ಭೂ ತಾಪಮಾನದಿಂದ ಮಳೆ ಕುಂಠಿತ
ಮೈಸೂರು: ಭೂಮಿಯ ತಾಪಮಾನ ಹೆಚ್ಚಾಗಿ ಮಳೆಯ ಪ್ರಮಾಣ ಕುಂಠಿತವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಹೇಳಿದರು.
ಒಡಿಪಿ ಸಂಸ್ಥೆಯು ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರ ಕುರಿತು ಮಾತನಾಡಿದರು.
ಅರಣ್ಯ ನಾಶದಿಂದಾಗಿ ಭೂಮಿಯ ತಾಪಮಾನ ಹೆಚ್ಚಾಗಿ ಮಳೆಯ ಪ್ರಮಾಣ ಕುಂಠಿತವಾಗಿದೆ. ಶೇ.33ರಷ್ಟು ಅರಣ್ಯ ಮತ್ತು ಶೇ.33 ರಷ್ಟು ಕೈಗಾರಿಕೆ ಹೊಂದಿದ್ದು ಮಾತ್ರ ಅಭಿವೃದ್ಧಿ ರಾಷ್ಟ್ರದ ಸಂಕೇತ. ಆದರೆ ಭಾರತದಲ್ಲಿ ಶೇ.22 ರಷ್ಟು ಕಾಡಿದೆ. ಆದರೆ ಜನಸಂಖ್ಯೆ ಸ್ಫೋಟ, ಅರಣ್ಯ ಒತ್ತುವರಿ, ರಸ್ತೆ ವಿಸ್ತರಣೆ, ಕೈಗಾರಿಕ ಅಭಿವೃದ್ಧಿಯಿಂದಾಗಿ ಅರಣ್ಯ ನಾಶವಾಗುತ್ತಿದೆ. ಇದರಿಂದಾಗಿ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಆದ್ದರಿಂದ ಅರಣ್ಯ ಇಲಾಖೆಯು ರೈತರಿಗೆ ಅನೇಕ ಪ್ರೋತ್ಸಾಹದಾಯಕ ಯೋಜನೆ ಕೈಗೆತ್ತಿಕೊಂಡಿದೆ. 150ಕ್ಕೂ ಹೆಚ್ಚು ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದೆ ಎಂದರು.
ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ ಅರಣ್ಯ ಸಂಪತ್ತನ್ನು ಹೆಚ್ಚುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಷಪ್ ಥಾಮಸ್ ಆಂಥೋಣಿ ವಾಜಪಿಳ್ಳೆ ಅಧ್ಯಕ್ಷತೆ ವಹಿಸಿದ್ದರು. ಒಡಿಪಿ ನಿರ್ದೇಶಕ ಸ್ವ್ಯಾನಿ ಡಿ ಅಲ್ಮೇಡಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸೆಲ್ವಿ ಮುರುಗೇಶ್, ಒಡಿಪಿ ಉಪಾಧ್ಯಕ್ಷ ಎನ್.ಎಸ್. ಮರಿಯಾ ಜೋಸೆಫ್ ಇದ್ದರು.
ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಮೈಸೂರು: ನಗರದ ಸರಸ್ವತಿಪುರಂನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮಾದರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಪ್ರವೇಶಕ್ಕಾಗಿ ಪಿಯುಸಿ, ಪದವಿ, ಡಿಪ್ಲೋಮಾ, ಎಂಬಿಬಿಎಸ್ ಇತ್ಯಾದಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿ ರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ,ಎಸ್ಸಿ, ಎಸ್ಟಿ, ಸಾಮಾನ್ಯ ವರ್ಗದ ವಿದ್ಯಾರ್ಥಿನಿಲಯದಿಂದ ಅರ್ಜಿ ಪಡೆಯಬೇಕು. ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇ ಲಾಖೆ, ಮೈಸೂರು. ದೂ.2342917 ಸಂಪರ್ಕಿಸಿ.