ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಒಡೆಯರ್ ಜಯಂತಿ ನಾಳೆ

Srinivasa Murthy VN
Updated On : 3 Jun 2014, 12:03 pm

ಮೈಸೂರು: ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಲಿಯು ಜೂ.4ರ ಬೆಳಗ್ಗೆ 9ಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 130ನೇ ಜಯಂತಿ ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾ ಟಿಸುವರು. ನಂತರ ಮೆರವಣಿಗೆ ಹೊರಟು ಅಗ್ರಹಾರ, ಸಯ್ಯಾಜಿರಾವ್ ರಸ್ತೆ ಮೂಲಕ ಕೆ.ಆರ್. ವೃತ್ತಕ್ಕೆ ತಲುಪಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಗುವುದು. ಬಳಿಕ ಜಿಲ್ಲಾಡಳಿತವು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಜಯಂತಿಯಲ್ಲಿ ಭಾಗವಹಿಸುವುದಾಗಿ ಅರಸು ಮಂಡಲಿ ಅಧ್ಯಕ್ಷ ಎನ್.ಎಸ್. ದಾಸರಾಜೇ ಅರಸ್ (ಉದಯ್) ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂದು ಸರ್ಕಾರವು ಸಾರ್ವತ್ರಿಕ ರಜೆ ಘೋಷಿಸಬೇಕು. ಹಾರ್ಡಿಂಜ್ ವೃತ್ತದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಸ್ಥಾಪಿಸಿ ಶೀಘ್ರವಾಗಿ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು. ಮಂಡಲಿ ಉಪಾಧ್ಯಕ್ಷೆ ಪಿ.ಸುಚಿತ, ಗೌರವ ಕಾರ್ಯದರ್ಶಿ ಎಂ.ವಿ. ಮಲ್ಲರಾಜೇ ಅರಸ್ ಇದ್ದರು.
ಸೈನಿಕ ದಳದಿಂದ...: ಸಮತಾ ಸೈನಿಕ ದಳವು ಜೂ.4 ರಂದು ಮಧ್ಯಾಹ್ನ 12ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಏರ್ಪಡಿಸಿದೆ, ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮೊದಲಾದವರು ಭಾಗವಹಿಸುವರು ಎಂದು ಆಲಗೂಡು ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಮೈಸೂರು: ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ವಿಶ್ವಮಾನವ ಜೋಡಿ ರಸ್ತೆ ಮತ್ತು ಬಲ್ಲಹಳ್ಳಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಜೂ.4ರ ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ನಗರದ ದಟ್ಟಗಳ್ಳಿ 3ನೇ ಹಂತ, ತ್ರಿವೇಣಿ ಸೂಪರ್ ಮಾರ್ಕೆಟ್ ಸುತ್ತಮುತ್ತ, ಕದಂಬ ಬೇಕರಿ ಸುತ್ತಮುತ್ತ, ಮುಖ್ಯ ಎಂಜಿನಿಯರ್ ಕಚೇರಿ ಸುತ್ತಮುತ್ತ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಸೆಸ್ಕ್ ಇಇ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement