ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರೀನ್‌ಬಡ್ಸ್ ಕಂಪನಿ ವಿರುದ್ಧ ಕ್ರಮಕ್ಕೆ ಮನವಿ

Srinivasa Murthy VN
Updated On : 1 Jun 2014, 11:51 am

ಕ.ಪ್ರ.ವಾರ್ತೆ ಮೈಸೂರು ಜೂ.1
ಗ್ರಾಹಕರಿಗೆ ವಂಚಿಸಿರುವ ಗ್ರೀನ್‌ಬಡ್ಸ್ ಆಗ್ರೋ ಫಾರಂ ಕಂಪನಿ ವಿರುದ್ಧ ದಿ ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟರಿ ಇನ್ ಫೈನ್ಷಾಷಿಯಲ್ ಎಸ್ಟಾಬ್ಲಿಮೆಂಟ್ ಆ್ಯಕ್ಟ್- 2004 ಅನ್ವಯ ಸೂಕ್ತ ಕ್ರಮ ಕೈಗೊಳ್ಳಲು ನೊಂದವರು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರೀನ್‌ಬಡ್ಸ್ ಸಂಸ್ಥೆಯಲ್ಲಿ ಗ್ರಾಹಕರು ಕೋಟ್ಯಂತರ ರು. ಹೂಡಿಕೆ ಮಾಡಿದ್ದಾರೆ. ಆದರೆ, ಹೂಡಿಕೆದಾರರಿಗೆ ಹಣ ಹಿಂದಿರುಗಿಸದೇ ಸಂಸ್ಥೆಯ ಮುಖ್ಯಸ್ಥ ಬಿ.ಎಲ್.ರವೀಂದ್ರನಾಥ್, ಕಾರ್ಯದರ್ಶಿ ಗಾಯತ್ರಿ ಎಂಬವರು ತಲೆಮರೆಸಿಕೊಂಡಿದ್ದಾರೆ. ಸಂಸ್ಥೆಯು ಕೋಟ್ಯಂತರ ಆಸ್ತಿ ಹೊಂದಿದೆ. ಹೀಗಾಗಿ ಗ್ರೀನ್ಸ್‌ಬಡ್ಸ್ ಮುಖ್ಯಸ್ಥರ ಹೆಸರಿನಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿ, ಗ್ರಾಹಕರಿಗೆ ಹಣ ಹಿಂದಿರುಗಿಸಲು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನೊಂದ ಗ್ರಾಹಕರಾದ ಜಿ.ವಿ. ಲಕ್ಷ್ನಿದೇವಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಎಸ್. ಶಿವಪ್ಪ, ಮಂಜುನಾಥ್, ಎ. ನಾಗರಾಜ್, ಬಸವರಾಜು ಪುರುಷೋತ್ತಮ್ ಕೋರಿದ್ದಾರೆ.್ಙ

ಯಕ್ಷಗಾನ ಬೆಳವಣಿಗೆ ಕುಂಠಿತ
ಕ.ಪ್ರ.ವಾರ್ತೆ ಮೈಸೂರು ಜೂ.1
ಯಕ್ಷಗಾನದ ಬೆಳವಣಿಗೆಯು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಲೇಖಕ ಹಾಗೂ ವಿಮರ್ಶಕ ವಿದ್ವಾನ್ ಗ.ನಾ.ಭಟ್ ಅಭಿಪ್ರಾಯಪಟ್ಟರು. ಕರಾವಳಿ ಯಕ್ಷಗಾನ ಕೇಂದ್ರವು ಸರಸ್ವತಿಪುರಂನ ವಿಜಯ ವಿಠಲ ವಿದ್ಯಾಶಾಲೆಯಲ್ಲಿ ಆಯೋಜಿಸಿರುವ ಯಕ್ಷಗಾನ ನಾಟ್ಯ ತರಗತಿಗಳ ಉದ್ಘಾಟನೆಯಲ್ಲಿ ಭಾನುವಾರ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಕ್ಷಗಾನ ಸಮೃದ್ಧವಾದ ಕಲೆ. ಆದರೆ ಇತ್ತೀಚೆಗೆ ಆ ಕಲೆಯನ್ನು ಕೇವಲ ವೇಷಭೂಷಣ ತೊಟ್ಟರೆ ಸಾಕು ಎಂಬಂತೆ ಬಿಂಬಿಸಿ ಅದರ ಮಹತ್ವ ಹಾಳು ಮಾಡಲಾಗುತ್ತಿದೆ. ಆ ವೇಷ ಹಾಕಿದವರು ಸಂಭಾಷಣೆಯಾಗಲಿ ಅಥವಾ ಅಭಿನಯವಾಗಲಿ ಇಲ್ಲದೆ ಪಾತ್ರಕ್ಕೆ ಅಪಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ. ಪ್ರಸಿದ್ಧ ಕಲೆಯನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ವಿಷಾದಿಸಿದರು. ಶೈಕ್ಷಣಿಕ ಸ್ವರೂಪವನ್ನು ಯಕ್ಷಗಾನ ಕಲೆ ಪಡೆದುಕೊಳ್ಳಬೇಕು. ಸೈದ್ಧಾಂತಿಕ ಪ್ರಾಯೋಗಗಳು ಹೆಚ್ಚಾಗಿ ನಡೆಯಬೇಕು. ಪ್ರದರ್ಶನವನ್ನು ಸುಂದರವಾಗಿಸಲು ಬೇಕಾದ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ತರಬೇತಿ ಶಾಲೆಗಳು ಮುಂದಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮವನ್ನು ಹಿರಿಯ ಲೆಕ್ಕ ಪರಿಶೋಧಕ ಜಿ.ಎನ್. ಅನಂತವರ್ಧನ ಉದ್ಘಾಟಿಸಿದರು. ಲ್ಯಾಬ್ ಲ್ಯಾಂಡ್‌ನ ಅಧ್ಯಕ್ಷ ಸುಧೀರ್ ಶೆಟ್ಟಿ, ಕರಾವಳಿ ಯಕ್ಷಗಾನ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಅಚ್ಲಾಡಿ ಬಾಲಕೃಷ್ಣ ಶೆಟ್ಟಿ, ಕಲಾವಿದೆ ಯೋಗೇಶ್ ಮುಖ್ಯ ಅತಿಥಿಗಳಾಗಿದ್ದರು. ಕೇಂದ್ರದ ಅಧ್ಯಕ್ಷ ವಿದ್ವಾನ್ ಕೈ. ಕೃಷ್ಣಕುಮಾರಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಧರ್ಮಸ್ಥಳ ಸ್ವಾಗತಿಸಿದರು. ಪ್ರದೀಪ್ ವಿ. ಸಾಮಗ ವರದಿ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement