ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆರಾಧ್ಯ ಮಹಾಸಭಾದಿಂದ ಅವಾಂತರ

Srinivasa Murthy VN
Updated On : 4 Jun 2014, 9:49 am

ಮೈಸೂರು: ಆರಾಧ್ಯ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಸ್ಥಾಪಿಸಲ್ಪಟ್ಟ ಆರಾಧ್ಯ ಮಹಾಸಭಾವು ಹಲವು ಅವಾಂತರಗಳನ್ನು ಸೃಷ್ಟಿಸಿಕೊಂಡಿದೆ ಎಂದು ಮಹಾಸಭಾದ ಮಾಜಿ ಅಧ್ಯಕ್ಷ ಪಿ.ನಾಗಭೂಷಣ ಆರಾಧ್ಯ ಆರೋಪಿಸಿದ್ದಾರೆ.
1920 ರಲ್ಲಿ ಸ್ಥಾಪಿತವಾದ ಮಹಾಸಭಾಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆದು 15 ಜನಪ್ರತಿನಿಧಿಗಳು 3 ವರ್ಷದ ಅವಧಿಗೆ ಚುನಾಯಿತರಾಗಿ ಆಡಳಿತ ಮಾಡಬೇಕು. ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯ ಅವಧಿ ಕಳೆದ 2013ರ ಅ.2ಕ್ಕೆ ಕೊನೆಗೊಳ್ಳಬೇಕಿತ್ತು. ಆದರೂ ಅಕ್ರಮವಾಗಿ ಮುಂದುವರಿಯುತ್ತಿದ್ದಾರೆ. ಈ ಹಿಂದೆ ಸದಸ್ಯತ್ವ ಪಡೆದಿದ್ದ 700 ಮಂದಿ ಸದಸ್ಯರನ್ನು ವಿನಾಕಾರಣ ಕೈಬಿಟ್ಟಿದ್ದಾರೆ. ಇಂತಹ ದುರಾಡಳಿತದಿಂದ ಸಭಾ ಅಧೋಗತಿಗೆ ಇಳಿಯುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಕಿರುಕುಳ: ಆರಾಧ್ಯ ವಿದ್ಯಾರ್ಥಿನಿಲಯದಲ್ಲಿನ ವಿದ್ಯಾರ್ಥಿಗಳ ಮೇಲೆ ಹಾಲಿ ಆಡಳಿತ ಮಂಡಳಿಯವರು ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಅಲ್ಲದೇ ಆಡಳಿತ ಮಂಡಳಿ ಸದಸ್ಯರು ಕಾಲ ಕಾಲಕ್ಕೆ ಸಭೆ ನಡೆಸುತ್ತಿಲ್ಲ. ಅನುಮೋದನೆ ಪಡೆಯದೆ ಲಕ್ಷಾಂತರ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕಳೆದ 2011-12 ರವರೆಗೂ ಮಹಾಸಭಾವು ಲಾಭದಿಂದಲೇ ನಡೆಯುತ್ತಿತ್ತು. ಆದರೆ, 2012-13ನೇ ಸಾಲಿನಲ್ಲಿ 40,522 ನಷ್ಟ ದಾಖಲಾಗಿದೆ. ಪ್ರಸಕ್ತ ವರ್ಷದ ಬಗ್ಗೆ ಮಾಹಿತಿ ಕೇಳಿದರೆ ಲಭ್ಯವಿಲ್ಲ ಎನ್ನುತ್ತಾರೆ ಎಂದು ದೂರಿದರು.
8 ರಂದು ಸಭೆ: ಆರಾಧ್ಯ ಮಹಾಸಭಾವು ಒಳ್ಳೆಯ ಗುರಿ ಮತ್ತು ಉದ್ದೇಶದೊಂದಿಗೆ ಆರಂಭವಾಯಿತು. ಆದರೆ, ಈಗಿರುವ ಆಡಳಿತ ಮಂಡಳಿಯವರ ದುರ್ನಡತೆಯಿಂದ ಅನ್ಯಮಾರ್ಗದತ್ತ ಸಾಗುತ್ತಿದೆ. ಆದ್ದರಿಂದ ಆರಾಧ್ಯ ಸಮಾಜದವರು ಒಟ್ಟಿಗೆ ಕುಳಿತು ಚರ್ಚಿಸಿ ಮಹಾಸಭಾ ಉಳಿಸಬೇಕಾಗಿದೆ. ಈ ಸಂಬಂಧ ಜೂ.8 ರಂದು ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement