ತಾ. ರೈತರಿಗೆ ಕೃಷಿ ಉಪಕರಣ ವಿತರಣೆ
ಭೇರ್ಯ:ಕೆ.ಆರ್. ನಗರ ತಾಲೂಕಿನಲ್ಲಿ 401 ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಈಗಾಗಲೇ 185 ಸಂಘಗಳಿಗೆ 2.25 ಲಕ್ಷ ರು. ವೆಚ್ಚದಲ್ಲಿ ಕೃಷಿ ಉಪಕರಣಗಳನ್ನು ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಿ. ಅಶೋಕ್ ಹೇಳಿದರು.
ಸುಗ್ಗನಹಳ್ಳಿ ಗ್ರಾಮದಲ್ಲಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ರೈತರಿಗೆ ಕೃಷಿ ಉಪಕರಣಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಸುಗ್ಗನಹಳ್ಳಿ ಗ್ರಾಮದಲ್ಲಿ ನುರಿತ ರೈತರಿದ್ದು, ಅವರಿಗೆ ಕೃಷಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲು, ಪ್ರಗತಿ ಬಂಧು ಸ್ವಸಹಾಯ ಸಂಘದಡಿಯಲ್ಲಿ ತೊಡಗಿಸಿರುವ ರೈತರಿಗೆ ಕೃಷಿಯಲ್ಲಿ ಹೆಚ್ಚು ಲಾಭಾದಾಯಕ ಪಡೆಯುಲು ಮತ್ತು ಕಡಿಮೆ ಖರ್ಚು ಮಾಡಿ, ಉಳಿತಾಯವಾಗಲೆಂದು ಅವರಿಗೆ ಬೇಕಾದ ಕೃಷಿ ಉಪಕರಣಗಳನ್ನು ನೀಡಲಾಗಿದ್ದು, ಅದರಂತೆ ಗ್ರಾಮದ 6 ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ವೀರಭದ್ರಶೆಟ್ಟಿ, ಸಂಪತ್ ಕುಮಾರ್, ಕೃಷಿ ಯೋಜನಾಧಿಕಾರಿ ಬಸವರಾಜು, ಮೇಲ್ವಿಚಾರಕಿ ಅನಿತಾ, ರಾಜು, ಒಕ್ಕೂಟದ ಅಧ್ಯಕ್ಷೆ ಮಂಜುಳ, ಸೇವಾಪ್ರತಿನಿಧಿ ಕಲ್ಪನಾ, ಕರಿಯಮ್ಮ ಇತರರು ಇದ್ದರು.