ಮಾಲಿಕುಲರ್ ಸ್ಪೆಕ್ಟ್ರೋಸ್ಕೋಪಿ ಕುರಿತ ಎರಡು ದಿನಗಳ ವಿಚಾರ ಸಂಕಿರಣ
ನಂಜನಗೂಡು: ಪಟ್ಟಣದ ಜೆಎಸ್ಎಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಯುಜಿಸಿ ಪ್ರಾಯೋಜಕತ್ವದಲ್ಲಿ ಮಾಲಿಕುಲರ್ ಸ್ಪೆಕ್ಟ್ರೋಸ್ಕೋಪಿ ಕುರಿತ ಎರಡು ದಿನಗಳ ವಿಚಾರ ಸಂಕಿರಣ ನಡೆಯಿತು.
ಮೈಸೂರಿನ ಮಾನಸಗಂಗೋತ್ರಿಯ ರಾಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ವೈ.ಎಸ್. ಯತಿರಾಜನ್ ಎಕ್ಸರೇ ಕ್ರಿಸ್ಟಲೋಗ್ರಫಿ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ನಂತರ ನಡೆದ ಎರಡು ತಾಂತ್ರಿಕ ಗೋಷ್ಠಿಗಳಲ್ಲಿ ಧಾರವಾಡದ ಕರ್ನಾಟಕ ವಿವಿ ರಾಸಾಯನಶಾಸ್ತ್ರ ಪ್ರಾಧ್ಯಾಪಕ ಡಾ.ಎಂ.ವಿ. ಕುಲಕರ್ಣಿ, ಮಹಾರಾಷ್ಟ್ರದ ಶಿವಾಜಿ ವಿವಿ ಸಾವಯವ ರಾಸಾಯನಶಾಸ್ತ್ರ ಪ್ರಾಧ್ಯಾಪಕ ಡಾ.ಜಿ.ಎಸ್. ರಾಶಿನ್ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಮಂಡ್ಯ ಪಿಇಎಸ್ ಕಾಲೇಜಿನ ರಾಸಾಯನಶಾಸ್ತ್ರ ಪ್ರಾಧ್ಯಾಪಕ ಹಾಗೂ ಮೈಸೂರು ವಿವಿ ಕಾಸಗಿ ಕಾಲೇಜುಗಳ ವಿಭಾಗದ ಅಧ್ಯಾಪಕ ಸಂಘದ ಅಧ್ಯಕ್ಷ ಡಾ.ಸಿ.ಆರ್. ರಾಜು, ಜೆಎಸ್ಎಸ್ ಮುಕ್ತ ಶಾಲೆಯ ನಿರ್ದೇಶಕ ಡಾ.ಕೆ.ಎಂ. ವೀರಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೊ. ಕೆ.ರಾಮಮೂರ್ತಿರಾವ್ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಮುನಾಫ್, ಕೋಲಾರದ ಡಾ. ಸದಾಶಿವಮೂರ್ತಿ ಮತ್ತು ರಾಮನಗರದ ಮಲ್ಲಪ್ಪ ಮಾತನಾಡಿದರು.
ಪೂಜಾ ಮತ್ತು ಜ್ಯೋತಿ ಪ್ರಾರ್ಥಿಸಿದರು. ಎಸ್. ಲಕ್ಷ್ಮೀ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜನಾಧಿಕಾರಿ ಡಾ.ಎಂ.ಕೆ. ಮಂಜುಳ ಎರಡು ದಿನಗಳ ವಿಚಾರ ಸಂಕಿರಣದ ವರದಿ ಮಂಡಿಸಿ, ವಂದಿಸಿದರು. ಹಾಜಿರಾ ಬಾನು ನಿರೂಪಿಸಿದರು.