ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮಗಳ ಚರಿತ್ರೆ ದಾಖಲು ಆಗಲಿ: ಪ್ರೊ. ಸಿ. ನಾಗಣ್ಣ

Srinivasa Murthy VN
Updated On : 10 Mar 2014, 1:23 am

ಮೈಸೂರು: ನಮ್ಮ ಸುತ್ತಮುತ್ತ ಇರುವ ಗ್ರಾಮಗಳ ಚರಿತ್ರೆಯನ್ನು ದಾಖಲಿಸುವ ಅಗತ್ಯವಿದೆ ಎಂದು ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ. ಸಿ. ನಾಗಣ್ಣ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಂಜಿನಿಯರುಗಳ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎಚ್.ಎಂ. ನಾಗರಾಜು ರಚಿಸಿರುವ ನಾಗಮಂಗಲ ತಾಲೂಕಿನ ಹಬ್ಬ ಹರಿದಿನಗಳು ಎಂಬ ಕೃತಿಯ ಲೋಕಾರ್ಪಣೆಯಲ್ಲಿ ಪುಸ್ತಕ ಕುರಿತು ಮಾತನಾಡಿದರು. ನಾವು ಹುಟ್ಟಿದ ಊರಿನ ಪರಿಸರ ಹಾಗೂ ವೈಶಿಷ್ಟ್ಯವನ್ನು ಅಲ್ಲಿಂದ ಹೊರ ಬರುವ ವಿದ್ಯಾವಂತ ಯುವಕರು ಬರೆಯುವುದು ಅವಶ್ಯಕ. ರಾಜ್ಯದಲ್ಲಿ ಸುಮಾರು 5- 6 ಲಕ್ಷ ಹಳ್ಳಿಗಳಿವೆ. ಅಂಥ ಗ್ರಾಮಗಳ ಮಹತ್ವ ಸಾರುವ ಚರಿತ್ರೆಯನ್ನು ದಾಖಲಿಸಿದಾಗ ಅದು ಮುಂದಿನ ಪೀಳಿಗೆಗೆ ತಿಳಿಯಲಿದೆ. ಈ ದಿಸೆಯಲ್ಲಿ ಜಾನಪದ ವಿವಿಯು ಆ ಕೆಲಸಕ್ಕೆ ಮುಂದಾಗಿರುವುದು ಅಭಿನಂದನೀಯ ಎಂದರು. ಯೋಗನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಡಾ. ಭಾಷ್ಯಂ ಸ್ವಾಮಿ ಕೃತಿ ಲೋಕಾರ್ಪಣೆಗೊಳಿಸಿದರು. ಭಾರತೀಯ ವಿದ್ಯಾಭವನದ ಮೈಸೂರು ಅಧ್ಯಕ್ಷ ಪ್ರೊ. ಎ.ವಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ. ಟಿ.ಅನಂತಪದ್ಮನಾಭ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು. ಲೇಖಕ ಡಾ.ಎಚ್.ಎಂ. ನಾಗರಾಜು ಇದ್ದರು. ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿದರು. ಖಜಾಂಚಿ ರಾಜಶೇಖರ ಕದಂಬ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement