ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೇಕಾರರ ಹಕ್ಕಿಗಾಗಿ ಸಂಘಟನೆ ಅವಶ್ಯ

Srinivasa Murthy VN
Updated On : 3 Mar 2014, 11:59 am

ಮೈಸೂರು: ನೇಕಾರರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಲು ಸಂಘಟನಾಶಕ್ತಿ ಅವಶ್ಯಕ ಎಂದು ಪದ್ಮಪೀಠ ಪತ್ರಿಕೆ ಸಂಪಾದಕ ಕೃಷ್ಣಯ್ಯ ಹೇಳಿದರು. ಜಗನ್ಮೋಹನ ಅರಮನೆಯಲ್ಲಿ ಮೈಸೂರು ನಗರ ಪದ್ಮಶಾಲಿ ಸಂಘದ ಉದ್ಘಾಟನೆ ಹಾಗೂ ಭಾವನ ಋಷಿ ಮತ್ತು ಮಾರ್ಕಂಡೇಯಸ್ವಾಮಿ ಕುಲದೇವರ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿರುವ ಪದ್ಮಶಾಲಿ ಸಮಾಜವು ಮುಂದೆ ಬರಬೇಕಾದರೆ ಸಂಘಟಿತರಾಗಬೇಕು. ನೇಕಾರರು ಸ್ವಾಭಿಮಾನಿಗಳಾಗಿರುವುದರಿಂದ ಸಂಘಟನೆಯ ಕೊರತೆಯಿದೆ. ಈ ಜನಾಂಗ ಯಾವುದೇ ರಾಜಕೀಯ ಪಕ್ಷಗಳ ಹಿಂದೆ ಹೋದವರಲ್ಲ. ಸಂಘಟನೆಯ ಜಾಗೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಹಕ್ಕು ಬಾಧ್ಯತೆಯನ್ನು ಹೊಂದಲು ಸಾಧ್ಯ ಎಂದರು. ಕಳೆದ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈ.ನಾ. ಗೋಪಾಲಕೃಷ್ಣ ಅವರಿಗೆ ನೇಕಾರ ಪದ್ಮಶಾಲಿ ರತ್ನ ಹಾಗೂ ವಿದ್ಯಾರ್ಥಿ ಅರುಣ್ ಅವರಿಗೆ ಬಾಲವಿದ್ಯಾ ಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಪದ್ಮಶಾಲಿ ಸಂಘದ ಅಧ್ಯಕ್ಷ ದೇವರಕೊಂಡೆ ಚೌಡಪ್ಪ ಉದ್ಘಾಟಿಸಿದರು. ವಿಧಾನಸಭೆಯ ನಿವೃತ್ತಿ ಪತ್ರಕರ್ತ ರಘು ಶೆಟ್ಟಿಗಾರ್, ಕಾಂಗ್ರೆಸ್ ಮುಖಂಡ ಆರ್.ಮೂರ್ತಿ, ಕುರಿಹಿನ ಶೆಟ್ಟಿ ಸಮಾಜದ ಮುಖಂಡ ಉಗ್ರಶೆಟ್ಟಿ, ನಗರ ಪಾಲಿಕೆ ಸದಸ್ಯ ಎಂ. ರಮೇಶ್, ಸಂಘದ ಗೌರವಾಧ್ಯಕ್ಷ ಬಾಪು ರಾಮಕೃಷ್ಣಯ್ಯ, ಉಪಾಧ್ಯಕ್ಷರಾದ ಎಂ.ಎಲ್.ನಾರಾಯಣಮೂರ್ತಿ, ಶಾಂತಲಕ್ಷ್ಮೀ ಇದ್ದರು. ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ ನಿರೂಪಿಸಿದರು.

ನ್ಯಾನ್ಸಿ ಶರ್ಮಾಗೆ ಉತ್ತಮ ಲೇಖನ ಪ್ರಶಸ್ತಿ
ಮೈಸೂರು: ಕೊಚ್ಚಿಯ ಶ್ರೀ ಅಮೃತ ವ್ಯವಹಾರ ನಿರ್ವಹಣ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವ್ಯವಹಾರ ವಿಷಯಕ್ಕೆ ಸಂಬಂಧಿಸಿದ ಲೇಖನ ಸ್ಪರ್ಧೆಯಲ್ಲಿ ಮೈಸೂರಿನ ಎಸ್‌ಡಿಎಂ ಐಎಂಡಿ ವಿದ್ಯಾರ್ಥಿನಿ ನ್ಯಾನ್ಸಿ ಶರ್ಮಾ ಅವರ ಉದ್ಯಮಶೀಲತೆಯ ಸ್ಫೂರ್ತಿ ಮತ್ತು ಸಾಮಾಜಿಕ- ಆರ್ಥಿಕ ಬೆಳವಣಿಗೆ ಎಂಬ ಲೇಖನಕ್ಕೆ ಉತ್ತಮ ಲೇಖನ ಪ್ರಶಸ್ತಿ ಸಂದಿದೆ.
ಶರ್ಮಾ ಅವರು ತಮ್ಮ ಲೇಖನದಲ್ಲಿ ಉದ್ಯಮಶೀಲತೆ ಮತ್ತು ಸಾಮಾಜಿಕ- ಆರ್ಥಿಕ ಬೆಳವಣಿಗೆ ಹೆಚ್ಚು ಸಾಂಗತ್ಯ ಹೊಂದಿರುವ ವಿಷಯಗಳಾಗಿದ್ದು, ಸಾಮಾಜಿಕ ಯೋಗಕ್ಷೇವುಕ್ಕೆ ಕಾರಣವಾಗುತ್ತದೆ. ಅಭಿವೃದ್ಧಿಶೀಲ ದೇಶವಾಗಿರುವ ಭಾರತದಲ್ಲಿ ಈ ಸ್ಫೂರ್ತಿ ತುಂಬಾ ಅವಶ್ಯಕ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಕೂಡ ಹೇರಳವಾಗಿ ಈ ಭಾವನೆ ಇದ್ದರೂ ಇದಕ್ಕೆ ಸೂಕ್ತ ಪೋಷಣೆ ದೊರಕುತ್ತಿಲ್ಲ ಎಂದು ವಿವರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement