'ಖಾಸಗಿ ಶಾಲೆಗಳಲ್ಲಿ ವಂತಿಗೆ ಹಾವಳಿ ತಪ್ಪಿಸಿ'
ಮೈಸೂರು: ಖಾಸಗಿ ಶಾಲೆಗಳಲ್ಲಿ ವಂತಿಗೆ ಹಾಗೂ ಬೋಧನಾ ಶುಲ್ಕದ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಖಾಸಗಿ ಶಾಲೆಗಳಲ್ಲಿ ವಿಪರೀತವಾಗಿ ಬೋಧನಾ ಶುಲ್ಕ, ವಂತಿಗೆಯನ್ನು ಪೋಷಕರಿಂದ ವಸೂಲಿ ಮಾಡುತ್ತಿದ್ದಾರೆ.
ಇದರಿಂದ ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಸರ್ಕಾರಿ ನಿಯಮಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳು, ಪೋಷಕರಿಂದ ಲಕ್ಷಾಂತರ ರು. ವಸೂಲಿ ಮಾಡುತ್ತಿದ್ದು, ಇದಕ್ಕೆ ಯಾವುದೇ ರಸೀತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ವಂತಿಗೆ ಹಾವಳಿ ತಪ್ಪಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಬೋಧನಾ ಶುಲ್ಕದ ವಿವರ ಪ್ರಕಟಿಸಬೇಕು. ಹಾಗೂ ಪೋಷಕರು ಪಾವತಿಸಿದ ಹಣಕ್ಕೆ ರಶೀದಿ ಕೊಡಬೇಕು. ಸರ್ಕಾರದ ನಿಯಮ ಅನುಸರಿಸದ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಶಾಲೆಯ ಮಾನ್ಯತೆ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ, ಮುಖಂಡರಾದ ಮನಮೋಹನ್, ಜೆ.ಪಿ. ಗೌಡ, ಪ್ರಭುಶಂಕರ್, ಪ್ರಜೀಶ್, ರಾಜೇಶ್, ರಘುರಾಮ್, ನಂಜುಂಡಸ್ವಾಮಿ, ರಾಜು, ನಾರಾಯಣಗೌಡ, ಸುಬ್ಬೇಗೌಡ, ಜಗದೀಶ್, ಕೃಷ್ಣ, ಬಸವರಾಜು ಇದ್ದರು.
ವಿವಿಧ ತರಬೇತಿ ಶಿಬಿರಗಳಿಗೆ ಅರ್ಜಿ ಆಹ್ವಾನ
ಮೈಸೂರು: ವಿದ್ಯಾಭವನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ಆರಂಭಿಸಿದೆ. ಮಾ.16ರ ಸಂಜೆ 4ಕ್ಕೆ ತರಗತಿ ಆರಂಭವಾಗಲಿದ್ದು, ಆಸಕ್ತರು ಮೊ. 9845341755 ಸಂಪರ್ಕಿಸಬಹುದು.
ಶಿಕ್ಷಾ ಭಾರತಿ ಸಂಸ್ಥೆಯು ಎನ್ಇಇಟಿ ಮತ್ತು ಸಿಇಟಿ ಪರೀಕ್ಷೆಗೆ ತರಬೇತಿ ಆರಂಭಿಸಿದೆ. ಆಸಕ್ತರು ಮೊ. 8747849060 ಸಂಪರ್ಕಿಸಬಹುದು. ವಿಜಯ ಅಕಾಡೆಮಿಯು ವಿಜಯ ವಿಠಲ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ಎನ್ಇಇಟಿ ಪ್ರವೇಶ ಪರೀಕ್ಷೆಗೆ ತರಬೇತಿ ಶಿಬಿರವನ್ನು ಏ.1 ರಿಂದ ಆರಂಭಿಸಿದೆ. ಆಸಕ್ತರು ಮೊ. 9886605449 ಸಂಪರ್ಕಿಸಬಹುದು.
ಪ್ರೈಮ್ ಅಕಾಡೆಮಿಯು ಸಿಎ- ಸಿಪಿಟಿ 13ನೇ ತಂಡದ ತರಬೇತಿ ಶಿಬಿರವನ್ನು ಏ.1 ರಿಂದ ಆರಂಭಿಸುತ್ತಿದೆ. ಆಸಕ್ತರು ಮಾ.31 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ. 9538880856 ಸಂಪರ್ಕಿಸಬಹುದು. ನೇತಾಜಿ ಎಜುಕೇಷನ್ ಫೌಂಡೇಷನ್ ಸಂಸ್ಥೆಯು ಬ್ಯಾಂಕಿಂಗ್ನ ಕ್ಲರಿಕಲ್ ಮತ್ತು ಪ್ರೊಬೆಷನರಿ ಅಧಿಕಾರಿ ಮತ್ತು ಎಲ್ಐಸಿಯ ಕ್ಲರಿಕಲ್ ಹುದ್ದೆಗಳ ನೇಮಕಾತಿಗೆ ತರಬೇತಿ ಆರಂಭಿಸಿದೆ. ಆಸಕ್ತರು ಮೊ. 9980639953 ಸಂಪರ್ಕಿಸಬಹುದು. ಶ್ರೀ ವಿದ್ಯಾರ್ಥಿ ಪ್ರಗತಿ ಫೌಂಡೇಷನ್ ಸಂಸ್ಥೆಯು ಐಬಿಪಿಎಸ್ ಮತ್ತು ಬ್ಯಾಂಕಿಂಗ್ ಪ್ರವೇಶಕ್ಕೆ ಪರೀಕ್ಷೆ ಆಯೋಜಿಸಿದೆ. ಆಸಕ್ತರು ಮೊ. 9886252355 ಸಂಪರ್ಕಿಸಿ.