ್ಷ ಸಾದಿಕ್‌ಖಾನ್ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯರಾದ ರಾಜಯ್ಯ, ನಳಿನಾಕ್ಷಿ ವೆಂಕಟೇಶ್, ಪುಷ್ಪಲತಾರಮೇಶ್, ಭಾಗವಹಿಸುವರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement