ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪತ್ರಕರ್ತರ ಭವನ ಪರಿಶೀಲಿಸಿದ ಗೋಮ

Srinivasa Murthy VN
Updated On : 15 Jun 2014, 10:47 am

ಕೆ.ಆರ್. ನಗರ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನಕ್ಕೆ 2.5 ಲಕ್ಷ ಅನುದಾನ ನೀಡುವುದಾಗಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಭರವಸೆ ನೀಡಿದರು. ಭವನದ ಕಾಮಗಾರಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡ ಅವರು, ಕಟ್ಟಡದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ಮಾಣವಾದ ನಂತರ ಸಾರ್ವಜನಿಕರ ಅನುಕೂಲಕ್ಕೆ ಮತ್ತು ನೋವಿಗೆ ಸ್ಪಂದಿಸುವ ಕೇಂದ್ರವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಪತ್ರಕರ್ತರ ಭವನದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಓದುಗರಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭಿಸುವಂತೆ ಸಲಹೆ ನೀಡಿದ ಗೋ.ಮಧುಸೂದನ್, ಪತ್ರಕರ್ತರು ಸದಾ ಸಮಾಜಮುಖಿ ಕೆಲಸ ಮಾಡಿ ನೊಂದವರ ನೆರವಿಗೆ ಬನ್ನಿ ಎಂದು ಕರೆ ನೀಡಿದರು. ಸಂಘದ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಭಾಕರ್ ಜೈನ್, ಖಜಾಂಚಿ ಡಾ.ದೇವಪಾಲ್, ಪುರಸಭಾ ಮಾಜಿ ಸದಸ್ಯ ರವಿ, ಪತ್ರಕರ್ತರಾದ ಜಿ.ಕೆ.ನಾಗಣ್ಣ, ಪಂಡಿತ್ ನಾಟೀಕರ್, ಕೆ.ಆರ್. ಶ್ರೀನಿವಾಸ್, ಯೋಗಾನಂದ ಇದ್ದರು.

ಬೃಹತ್ ಆರೋಗ್ಯ, ಉದ್ಯೋಗ ಮೇಳ ಇಂದು
ಹುಣಸೂರು: ಶಾಸಕ ಎಚ್.ಪಿ.ಮಂಜುನಾಥ್ ಅವರ 48ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸೇಹ್ನಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಭಾರತ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜೂ.16 ರಂದು ಪಟ್ಟಣದ ಪುರಸಭಾ ಮೈದಾನದಲ್ಲಿ ಬೃಹತ್ ಆರೋಗ್ಯ ಶಿಬಿರ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೈಸೂರಿನ ಬೃಂದಾವನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರಣ್ಯ ಆಸ್ಪತ್ರೆ, ಹೃದಯ ರೋಗ, ಸ್ತ್ರೀ ರೋಗ, ಮೂಳೆ ರೋಗ, ಮೂತ್ರ ಕೋಶ ತೊಂದರೆ, ನರರೋಗ, ಸೇರಿದಂತೆ ಎಲ್ಲಾ ಕಾಯಿಲೆಗಳ ತಪಾಸಣೆ ಹಾಗೂ ಮೈಸೂರಿನ ಭಗವಾನ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ತಪಾಸಣೆ ಹಾಗೂ ಬೆಂಗಳೂರಿನ ಗ್ರೇಸ್ ರಕ್ತನಿಧಿ, ಲಯನ್ಸ್ ಕ್ಲಬ್ ಆಫ್ ಜಯನಗರ ಹಾಗೂ ಮೈಸೂರಿನ ಜೀವದಾರ ರಕ್ತನಿಧಿ ಕೇಂದ್ರದ ವತಿಯಿಂದ ರಕ್ತಗುಂಪು ಪತ್ತೆಹಚ್ಚುವಿಕೆ ಸೇರಿದಂತೆ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ಆಯೋಜಕರಾದ ಆರ್. ಆನಂದ್, ಎನ್.ಎಸ್. ಚಂದ್ರಶೇಖರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement