ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು- ಕೊಡಗಿನಿಂದ ಆದಿವಾಸಿ ಮುಖಂಡ ಸ್ಪರ್ಧೆ

Srinivasa Murthy VN
Updated On : 8 Mar 2014, 11:56 am

ಮೈಸೂರು: ವಿವಿಧ ಪಕ್ಷಗಳು ಗೆಲವು ಸಾಧಿಸಲೇಬೇಕೆಂಬ ಹಟದೊಂದಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ. ಇಂತಹ ಪ್ರಬಲ ಅಭ್ಯರ್ಥಿಗಳ ನಡುವೆ ಆದಿವಾಸಿ ಮುಖಂಡ ಜೆ.ಕೆ. ಗೋಪಾಲ ಪೂಜಾರಿ ಎಂಬವರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದ ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಪೂಜಾರಿ, 18,269 ಮತಗಳನ್ನು ಪಡೆದಿದ್ದರು. ಅಲ್ಲದೇ ಬಿಎಸ್ಪಿಗೆ ನೆಲೆಯೇ ಇಲ್ಲದಿದ್ದ ಕ್ಷೇತ್ರದಲ್ಲಿ ನಿಂತು ಇಷ್ಟು ಮತಗಳನ್ನು ಪಡೆಯುವ ಮೂಲಕ ಬೆರಗು ಮೂಡಿಸಿದ್ದರು. ಅದನ್ನು ಮಾನದಂಡವಾಗಿಟ್ಟುಕೊಂಡು, ಮೂಲ ನಿವಾಸಿಗಳ ಪರ ಸಂಸತ್ತಿನಲ್ಲಿ ದನಿ ಎತ್ತಬೇಕೆಂಬ ಆಶಯದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಮೈಸೂರು- ಕೊಡಗು ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಹೀಗಾಗಿ ಯಾವುದಾದರೂ ರಾಷ್ಟ್ರೀಯ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದರೆ ಗೆಲ್ಲುತ್ತೇನೆ. ಇಲ್ಲವಾದಲ್ಲಿ ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಜೆ.ಕೆ.ಗೋಪಾಲ್ ಪೂಜಾರಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement