ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆರೋಗ್ಯವಂತ ಸಮಾಜ ನಿರ್ಮಿಸೋಣ: ಮಂಜುನಾಥ್

Srinivasa Murthy VN
Updated On : 3 Mar 2014, 11:59 am

ಟಿ. ನರಸೀಪುರ: ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಪ್ರಜ್ಞಾವಂತ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದು ಎಂದು ಮಂಡ್ಯ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಎಂ.ಆರ್. ಮಂಜುನಾಥ್ ಹೇಳಿದರು.
ಸಮೀಪದ ಪೂರೀಗಾಲಿ ಗ್ರಾಮದ ಪಿಎಲ್‌ಎನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ರಿಬ್ಬನ್ ಕ್ಲಬ್ ಮತ್ತು ರೆಡ್‌ಕ್ರಾಸ್‌ನಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳು ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಂಡಾಗ ಸದೃಢ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಯುವ ಸಮೂಹ ಏಡ್ಸ್‌ನಂಥ ಮಾರಕ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದು ಎಂದರು.
ರಕ್ತದಾನ ಶಿಬಿರವನ್ನು ನವಚೇತನ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಉಪಾಧ್ಯಕ್ಷ ಡಾ.ಪಿ.ಎಲ್. ಗಂಗಾಧರ್ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ. ಧನಂಜಯ್ಯ ಏಡ್ಸ್ ನಿಯಂತ್ರಣದ ಬಗ್ಗೆ ತಿಳಿಸಿಕೊಟ್ಟರು.
 ಶಿಬಿರದಲ್ಲಿ 32ಕ್ಕೂ ಹೆಚ್ಚೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಪ್ರಾಂಶುಪಾಲ ಡಿ.ಎಂ. ರೇವಣ್ಣ, ಸಂಯೋಜಕ ಡಾ.ಬಿ. ರಾಜಣ್ಣ, ಅಧೀಕ್ಷಕ ಮಹದೇವ್, ಉಪನ್ಯಾಸಕರಾದ ಮರಿಸ್ವಾಮಿ, ಶಿವಕುಮಾರ, ರಾಮು, ರಾಘವೇಂದ್ರ, ಆರ್. ರಮೇಶ್, ಪಿ.ಎಸ್. ನಾಗೇಶ್, ಎಂ. ಅಶೋಕ್, ಶಿವಪ್ರಸಾದ್, ವೆಂಕಟೇಶ್, ಅನಿಲ್ ರಾಜೇ ಅರಸು, ಕೆ.ವಿ. ರಾಜಣ್ಣ, ಬಿ.ಸಿ. ರಾಜಣ್ಣ, ಲಿಂಗರಾಜು, ನಾಗಮಾದಯ್ಯ, ಮಹದೇವಪ್ರಸಾದ್ ಇದ್ದರು.

ಶಸ್ತ್ರಚಿಕಿತ್ಸೆಗೆ ನೆರವು ನೀಡಿ
ಟಿ. ನರಸೀಪುರ: ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ನೆರವು ನೀಡುವಂತೆ ಮಹಿಳೆಯೊಬ್ಬರು ಕೋರಿದ್ದಾರೆ.
ಆರೇಳು ತಿಂಗಳಿಂದ ಹೊಟ್ಟೆಯಲ್ಲಿರುವ ಕ್ಯಾನ್ಸರ್ ಗಡ್ಡೆಯನ್ನು ತೆಗೆಸಲು ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದೆ ಮೈಸೂರಿನ ಹಿನಕಲ್ ನಿವಾಸಿ ವಿ. ಬಸವರಾಜು ಅವರ ಪತ್ನಿ ಆರ್. ಮಂಜುಳಾ ಪರದಾಡುತ್ತಿದ್ದಾರೆ. ಈಗಾಗಲೇ ಮೈಸೂರಿನ ಮಲ್ಲಿಗೆ ನರ್ಸಿಂಗ್ ಹೋಂ ಹಾಗೂ ಆದಿತ್ಯ ಹಾಸ್ಪಿಟಲ್ ಎಂಬ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರು. ಖರ್ಚು ಮಾಡಿದ್ದಾರೆ. ಮಂಜುಳಾ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಕಡುಬಡತನದಲ್ಲೇ ಜೀವನ ಸಾಗಿಸುತ್ತಿರುವ ಮಂಜುಳಾಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಲಕ್ಷಾಂತರ ರೂಪಾಯಿಗಳ ಅವಶ್ಯಕತೆ ಇದೆ. ಸಹಾಯ ಮಾಡಲಿಚ್ಛಿಸುವವರು ಎಸ್‌ಬಿಎಂನ ಮುಖ್ಯ ಶಾಖೆಯ ಉಳಿತಾಯ ಖಾತೆ ಸಂಖ್ಯೆ 54055718379ಗೆ ಹಣ ಸಂದಾಯ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement