ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 28 Jul 2014, 11:29 am

ಮೈಸೂರು: ಬೆಳಗಾವಿಯಲ್ಲಿ ಪತ್ರಕರ್ತರ ಮೇಲೆ ಎಂಇಎಸ್ ಕಾರ್ಯಕರ್ತನು ನಡೆಸಿರುವ ಹಲ್ಲೆ ಖಂಡಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಮರಾಠಿ ಭಾಷೆಯಲ್ಲಿದ್ದ ನಾಮಫಲಕ ತೆರವು ಪ್ರಕರಣಕ್ಕೆ ಸಂಬಂಧಿಸಿ ವರದಿ ಮಾಡಲು ಮುಂದಾದ ವಿದ್ಯುನ್ಮಾನ ಮಾಧ್ಯಮ ಮಿತ್ರರಿಗೆ ದಿಗ್ಬಂಧನ ವಿಧಿಸಿ, ಹಲ್ಲೆ ನಡೆಸಿರುವುದು ಖಂಡನಾರ್ಹ. ಕನ್ನಡ ದ್ರೋಹಿಗಳಾದ ಸಂಬಾಜಿ ಪಾಟೀಲ್ ಮತ್ತು ಅವರ ಬೆಂಬಲಿಗರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದರು. ಪತ್ರಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಇದಕ್ಕೆ ಕೂಡಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪತ್ರಕರ್ತರು ನಿರ್ಭೀತಿಯಿಂದ ವರದಿ ಮಾಡುವಂತೆ ಆಗಬೇಕು. ವೈದ್ಯರ ಮೇಲಿನ ಹಲ್ಲೆಗೆ ನೀತಿ ರೂಪಿಸಿರುವಂತೆಯೇ ಪತ್ರಕರ್ತರ ಮೇಲಿನ ಹಲ್ಲೆಗೂ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಸಿ.ಕೆ.ಮಹೇಂದ್ರ ಒತ್ತಾಯಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್ ಗೂಂಡಾಗಳನ್ನು ಬಂಧಿಸಿ, ತಪ್ಪಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪತ್ರಕರ್ತರು ಘೋಷಣೆ ಕೂಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್ ಬಾಬು, ಉಪಾಧ್ಯಕ್ಷ ಎಸ್.ಟಿ. ರವಿಕುಮಾರ್, ನಗರ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಖಜಾಂಚಿ ಎಸ್.ಆರ್. ಮಧುಸೂದನ್, ಹಿರಿಯ ಪತ್ರಕರ್ತರಾದ ಟಿ.ವಿ.ರಾಜೇಶ್ವರ್, ಪ್ರಭುರಾಜನ್, ಕುಂದೂರು ಉಮೇಶ ಭಟ್, ರಾಮ್, ರಂಗಸ್ವಾಮಿ, ಎಂ.ಟಿ. ಯೋಗೇಶ್‌ಕುಮಾರ್, ಸಿ.ದಿನೇಶ್, ಗಿರೀಶ್ ದೊಡ್ಡಮನಿ, ಜಯಂತ್, ಸುಬ್ರಹ್ಮಣ್ಯ, ಧನ್ಯಪ್ರಸಾದ್, ಎಂ.ರವಿ, ಸದೇಶ್ ಕಾರ್ಮಾಡ್, ಪಾಂಡವಪುರ ರವಿ, ದಕ್ಷಿಣಾಮೂರ್ತಿ ಬಾಬು, ಎಂ.ಬಿ. ಜಯಶಂಕರಸ್ವಾಮಿ, ಅನುರಾಗ್ ಬಸವರಾಜ್, ಕೆ.ಬಿ. ರಮೇಶ್‌ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement