ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರಲ್ಲೂ ಮಂಡೂರು!

Srinivasa Murthy VN
Updated On : 15 Jun 2014, 10:48 am

ವಿಜಯನಗರ ಬಡಾವಣೆಯೂ ಕಸಕಾಶಿ
ಕ.ಪ್ರ. ವಾರ್ತೆ, ಮೈಸೂರು, ಜೂ.15
ನಗರದ ವಿಜಯನಗರ ಬಡಾವಣೆಗೂ ಕಸದ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿನ ಮಂಡೂರು ಗ್ರಾಮಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ.ವಿಜಯನಗರ ರೇಲ್ವೆ ಬಡಾವಣೆಯ ಸಿಎ ನಿವೇಶನವನ್ನು ಬಡಾವಣೆಯ ಹುಡುಗರು ಆಟದ ಮೈದಾನ ಮಾಡಿಕೊಂಡಿದ್ದಾರೆ. ಈ ಪೈಕಿ ಒಂದು ಭಾಗದಲ್ಲಿ ಸಮುದಾಯ ಭವನ ನಿರ್ಮಾಣವಾಗಿದೆ. ಈ ಸಮುದಾಯ ಭವನದ ಎದುರಿನ ಖಾಲಿ ಜಾಗ ನೋಡಿದರೆ ಮಂಡೂರು ನೆನಪಿಗೆ ಬರುತ್ತದೆ.ಒಂದೆರಡು ವರ್ಷಗಳ ಕೆಳಗೆ ಪಾಲಿಕೆ ಸಿಬ್ಬಂದಿ ಬಡಾವಣೆಯ ಹಾಗೂ ಸುತ್ತಮುತ್ತಲಿನ ಮೊಹಲ್ಲಾಗಳ ಕಸವನ್ನು ಇಲ್ಲಿ ತಂದು ಸುರಿಯ ತೊಡಗಿದರು. ಕೇಳಿದವರಿಗೆ ಇದು ಕೇವಲ ತಾತ್ಕಾಲಿಕ ವ್ಯವಸ್ಥೆ, ಭವಿಷ್ಯದಲ್ಲಿ ಇದು ಇಲ್ಲಿ ಮುಂದುವರಿಯದು ಸ್ವಲ್ಪ ಸಹಿಸಿಕೊಳ್ಳಿ ಎಂಬ ಆಶ್ವಾಸನೆಯನ್ನೂ ನೀಡಿ ನಾಗರಿಕರ ಬಾಯಿ ಮುಚ್ಚಿಸಿದರು.
ಇದು ಕೇವಲ ವಿಜಯನಗರ ಬಡಾವಣೆಯ ಕಸ ಮಾತ್ರ ಆಗಿರದೆ ಸುತ್ತಮುತ್ತಲ ವಸತಿ ಪ್ರದೇಶದ ಕಸ ಸಂಗ್ರಹಣೆಯ ಶಾಶ್ವತ ಸ್ಥಳವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಸ ಹೊತ್ತ ಪಾಲಿಕೆಯ ಹತ್ತಾರು ಆಪೆ ಆಟೋಗಳು, ಎಲ್ಲ ದಿಕ್ಕುಗಳಿಂದ ಕಸ ಸಂಗ್ರಹಿಸಿ ಇಲ್ಲಿ ತಂದು ಸುರಿಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಇಡೀ ಬಡಾವಣೆಯೇ ಗಬ್ಬು: ಹೀಗೆ ಸಂಗ್ರಹಗೊಂಡ ಕಸ ಕೊಳೆತು ಇಡೀ ಬಡಾವಣೆಯನ್ನು ಗಬ್ಬುಗೊಳಿಸಿದೆ. ಸಮೀಪದಲ್ಲಿಯೆ ದೇವಸ್ಥಾನ ಮತ್ತು ಉದ್ಯಾನ ಇದೆ. ವಾಯುವಿಹಾರಕ್ಕೆ ಬಂದವರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇದೆ. ಈ ಕಸದ ರಾಶಿ ಬೆಟ್ಟದಷ್ಟು ಬೆಳೆದ ನಂತರ, ಲಾರಿಯೊಂದು ಬಂದು ಇದನ್ನು ಊರಿನಾಚೆಗೆ ಒಯ್ಯುವ ಕೆಲಸ ನಡೆಯುತ್ತದೆ. ಅಲ್ಲಿಯವರೆಗೆ ಬಡಾವಣೆಯ ನಾಗರಿಕರಿಗೆ ದುರ್ವಾಸನೆ ಉಚಿತ. ಹಲವಾರು ಬಾರಿ, ಇಲ್ಲಿ ಹರಡಿರುವ ಕಸವನ್ನು ವಿಂಗಡಿಸಿ, ಪೌರ ಕಾರ್ಮಿಕರಿಗೂ ಸಹಿತ ದೊಡ್ಡ ತಲೆನೋವಾಗಿದೆ. ಈ ವೇಳೆ ಪ್ಲಾಸ್ಟಿಕ್ ಕಸದ ರಾಶಿಗೆ, ನಮ್ಮ ಕಣ್ತಪ್ಪಿಸಿ ಬೆಂಕಿ ಹಾಕಿ, ಸದ್ದಿಲ್ಲದೆ ಜಾಗ ಖಾಲಿ ಮಾಡಿ, ಅದರ ವಿಷಯುಕ್ತ ಹೊಗೆ, ವಾತಾವರಣ ಕಲುಷಿತಗೊಳಿಸುವಂತೆ ಮಾಡಿದೆ.ಸಾಲದು ಎಂಬಂತೆ ಇಲ್ಲಿನ ಸಮುದಾಯ ಭವನದವರು ಪಕ್ಕದಲ್ಲಿ ವಿದ್ಯಾರ್ಥಿಗಳಿದ್ದಾರೆ. ವಾಸದ ಮನೆ ಇದೆ ಎಂಬುದನ್ನೂ ಲೆಕ್ಕಿಸದೆ ತಮ್ಮ ಆದಾಯ ಗಮನದಲ್ಲಿಟ್ಟುಕೊಂಡು ಸಮುದಾಯ ಭವನ ಬಾಡಿಗೆ ನೀಡುತ್ತಿದ್ದಾರೆ. ರಾತ್ರಿ ಇಡಿ ಸಭೆ ಮಾಡುವುದು, ಧ್ವನಿವರ್ಧಕ ಬಳಸುವ ಕೆಲಸ ನಡೆಯುತ್ತಿದೆ. ಮದುವೆ ಮತ್ತಿತರ ಕಾರ್ಯ ಮಾಡಿದವರು ಕಸವನ್ನು ಸರಿಯಾಗಿ ನಿರ್ವಹಿಸದೆ ಎದುರಿನ ಕಸ ಸಂಗ್ರಹಣಾ ಸ್ಥಳಕ್ಕೆ ಬಿಸಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗೃಹ ಬಂಧಿ ಮಹಿಳೆ ರಕ್ಷಣೆ
ಮೈಸೂರು: ಮನೆಯ ಕೊಠಡಿಯಲ್ಲಿ 20 ದಿನಗಳಿಂದ ಬಂಧಿಯಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ನಜರ್‌ಬಾದ್ ಠಾಣೆ ಪೊಲೀಸರು ಸಾರ್ವಜನಿಕರ ಸಹಾಯದಿಂದ ರಕ್ಷಿಸಿದ್ದಾರೆ.ಸಿದ್ದಾರ್ಥನಗರ ನಿವಾಸಿ ಎಂ.ಬಿ.ಗೌರಿಶಂಕರ್ ಎಂಬವರ ಪುತ್ರಿ ಅನಿತಾ ಕೊಠಡಿಯೊಳಗೆ ಬಂಧಿಯಾಗಿದ್ದವರು. ತೀವ್ರವಾಗಿ ಅಸ್ವಸ್ಥಗೊಂಡಿರುವ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.ಪತಿಯ ಕಿರುಕುಳದಿಂದ ಅನಿತಾ ಇತ್ತೀಚೆಗೆ ತವರಿಗೆ ಬಂದಿದ್ದಾರೆ. ಸಹೋದರ ರಾಜಶೇಖರ್ ಸರ್ಕಾರಿ ಕೆಲಸದಲ್ಲಿದ್ದು, ಇತ್ತೀಚೆಗೆ ಮಾನಸಿಕ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮನನೊಂದಿದ್ದ ಅನಿತಾ ಶೌಚ ಗೃಹಕ್ಕೆ ಹೋಗುವಾಗ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಮನೆಯಲ್ಲಿದ್ದ ಸಹೋದರಿಯ ಬಗ್ಗೆ ರಾಜಶೇಖರ್ ಯೋಗಕ್ಷೇವು ವಿಚಾರಿಸಿಲ್ಲ. ಅಕ್ಕಪಕ್ಕ ನಿವಾಸಿಗಳಿಂದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನಜರ್‌ಬಾದ್ ಠಾಣೆ ಪೊಲೀಸರು, ಕೊಠಡಿ ಬಾಗಿಲು ಮುರಿದು, ಅಸ್ವಸ್ಥರಾಗಿದ್ದ ಅನಿತಾ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜಶೇಖರ್ ಅವರನ್ನು ಚಿಕಿತ್ಸೆಗಾಗಿ ಚಿಕ್ಕಹಳ್ಳಿಯಲ್ಲಿರುವ ವಿ ಕೇರ್ ಸಂಸ್ಥೆಗೆ ಸೇರಿಸಲು ಪೊಲೀಸರು ಮುಂದಾಗಿದ್ದಾರೆ.ಅನಿತಾ ಕೊಠಡಿಯೊಳಗೆ ಹೇಗೆ ಸಿಕ್ಕಿಕೊಂಡರು, ಕೊಠಡಿಯಿಂದ ಯಾಕೆ ಹೊರಗೆ ಬರಲಿಲ್ಲ ಎಂಬ ಪ್ರಶ್ನೆಗಳಿಗೆ ಅನಿತಾ ಅವರು ಚೇತರಿಸಿಕೊಂಡ ಬಳಿಕವಷ್ಟೇ ಉತ್ತರ ಸಿಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement