ಇಂದಿನಿಂದ ಪಿಯು ಉಪನ್ಯಾಸಕರಿಗೆ ಕಾರ್ಯಾಗಾರ
ಮೈಸೂರು: ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಸಂಯುಕ್ತಾಶ್ರಯದಲ್ಲಿ 2013-14ನೇ ಸಾಲಿನ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಲಾ ಮತ್ತು ವಾಣಿಜ್ಯ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಮಾ. 5ರಿಂದ 7ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ವಿಷಯವಾರು ಈ ಕೆಳಕಂಡ ಸ್ಥಳಗಳಲ್ಲಿ ಆಯೋಜಿಸಿದೆ ಎಂದು ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ. ಪುಟ್ಟು ಹೇಳಿದ್ದಾರೆ.
ಕನ್ನಡ- ಮಹಾರಾಣಿ ಪ್ರಶಿಕ್ಷಣಾ ತರಬೇತಿ ಸಂಸ್ಥೆ. ಇಂಗ್ಲಿಷ್- ಸೆಂಟ್ ಫಿಲೋಮಿನಾ ಪದವಿರ್ಪೂ ಕಾಲೇಜು, ಬನ್ನಿಮಂಟಪ. ಇತಿಹಾಸ- ರೋಟರಿ ಪ್ರೌಢಶಾಲೆ, ಕೆಆರ್‌ಎಸ್ ರಸ್ತೆ, ಮಾಂಡವಿ ಮೋಟಾರ್ಸ್ ಹತ್ತಿರ. ಅರ್ಥಶಾಸ್ತ್ರ- ವಿಜಯವಿಠಲ ಪದವಿಪೂರ್ವ ಕಾಲೇಜು, ಸರಸ್ವತಿಪುರಂ. ಸಮಾಜಶಾಸ್ತ್ರ- ಡಯಟ್ (ವಸಂತ್‌ಮಹಲ್), ನಜರ್‌ಬಾದ್. ರಾಜ್ಯಶಾಸ್ತ್ರ-ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜು, ನಂಜುಮಳಿಗೆ ಹತ್ತಿರ.
ವಿಭಾಗೀಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ಮಾ. 4ರಿಂದ 6ರವರೆಗೆ ವ್ಯವಹಾರ ಅಧ್ಯಯನ ವಿಷಯಕ್ಕೆ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಆಯೋಜಿಸಿದೆ. ವ್ಯವಹಾರ ಅಧ್ಯಯನ- ಚೈತ್ರ ಪದವಿ ಪೂರ್ವ ಕಾಲೇಜು, ಶ್ರೀರಂಪುರ. ಈ ಮೇಲ್ಕಂಡ ಸ್ಥಳಗಳಲ್ಲಿ ಜಿಲ್ಲಾ, ವಿಭಾಗೀಯ ಮಟ್ಟದ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಬಿಡುಗಡೆ ಪ್ರಮಾಣ ಪತ್ರ ಮತ್ತು ವೇತನ ಪ್ರಮಾಣ ಪತ್ರದೊಂದಿಗೆ ವಿಷಯವಾರು ತರಬೇತಿ ನಡೆಯುವ ಸ್ಥಳಗಳಲ್ಲಿ ಹಾಜರಾಗುವಂತೆ ಸೂಚಿಸಿದ್ದಾರೆ.