ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಂಸ್ಕೃತಿಕ ಹಬ್ಬ ವಿದ್ಯುತ್-2014

Srinivasa Murthy VN
Updated On : 14 Mar 2014, 12:47 pm

ಮೈಸೂರು: ನಗರದ ವಿದ್ಯಾವರ್ಧಕ ಎಂಜಿನಿಯರ್ ಕಾಲೇಜಿನಲ್ಲಿ ಮಾ.14 ರಿಂದ 16 ರವರೆಗೆ ಸಾಂಸ್ಕೃತಿಕ ಹಬ್ಬ ವಿದ್ಯುತ್ - 2014ನ್ನು ಅಚರಿಸುತ್ತಿದೆ. ಇದರ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದೆ. ಮಾ.14 ರಂದು ಮಾಹಿತಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಎಸ್‌ಪಿಐ ಸಂಸ್ಥೆಯ ಮುಖ್ಯಸ್ಥ ಗಿರೀಶ್ ಕರುಣಾಕರನ್ ಮುಖ್ಯಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆ, ಭಾಷಣ ಸ್ಪರ್ಧೆ, ನೃತ್ಯ, ಫ್ಯಾಷನ್ ಶೋ, ಹಾಡುಗಾರಿಕೆ, ಚಿತ್ರ ಸ್ಪರ್ಧೆ ನಡೆಯಲಿದೆ. ಮಾ.16ರ ಬೆಳಗ್ಗೆ ಮ್ಯಾರಥಾನ್ ಜರುಗಲಿದೆ. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಉದ್ಘಾಟಿಸುವರು. ಸಂಜೆ ವೇಳೆ ಅನೇಕ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕರಕುಶಲ ವಸ್ತುಗಳ ಪ್ರದರ್ಶನ
ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ಮಾ.14ರ ಸಂಜೆ 5ಕ್ಕೆ ಗ್ಯಾಲರಿಯಲ್ಲಿ ಕಲಾವಿದೆ ಡಾ.ಜಮುನಾರಾಣಿ ವಿ. ಮಿರ್ಲೆ ಅವರ ಹಸ್ತ ಕೌಶಲ್ಯದಿಂದಾದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಹಿರಿಯ ರಂಗಕರ್ಮಿ ಶ್ರೀಕಂಠಗುಂಡಪ್ಪ ಉದ್ಘಾಟಿಸುವರು. ಮ.ಗು. ಸದಾನಂದಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಲ್. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸುವರು.

ಶ್ರೀಮದ್ ಭಗವದ್ಗೀತಾ
ಶ್ರೀಕೃಷ್ಣ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾ.14ರ ಸಂಜೆ 5.30ಕ್ಕೆ ಗೋಕುಲಂ 3ನೇ ಹಂತದ ಶ್ರೀಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಕರುಣಾಕರಾನಂದಜೀ ಅವರು ಶ್ರೀಮದ್ ಭಗವದ್ಗೀತಾ ಕುರಿತು ಉಪನ್ಯಾಸ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ಹೇಳಿದ್ದಾರೆ.

ನಾಳೆ ರಾಗ ರಸ ರಂಗು
ಪಂ. ತಾರಾನಾಥ್ ಫೌಂಡೇಷನ್ ಸಂಸ್ಥೆ ಮಾ. 15ರ ಸಂಜೆ 7ಕ್ಕೆ ರಂಗಾಯಣದ ವನರಂಗದಲ್ಲಿ ರಾಗ ರಸ ರಂಗು ಸರೋದ್ ಸೊಬಗು ವೀಣೆಯ ಬೆಡಗು ಕಾರ್ಯಕ್ರಮ ಆಯೋಜಿಸಿದೆ. ಪಂ. ರಾಜೀವ್ ತಾರಾನಾಥ್  ಸರೋದ್ ನುಡಿಸಲಿದ್ದು, ವಿದ್ವಾನ್ ಡಿ. ಬಾಲಕೃಷ್ಣ ವೀಣೆ ನುಡಿಸುವರು. ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮೃದಂಗ ಮತ್ತು ಪಂಡಿತ್ ಉದಯರಾಜ್ ಕರ್ಪೂರ್ ತಬಲ ನುಡಿಸುವರು. ಪ್ರವೇಶ ಉಚಿತ ಎಂದು ತಾರಾನಾಥ್ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಅಭಿನಂದನೆ

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ ಮಾ. 15ರ ಸಂಜೆ 4ಕ್ಕೆ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಿದೆ. ಲೇಖಕಿ ನಾಗಲಕ್ಷ್ಮಿ ಹರಿಹರೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. 12ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಕೆ. ಬೈರವಮೂರ್ತಿ, ಚಾಮರಾಜನಗರ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ, ಹಾಂಕಾಂಗ್ ವಿಶ್ವಕನ್ನಡ ಸಮ್ಮೇಳನದ ಅಧ್ಯಕ್ಷ ಡಾ. ಮಳಲಿ ವಸಂತಕುಮಾರ್ ಮತ್ತು ಯಕ್ಷಗಾನ ಮತ್ತು ಬಯಲಾಟ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ.ಎಸ್. ಭಟ್ಟ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಲೇಖಕ ಬನ್ನೂರು ಕೆ. ರಾಜು ಮತ್ತು ಜಯಪ್ಪ ಹೊನ್ನಾಳಿ ಅಭಿನಂದಿಸುವರು. ಮಕ್ಕಳ ತಜ್ಞ ಡಾ.ಎಚ್.ಬಿ. ರಾಜಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರಂಗನಾಥ್ ಮೈಸೂರು ಕವಿಗೋಷ್ಠಿ ಅಧ್ಯಕ್ಷತೆ ವಹಿಸುವರು.

ಗ್ರಾಮ ಸಹಾಯಕರ ಕಾಯಂಗೆ ಆಗ್ರಹ

ಟಿ. ನರಸೀಪುರ: ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ದುಡಿಯುತ್ತಿರುವ ಗ್ರಾಮ ಸಹಾಯಕ ನೌಕರರನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿ, ಸೂಕ್ತ ವೇತನ ಹಾಗೂ ಸೇವಾ ಭದ್ರತೆಯನ್ನು ನೀಡಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಒತ್ತಾಯಿಸಿದರು. ರಾಜ್ಯಾದ್ಯಂತ 10,400ಕ್ಕೂ ಹೆಚ್ಚು ಗ್ರಾಮ ಸಹಾಯಕರು ಕಂದಾಯ ಇಲಾಖೆಯಲ್ಲಿ ಕಳೆದ ಮೂರ್ನಾಲು ದಶಕಗಳಿಂದ ಕನಿಷ್ಠ ವೇತನವೂ ಇಲ್ಲದೆ ದುಡಿಯುತ್ತಿದ್ದಾರೆ. ಸರ್ಕಾರ ಕೂಡಲೇ ಇವರೆಲ್ಲರನ್ನೂ ಕಾಯಂಗೊಳಿಸಿ ಎಲ್ಲ ಸೌಕರ್ಯ ಒದಗಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಿಂದಿನ ಜೆ.ಎಚ್. ಪಟೇಲರ ನೇತೃತ್ವದ ಜನತಾ ಸರ್ಕಾರ ಅವಧಿಯಿಂದಲೇ ಗ್ರಾಮ ಸಹಾಯಕರನ್ನು ಕಾಯಂಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿದೆಯಾದರೂ ಅದಿನ್ನೂ ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ. ಗ್ರಾಮ ಸಹಾಯಕ ನೌಕರರೆಲ್ಲರೂ ದಲಿತರಾಗಿದ್ದು, ಕನಿಷ್ಠಿ ವೇತನ ಹಾಗೂ ಸೇವಾ ಭದ್ರತೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಉತ್ತಮ ಜೀವನ ನಡೆಸಲು ಸರ್ಕಾರ ನೆರವಾಗಬೇಕು ಎಂದು ತಿಳಿಸಿದರು.

ಇಂದು ಕರಕುಶಲ ವಸ್ತುಗಳ ಪ್ರದರ್ಶನ
ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ಮಾ.14ರ ಸಂಜೆ 5ಕ್ಕೆ ಗ್ಯಾಲರಿಯಲ್ಲಿ ಕಲಾವಿದೆ ಡಾ.ಜಮುನಾರಾಣಿ ವಿ. ಮಿರ್ಲೆ ಅವರ ಹಸ್ತ ಕೌಶಲ್ಯದಿಂದಾದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಹಿರಿಯ ರಂಗಕರ್ಮಿ ಶ್ರೀಕಂಠಗುಂಡಪ್ಪ ಉದ್ಘಾಟಿಸುವರು. ಮ.ಗು. ಸದಾನಂದಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಲ್. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸುವರು.

ಶ್ರೀಮದ್ ಭಗವದ್ಗೀತಾ
ಶ್ರೀಕೃಷ್ಣ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾ.14ರ ಸಂಜೆ 5.30ಕ್ಕೆ ಗೋಕುಲಂ 3ನೇ ಹಂತದ ಶ್ರೀಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಕರುಣಾಕರಾನಂದಜೀ ಅವರು ಶ್ರೀಮದ್ ಭಗವದ್ಗೀತಾ ಕುರಿತು ಉಪನ್ಯಾಸ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement