ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮಾತೃ ಭಾಷೆ ಬದಲು ರಾಜ್ಯಭಾಷೆ ಆಗಲಿ'

Srinivasa Murthy VN
Updated On : 10 Mar 2014, 11:28 am

ಮೈಸೂರು: ಸಂವಿಧಾನದ ಪ್ರಕಾರ ಭಾಷಾವಾರು ಪ್ರಾಂತ್ಯಗಳನ್ನು ರಚಿಸಲಾಯಿತು. ಆಯಾ ಪ್ರಾಂತ್ಯಗಳಲ್ಲಿನ ಭಾಷೆಗಳಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಸಲುವಾಗಿ ಮಾತೃ ಭಾಷೆ ಎಂಬುದರ ಬದಲಾಗಿ ರಾಜ್ಯಭಾಷೆ ಎಂದು ಕರೆಯಲು ಸರ್ಕಾರ ಕೂಡಲೇ ತಿದ್ದುಪಡಿ ತರಬೇಕು ಎಂದು ರಾಜ್ಯ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಒತ್ತಾಯಿಸಿದರು.
ಸೋಮವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಥಮಿಕ ಶಿಕ್ಷಣದಲ್ಲಿ ಮಾತೃ ಭಾಷೆ ಬೇಕೆ ಬೇಡವೆ ಎಂಬ ವಿಚಾರ ನ್ಯಾಯಾಲಯದ ಮುಂದೆ ಹೋಗಿದೆ. ಕನ್ನಡದಲ್ಲಿ ಇರುವ ತೆಲಗು, ತಮಿಳು ಮಕ್ಕಳು ಇಲ್ಲಿನ ಭಾಷೆಯಲ್ಲಿಯೇ ಶಿಕ್ಷಣ ಕಲಿಯಬೇಕು. ಆದ್ದರಿಂದ ಮಾತೃ ಭಾಷೆ ಎಂದು ಕರೆಯದೆ ಒಟ್ಟಾರೆಯಾಗಿ ರಾಜ್ಯಭಾಷೆ ಎಂಬ ಹೆಸರಿನಲ್ಲಿ ನಮ್ಮ ಭಾಷೆಗಿರುವ ಸ್ಥಾನಮಾನ ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ನಮ್ಮತನ ಬಿಟ್ಟುಕೊಡುವುದಿಲ್ಲ. ಸರ್ಕಾರ ಪ್ರತಿನಿಧಿಸುವ ಅಡ್ವೋಕೇಟ್ ಜನರಲ್ ಅವರು ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡುತ್ತಿಲ್ಲವೋ ಗೊತ್ತಿಲ್ಲ. ಈ ಬಗ್ಗೆ ಚರ್ಚಿಸಲು ಮಾ.17 ರಂದು ಸಭೆ ಕರೆದಿದ್ದೆ. ಆದರೆ, ನ್ಯಾಯಾಲಯಲ್ಲಿ ನಮ್ಮ ವಾದ ಮುಗಿದಿದೆ ಎಂಬ ವಿಷಯ ಗೊತ್ತಾಗಿ ಸಭೆ ರದ್ದುಪಡಿಸಲಾಗಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೆಯೋ ಅದರ ಮೇಲೆ ನಮ್ಮ ಹೋರಾಟ ರೂಪಿಸಲಾಗುವುದು ಎಂದರು.

ಏ.21ರಿಂದ ಕ್ರೀಡಾ ತರಬೇತಿ ಶಿಬಿರ
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏ.21 ರಿಂದ ಮೇ 17 ರವರೆಗೆ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಕ್ರೀಡಾ ಚಟುವಟಿಕೆಗಳ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ನಡೆಸಲಾಗುವುದು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 7 ರಿಂದ 15ರ ವಯೋವುತಿಯೊಳಗಿನವರಿಗೆ ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಜಿಮ್ನಾಸ್ಟಿಕ್ ತರಬೇತಿ ನೀಡಲಾಗುವುದು. ತರಬೇತಿ ಶುಲ್ಕ 250 ಆಗಿರುತ್ತದೆ. 12 ರಿಂದ 18ರ ವಯೋವುತಿಯೊಳಗಿನವರಿಗೆ ಹಾಕಿ ಕ್ರೀಡೆ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ಶುಲ್ಕ 500 ಆಗಿರುತ್ತದೆ. 7 ರಿಂದ 18 ವಯೋವುತಿಯೊಳಗಿನವರಿಗೆ ಖೋ-ಖೋ ಕ್ರೀಡೆ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ಶುಲ್ಕ 250 ಆಗಿರುತ್ತದೆ.
ವಿಜಯನಗರ ಎಂಡಿಎ ಕ್ರೀಡಾಂಗಣದಲ್ಲಿ 10 ರಿಂದ 18 ವರ್ಷ ವಯೋವುತಿಯೊಳಗಿನವರಿಗೆ ಸೈಕ್ಲಿಂಗ್ ತರಬೇತಿ ನೀಡಲಾಗುವುದು. ತರಬೇತಿ ಶುಲ್ಕ 500 ಆಗಿರುತ್ತದೆ. ಶ್ರೀ ಕನ್ನೇಗೌಡ ಕ್ರೀಡಾಂಗಣದಲ್ಲಿ 7 ರಿಂದ 18 ವಯೋವುತಿಯೊಳಗಿನವರಿಗೆ 7 ರಿಂದ 18ರ ವಯೋವುತಿಯೊಳಗಿನವರಿಗೆ 7 ರಿಂದ 18ರ ವಯೋವುತಿಯೊಳಗಿನವರಿಗೆ ಕ್ರಿಕೆಟ್ ಕ್ರೀಡೆ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ಶುಲ್ಕ ರು. ಒಂದು ಸಾವಿರ ಆಗಿರುತ್ತದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿವುಳ್ಳ ಕ್ರೀಡಾಪಟುಗಳು ಅರ್ಜಿ ನಮೂನೆ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಚಾಮುಂಡಿ ವಿಹಾರ ಕ್ರೀಡಾಂಗಣದ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಏ. 16ರೊಳಗೆ ತಲುಪಿಸಬೇಕು. ಅರ್ಜಿ ಸಲ್ಲಿಸಿದ ಕ್ರೀಡಾಪಟುಗಳು ಏ.21ರ ಬೆಳಗ್ಗೆ 7ಕ್ಕೆ ಕ್ರೀಡಾ ಸಮವಸ್ತ್ರಗಳನ್ನು ಧರಿಸಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ತರಬೇತಿಯನ್ನು ಬೆಳಗ್ಗೆ 6.30 ರಿಂದ 8.30 ಮತ್ತು ಸಂಜೆ 4.30 ರಿಂದ 6.30ರವರೆಗೆ ನಡೆಸಲಾಗುವುದು.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕೆ.ಸುರೇಶ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್, ಇವರನ್ನು ಖುದ್ದಾಗಿ ಅಥವಾ ದೂ. 2564179 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement