ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸತ್ಸಂಗದಿಂದ ಜ್ಯೋತಿ ಕಾಣಬಹುದು

Srinivasa Murthy VN
Updated On : 4 Jun 2014, 9:48 am

ಕ.ಪ್ರ.ವಾರ್ತೆ ಮೈಸೂರು ಜೂ.4
ಸತ್ಸಂಗದಿಂದ ಪ್ರತಿಯೊಬ್ಬರಲ್ಲೂ ಜ್ಯೋತಿ ಕಾಣಬಹುದು ಎಂದು ನಿಜಗುಣ ಸತ್ಸಂಗ ಬಳಗದ ಸದಾಶಿವು ಹೇಳಿದರು.
ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ನಡೆದ ಶಿವಾನುಭವ ದಾಸೋಹ ಮಾಲಿಕೆಯ 199ನೇ ಉಪನ್ಯಾಸದಲ್ಲಿ ಜ್ಯೋತಿ ಬೆಳಗುತ್ತಿಗೆ ಎಂಬ ವಿಷಯವಾಗಿ ಮಾತನಾಡಿದ ಅವರು, ವೇದ, ಉಪನಿಷತ್ತು, ಆಗಮನಗಳ ಸಾರವನ್ನು ಕನ್ನಡ ಧಾರ್ಮಿಕ ಗ್ರಂಥಗಳ ಮೂಲಕ ನಿಜಗುಣ ಶಿವಯೋಗಿಗಳು ಮುಮುಕ್ಷುಗಳಿಗೆ ನೀಡಿರುತ್ತಾರೆ. ಜ್ಞಾನಮಾರ್ಗದಿಂದ ಆಧ್ಯಾತ್ಮಿಕತೆ ಬೆಳೆಸಿಕೊಂಡು ಭಗವಂತನ ಸಾಕ್ಷಾತ್ಕಾರ ಪಡೆದಾಗ ಜೀವಿಗೆ ಮುಕ್ತಿ ಲಭಿಸುತ್ತದೆ ಎಂದು ತಿಳಿಸಿದರು.
ಇಂಡಿಯನ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಎ.ಚನ್ನೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಉಪನ್ಯಾಸಗಳು ಜನತೆಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದರ ಜೊತೆಗೆ ಸಮಾಜದಲ್ಲಿ ಧಾರ್ಮಿಕತೆಯನ್ನು ಬಿತ್ತುತ್ತವೆ. ಜ್ಯೋತಿಯು ಕತ್ತಲನ್ನು ಹೋಗಲಾಡಿಸುವಂತೆ, ನಮ್ಮಲ್ಲಿರುವ ಅಜ್ಞಾನಾಂಧಕಾರ ಹೂರಹಾಕಲು ಈ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿವರಾತ್ರಿ ರಾಜೇಂದ್ರ ಕಲಾ ತಂಡದವರಿಂದ ಭಜನೆ ನಡೆಯಿತು. ಪ್ರೊ.ಪಿ.ಎಂ. ಮಹದೇವಸ್ವಾಮಿ ನಿರೂಪಿಸಿದರು. ನಗರ್ಲೆ ಶಿವಕುಮಾರ ಸ್ವಾಗತಿಸಿದರು. ಗುರುಬಸಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement