ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾರ್ಥಿ ಆತ್ಮಕ್ಕೆ ಶಾಂತಿಕೋರಿ ಮೆರವಣಿಗೆ

Srinivasa Murthy VN
Updated On : 4 Mar 2014, 12:02 pm

ಪಾಂಡವಪುರ: ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಹರೀಶ್ ಮಾರ್ ಆತ್ಮಕ್ಕೆ ಶಾಂತಿಕೋರಿ ಪಟ್ಟಣದಲ್ಲಿ ವಿಜಯ ಪ್ರಥಮ ಕುದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಸೋಮವಾರ ಮೌನ ಮೆರವಣಿಗೆ ನಡೆಸಿದರು.
ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನಿಂದ ಪೊಲೀಸ್ ಠಾಣೆ ರಸ್ತೆ, ಪೋಸ್ಟ್ ಆಫೀಸ್ ರಸ್ತೆ ಮೂಲಕ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಐದು ದೀಪಗಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಹಸೀಲ್ದಾರ್ ಕಚೇರಿಗೆ ತರಳಿ ಮೌನ ಪ್ರತಿಭಟನೆ ನಡೆಸಿದರು. ತಾಲೂಕಿನ ಶಾಲಾ ಕಾಲೇಜುಗಳಲ್ಲಿ 2 ಸಾವಿರ ವಿದ್ಯಾರ್ಥಿಗಳಿದ್ದಾರೆ. ಪಟ್ಟಣದ ಯಾವುದೇ ಕಾಲೇಜುಗಳಲ್ಲಿ ಮತ್ತು ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿ ಕಾವಲು ಹಾಕದ ಕಾರಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೆಲ ಪುಂಡ ಪೋಕಿರಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದರು. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಒಂದೇ ರೀತಿ ಸಮವಸ್ತ್ರ ನೀಡುವ ಜೊತೆಗೆ ಬ್ಯಾಡ್ಜ್ ನೀಡಬೇಕು ಮತ್ತು ಕಾಲೇಜು ಕ್ಯಾಂಪಸ್‌ಗಳಿಗೆ ಹೊರ ಭಾಗದ ಯುವಕ - ಯುವತಿರನ್ನು ಸೇರಿಸಬಾರದು ಹಾಗೂ ಸಿಸಿ ಟಿವಿಗಳನ್ನು ಅಳವಡಿಸಬೇಕು ಎಂದು ಕೋರಿದರು.

ಅಂಬಿ ಆರೋಗ್ಯ ಕೋರಿ ಗಣಪತಿ ಹೋಮ
ಭಾರತೀನಗರ: ನಟ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ರವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ನೌಕರರು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಗಣಪತಿ ಹೋಮ ನಡೆಸಿದರು.
ಅರ್ಚಕ ಶ್ರೀಧರ್ ಭಟ್ ಚಾಮುಂಡೇಶ್ವರಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಂಬರೀಷ್‌ರವರ ಹೆಸರಿನಲ್ಲಿ ಗಣಪತಿಹೋಮ ನಡೆಸಿದರು. ಎಸ್.ಟಿ. ನಾಗರಾಜು ಮಾತನಾಡಿ, ಅಂಬರೀಷ್‌ರವರು ರಾಜ್ಯಕ್ಕೆ ಅಗತ್ಯವಿರುವುದರಿಂದ ಅವರಿಗೆ ಆಯಸ್ಸು ಆರೋಗ್ಯ ದೇವರು ನೀಡಲಿ ಎಂದು ಬೇಡಿದರು. ಜಯರಾಮು ಮಾತನಾಡಿದರು. ಎಸ್.ಟಿ.ನಾಗರಾಜು, ಜಯರಾಮು, ಪುಟ್ಟರಾಜು, ಸಿದ್ದರಾಜು, ಸುರೇಂದ್ರಕಟ್ಟಿ, ಬಿ.ಕೆ. ಕೃಷ್ಣಪ್ಪ, ರಾಘವೇಂದ್ರ, ದೀಪಕ್, ಕೆ.ಟಿ. ಗೋವಿಂದೇಗೌಡ, ಬೊಪ್ಪಸಮುದ್ರ ಅನಿಲ್ ಕುಮಾರ್ ಇದ್ದರು.

ದೊಡ್ಡಹಬ್ಬದ ಆಚರಣೆಗೆ ಸಿದ್ಧತೆ
ಮಳವಳ್ಳಿ: ಇತಿಹಾಸ ಪ್ರಸಿದ್ಧ ಅರುವನಹಳ್ಳಿ  ಬೀರೇಶ್ವರ ದೇವರು ಮನುಕುಲದ ಉದ್ಧಾರಕ್ಕಾಗಿ ಹಲವಾರು ಪವಾಡಗಳನ್ನು ಮಾಡಿದ್ದಾರೆ ಎಂದು ದಡದಪುರದ ಯಜಮಾನ ಚಿಕ್ಕಲಿಂಗಯ್ಯ ತಿಳಿಸಿದರು.
ಗ್ರಾಮದ ಮಾರೀಗುಡಿ ಬಳಿ ಅರುವನಹಳ್ಳಿ ಬೀರೇಶ್ವರನ ದೊಡ್ಡಹಬ್ಬದ ಆಚರಣೆಗೆ ಸಿದ್ಧತೆ ನಡೆಸಿ, ಯಡಿಗೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಸಿದ್ಧವಾಗಿದ್ದ ಎತ್ತಿನಗಾಡಿಗಳಿಗೆ ಚಾಲನೆ ನೀಡಿ ಮಾತನಾಡಿ, ಈ ರೀತಿ ಹಬ್ಬವನ್ನ ಆಚರಿಸುವುದು ಕುರುಬ ಜನಾಂಗದ ಸಂಪ್ರದಾಯವಾಗಿದೆ ಎಂದರು.

ಸಿಂಹ ನಿಧನಕ್ಕೆ ಸಂತಾಪ
ತಾಂಡವಪುರ: ರಂಗಭೂಮಿ ಕಲಾವಿದ, ಹಿರಿಯ ಚಿತ್ರನಟ ಸಿ.ಆರ್. ಸಿಂಹ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.
   ಸಿ.ಆರ್. ಸಿಂಹ ಅವರು ಸಿನಿಮಾ ರಂಗದಲ್ಲಿ ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳನ್ನು ತಿದ್ದುವಂಥ ಪಾತ್ರಗಳನ್ನು ಮಾಡುವ ಮೂಲಕ ಜನ ಮನದಲ್ಲಿ ಮನೆ ಮಾತಾಗಿದ್ದರು. ಅಂಥ ಮಹಾನ್ ಕಲಾವಿದನನ್ನು ಕಳೆದುಕೊಂಡು ಕನ್ನಡ ಚಲನಚಿತ್ರ ರಂಗ ಬಡವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement