ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಥಾ ಸಂಚಯ ಭಾಗ 2 ಕೃತಿಗಳ ಲೋಕಾರ್ಪಣೆ

Srinivasa Murthy VN
Updated On : 4 Mar 2014, 12:03 pm

ಮೈಸೂರು: ಲೇಖಕಿಯರ ಕಥಾಸಂಚಯ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಚಾಮುಂಡಿಪುರಂನ ಮಹಿಳಾ ಸಮಾಜದಲ್ಲಿ ಭಾನುವಾರ ನಡೆಯಿತು.
ಲೇಖಕಿಯರ ಸ್ನೇಹ ಬಳಗದ ವತಿಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಬೆಂಗಳೂರಿನ ಜಾಗೃತಿ ಮುದ್ರಾಣಾಲಯದ ಮಾಲೀಕ ನಿಡಸಾಲೆ ವಿಜಯ್ ಉದ್ಘಾಟಿಸಿದರು. ಕಥಾ ಸಂಚಯ ಭಾಗ- 2 ಕೃತಿಯನ್ನು ಸಾಹಿತಿ ಜಯಪ್ಪ ಹೊನ್ನಾಳಿ ಹಾಗೂ ಕಥಾ ಸಂಚಯ ಭಾಗ- 3ನ್ನು ಗೀತಾಂಜಲಿ ಪ್ರಕಾಶನದ ಮಾಲೀಕ ನಿಡಸಾಲೆ ಪುಟ್ಟಸ್ವಾಮಯ್ಯ ಲೋಕಾರ್ಪಣೆಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತ್ರತಜ್ಞೆ ಡಾ.ಮಣಿಕರ್ಣಿಕ, ಇಂದು ಓದುವ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರು ಹೆಚ್ಚು ಪುಸ್ತಕಗಳನ್ನು ಓದಬೇಕು ಹಾಗೂ ಬರೆಯುವಲ್ಲಿಯೂ ಆಸಕ್ತಿ ವಹಿಸಬೇಕು ಎಂದು ಆಶಿಸಿದರು. ಸ್ನೇಹ ಬಳಗದ ಪ್ರಧಾನ ಸಂಪಾದಕಿ ಮುಕ್ತಾ, ಸಂಪಾದಕಿಯರಾದ ಪ್ರಭಾಕರ್ ಹಾಗೂ ಬಿ.ಆರ್. ನಾಗರತ್ನ ಇದ್ದರು.

ಗಮನ ಸೆಳೆದ ಆಲ್ ದಿ ಬೆಸ್ಟ್
ಮೈಸೂರು: ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದ ಸಿಎಫ್‌ಟಿಆರ್‌ಐನಲ್ಲಿ ಏರ್ಪಡಿಸಿದ್ದ ಮೂರು ದಿನಗಳ ನಾಟಕ ಉತ್ತರ ಕರ್ನಾಟಕ ಉತ್ಸವವು ಭಾನುವಾರ ಮುಕ್ತಾಯಗೊಂಡಿತು.
ಗುರು ಇನ್‌ಸ್ಟಿಟ್ಯೂಟ್ ತಂಡದ ಕಲಾವಿದರು ಆಲ್ ದಿ ಬೆಸ್ಟ್ ನಾಟಕ ಅಭಿನಯಿಸಿದರು. ಪ್ರಹ್ಲಾದ ಸರದೇಶಪಾಂಡೆ ರಚಿಸಿರುವ, ಯಶವಂತ ಸರದೇಶಪಾಂಡೆ ನಿರ್ದೇಶನದಲ್ಲಿ ಮೂಡಿ ಬಂದ ಈ ನಾಟಕವು ಪ್ರೇಕ್ಷಕರ ಗಮನ ಸೆಳೆಯಿತು.
ಮೈಸೂರಿನ ಕಲಾವಿದರಾದ ಬಿ. ಗೋಪಾಲ, ಪ್ರವೀಣ್ ಬೆಳ್ಳಿ, ಪೂರ್ಣಿಮಾ, ಕಡೂರಿನ ಧರ್ಮಣ್ಣ ಅಮೋಘವಾಗಿ ಅಭಿನಯಿಸಿದರು. ದೃಶ್ಯಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement