ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಾಮಾಣಿಕ ಸೇವೆ ಒಂದೇ ಕೊನೆತನಕ ಉಳಿಯೋದು

Srinivasa Murthy VN
Updated On : 28 Jul 2014, 11:29 am

ಬೈಲಕುಪ್ಪೆ: ಪೊಲೀಸ್ ಸಿಬ್ಬಂದಿ ತಮ್ಮ ಸೇವಾವಧಿಯಲ್ಲಿ ಮಾಡಿದ ಪ್ರಾಮಾಣಿಕ ಸೇವೆಯೇ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್ ಹೇಳಿದರು. ಾನುವಾರ ಬೈಲಕುಪ್ಪೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಠಾಣೆಯಿಂದ ವಿವಿಧ ಸ್ಥಳಗಳಿಗೆ ವರ್ಗಾವಣೆಯಾದ ಸಿಬ್ಬಂದಿಗೆ ಬೀಳ್ಕೊಡುಗೆ ನೀಡಿ ಮಾತನಾಡಿದ ಅವರು, ಗ್ರಾಮೀಣದ ಪ್ರದೇಶಗಳಲ್ಲಿ ನೂರಾರು ಅಪರಾಧಗಳು ವಿವಿಧ ರೀತಿಯಲ್ಲಿ ನಡೆಯುತ್ತಿವೆ. ಇದರಲ್ಲಿ ನೊಂದ ಜೀವಿಗಳು ನ್ಯಾಯಕ್ಕಾಗಿ ಮೂದಲು ಆಶ್ರಯಿಸುವುದು ಪೊಲೀಸರನ್ನು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರೀತಿ ಮತ್ತು ತಾಳ್ಮೆಯಿಂದ ವರ್ತಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರು. ಬೆಟ್ಟದಪುರ ಎಸ್‌ಐ ಅನಿಲ್‌ಕುಮಾರ್, ಬೈಲಕುಪ್ಪೆ ಎಸ್‌ಐ ಎಂ.ಮುದ್ದುಮಹದೇವ್, ಸಿಬ್ಬಂದಿ ಭಾಸ್ಕರ್, ವಿಜಯೇಂದ್ರ, ಮನೋಹರ್, ಮಹದೇವ್, ನಿಂಗರಾಜು, ಜಗದೀಶ್, ಅನಿತಾ ಇದ್ದರು.

ವಿದ್ಯಾರ್ಥಿ ಸಂಘ ಉದ್ಘಾಟನೆ
ಸುತ್ತೂರು: ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಮೈಸೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಸಿ. ಚಾಮೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೆಎಸ್‌ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎಳವೆಯಲ್ಲೇ ರೂಢಿಸಿಕೊಳ್ಳಲು ವಿದ್ಯಾರ್ಥಿ ಸಂಘದ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಮೈಸೂರು ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.(ಕರ್ನಲ್) ಆರ್.ಕೆ. ಚತುರ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸರ್ವ ಸ್ವತಂತ್ರನಾಗಿ ಜೀವಿಸಲು ಅವಕಾಶವಿದೆ. ದೇಶ ಬಲಿಷ್ಠವಾಗಬೇಕಾದರೆ, ವಿದ್ಯಾರ್ಥಿ ದೆಸೆಯಿಂದಲೇ ಯುವಕರು ರಾಷ್ಟ್ರಾಭಿಮಾನ ಮೂಢಿಸಿಕೊಳ್ಳಬೇಕು. ಸೇನೆಯ ವಿವಿಧ ವಿಭಾಗಗಳಿಗೆ ಪುರುಷ ಹಾಗೂ ಮಹಿಳೆಯರು ಸೇರುವ ಮೂಲಕ ರಾಷ್ಟ್ರ ಸೇವೆ ಮಾಡಬೇಕು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತರುವಂತಾಗಬೇಕು ಎಂದು ಆಶಿಸಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಶಿವಮಲ್ಲು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಸಿದ್ಧಪ್ಪ ಇದ್ದರು.

ರೈತರಿಗೆ ಬಿತ್ತನೆ ಬೀಜ ವಿತರಣೆ
ಟಿ. ನರಸೀಪರು: ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಸಂಘದಿಂದ ಸಮರ್ಪಕವಾಗಿ ವಿತರಿಸಲಾಗಿದೆ ಎಂದು ಸೋಸಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ ಹೇಳಿದರು. ತಾಲೂಕಿನ ಸೋಸಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ಮಳೆ ತಡವಾಗಿ ಆರಂಭವಾದರೂ ಈ ಭಾಗದ ಜಲಾಶಯಗಳು ಭರ್ತಿಯಾಗಿರುವುದರಿಂದ ಸದ್ಯದಲ್ಲಿಯೇ ಮುಂಗಾರು ಕೃಷಿ ಆರಂಭಗೊಳ್ಳುವ ಹಿನ್ನೆಲೆ ಬಿತ್ತನೆ ಬೀಜ ವಿತರಣೆಗೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ತಾಪಂ ಸದಸ್ಯೆ ಜಯಲಕ್ಷ್ಮೀಕುಮಾರ್, ಕೃಷಿ ಅಧಿಕಾರಿ ಎಚ್.ಎಸ್. ಸುಧಾ, ಗ್ರಾಪಂ ಅಧ್ಯಕ್ಷ ಮಹೇಶ, ಸದಸ್ಯ ಕೆ. ಬಸವರಾಜು, ಸಂಘದ ನಿರ್ದೇಶಕ ಎಸ್.ಪಿ. ಸುಂದರ್, ಮುಖಂಡ ಉಕ್ಕಲಗೆರೆ ರಾಜು, ಸೋಮಣ್ಣ, ಧರ್ಮರತ್ನ ಕುಮಾರ, ಸಿದ್ದಯ್ಯ ಇದ್ದರು.

ವೆಂಕಟಯ್ಯ ನಿಧನ
ಸುತ್ತೂರು: ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ದಲ್ಲಾಳಿ ವೆಂಕಟಯ್ಯ (65) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಅಂಬೇಡ್ಕರ್ ಯುವಕ ಸಂಘದ ಮಾಜಿ ಅಧ್ಯಕ್ಷ ಲಿಂಗರಾಜು ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement