ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎತ್ತಿನಗಾಡಿ ಓಟದ ಸ್ಪರ್ಧೆ

Srinivasa Murthy VN
Updated On : 4 Mar 2014, 12:03 pm

ಸಾಲಿಗ್ರಾಮ: ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪಟ್ಟಣದ ಹೊರವಲಯದಲ್ಲಿರುವ ಶ್ರೀಜ್ಯೋತಿರ್ಮಹೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಿತಿ ಮತ್ತು ಶ್ರೀಯೋಗನರಸಿಂಹಸ್ವಾವು ಯುವಕರ ಸಂಘದ ವತಿಯಿಂದ ಎತ್ತಿನಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕೆ.ಆರ್. ನಗರ, ಸಾಲಿಗ್ರಾಮ, ಚಿಕ್ಕಮಗಳೂರು, ಅಜ್ಜಂಪುರ, ಕಡೂರು, ತರೀಕೆರೆ, ಹಾಸನ, ಹೊಳೆನರಸೀಪುರ, ಮಂಡ್ಯ, ಹುಣಸೂರು, ರಾಂಪುರ, ಅಂಕನಹಳ್ಳಿ, ಮಿರ್ಲೆ, ಚಿಕ್ಕನಾಯಕನಹಳ್ಳಿ ಮತ್ತು ಬಳ್ಳೂರು ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಜೋಡಿ ಎತ್ತಿನ ಗಾಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಗ್ರಾಮೀಣ ಕ್ರೀಡೆಯಲ್ಲಿ ಎತ್ತುಗಳು ನಾವು ಗೆಲ್ಲಲೇಬೇಕೆಂಬ ಛಲದಿಂದ ಓಡುತ್ತಿದ್ದ ಪರಿಯು ಸೇರಿದ ಜನಸ್ತೋಮಕ್ಕೆ ರಸದೌತಣ ಉಣಬಡಿಸಿತು. ಮೈದಾನದ ಎರಡು ಬದಿಯಲ್ಲಿ ಮತ್ತು ಪಂದ್ಯ ವೀಕ್ಷಿಸಲು ಮರದ ಮೇಲೇರಿದ ಸಹಸ್ರಾರು ಜನರು ಬಿಸಿಲನ್ನೂ ಲೆಕ್ಕಿಸದೆ ಶಿಳ್ಳೆ, ಕೇಕೆ ಹಾಕಿ ಉತ್ಸಾಹದಿಂದ ಸ್ಪರ್ಧೆಯ ರೋಚಕತೆ ಸವಿದರು.
ಇದಕ್ಕೂ ಮುನ್ನ ಶ್ರೀಗುರುರಾಘವೇಂದ್ರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಾ.ರಾ. ನಂದೀಶ್ ಮರಳು ತುಂಬಿದ ಎತ್ತಿನಗಾಡಿ ಸ್ಪರ್ಧೆಗೆ ಚಾಲನೆ ನೀಡಿದರು.
ಸ್ಪರ್ಧೆ ವಿಜೇತರು: ಚಕ್ರದಗಾಡಿ ಸ್ಪರ್ಧೆ- ಚಿಕ್ಕಮಗಳೂರು ಜಗ್ಗ(ಪ್ರಥಮ), ಸಾಲಿಗ್ರಾಮ ಹರೀಶ್(ದ್ವಿತೀಯ), ಕೋಟೆಗ್ರಾಮ ಮಂಜುನಾಥ ಅರಸು(ತೃತೀಯ), ಚಿಕ್ಕನಾಯಕನಹಳ್ಳಿ ಲೋಕೇಶ್, ವಾರೂರಮ್ಮ ಮಲ್ಲಿನಾಥಪುರ(ಸಮಾಧಾನಕರ). ಮರಳು ತುಂಬಿದ ಗಾಡಿ ಸ್ಪರ್ಧೆ- ಸಾಲಿಗ್ರಾಮ ಮಧು(ಪ್ರಥಮ), ಹಂಪೆ ವಿರೂಪಾಕ್ಷ(ದ್ವಿತೀಯ), ತೇಗೂರು ಮೈಲಾರು(ತೃತೀಯ), ಚಿಕ್ಕನಾಯಕನಹಳ್ಳಿ ಚೀಟಿ ಪಾಪಣ್ಣ, ಸಾಲಿಗ್ರಾಮ ಮಧು(ಸಮಾಧಾನಕರ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement