ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಿ

Srinivasa Murthy VN
Updated On : 16 Mar 2014, 12:46 pm

ಮೈಸೂರು: ಕೆಲಸಕ್ಕಿದ್ದ ಇಬ್ಬರು ವ್ಯಕ್ತಿಗಳು ಮಾಲೀಕನ ಮನೆಯಲ್ಲಿ ಕಳವು ಮಾಡಿದ್ದು, ಒಬ್ಬಾತನ ಭಾವಚಿತ್ರವು ಪೊಲೀಸರಿಗೆ ಸಿಸಿ ಕ್ಯಾಮೆರಾದಿಂದ ಲಭ್ಯವಾಗಿದೆ. ಕೆ.ಜಿ.ಕೊಪ್ಪಲು ನಿವಾಸಿ ಹಾಗೂ ಸಮೋಸ ವ್ಯಾಪಾರಿ ದಿನೇಶ್ ಎಂಬವರಿಗೆ ಸೇರಿದ ಮನೆಯಲ್ಲಿ ಮಾ.1ರಂದು ಕಳವು ನಡೆದಿತ್ತು. ಇವರ ಬಳಿ ಕೆಲಸಕ್ಕಿದ್ದ ಪಿರಿಯಾಪಟ್ಟಣ ಮೂಲದ ಆನಂದ್ ಮತ್ತು ರಾಜ ಎಂಬವರು 3.16 ಲಕ್ಷ ಮೌಲ್ಯದ 167 ಗ್ರಾಂ. ಚಿನ್ನಾಭರಣ ಹಾಗೂ 52 ಸಾವಿರ ಕಳವು ಮಾಡಿದ್ದಾರೆ.ಙ ಇಬ್ಬರು ಆರೋಪಿಗಳ ಪೈಕಿ ಆನಂದನ ಚಹರೆಯು ಸಿಸಿ ಕ್ಯಾಮರಾದಿಂದ ಲಭ್ಯವಾಗಿದೆ. ತಲೆ ಮರೆಸಿಕೊಂಡಿರುವ ಆನಂದನ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಪೊಲೀಸರು ಕೋರಿದ್ದಾರೆ.

ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ
ಮೈಸೂರು:
ಕುಂಬಾರಕೊಪ್ಪಲು ಮಹದೇಶ್ವರ ಬಡಾವಣೆ ನಿವಾಸಿ ಎಚ್ಎಂ. ನಾಗರಾಜು ಎಂಬವರ ಪತ್ನಿ ಯಶೋದಾ (29), ಮಕ್ಕಳಾದ ಕೀರ್ತನಾ (8) ಮತ್ತು ಪೃಥ್ವಿ (6) ಮಾ.8ರಿಂದ ನಾಪತ್ತೆಯಾಗಿದ್ದಾರೆ. ಯಶೋಧ ಚಹರೆ- 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಬಲ ಅಂಗೈನಲ್ಲಿ ಸುಟ್ಟ ಗಾಯದ ಗುರುತಿದೆ. ಕೀರ್ತನಾ ಚಹರೆ- 2.7 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ. ಪೃಥ್ವಿ ಚಹರೆ- 2 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು. ಈ ಮೂವರು ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418317, 517 ಸಂಪರ್ಕಿಸಲು ವಿಜಯನಗರ ಠಾಣೆ ಪೊಲೀಸರು ಕೋರಿದ್ದಾರೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ
ಮೈಸೂರು:
ಮಹಾರಾಷ್ಟ್ರದ ನಾಸಿಕ್ನ ಕುಸುಮಾಗ್ರಾಜ್ ಸಾಮಕ್ ಸಭಾಂಗಣದಲ್ಲಿ ಮಾ. 20ರಿಂದ 23ರವರೆಗೆ ನಡೆಯಲಿರುವ 6ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕೆ. ಗೋಪಿನಾಥ್ ರಚನೆ, ನಿರ್ಮಾಣ ಮತ್ತು ನಿರ್ದೇಶನದ 30 ನಿಮಿಷಗಳ ಕನ್ನಡ ಕಿರುಚಿತ್ರ ನೆಮ್ಮದಿ ಆಯ್ಕೆಯಾಗಿದೆ. ಮನುಷ್ಯನ ಜೀವನ ಶೈಲಿ, ಆರೋಗ್ಯ ಮತ್ತು ಅಕ್ಷರದ ಮಹತ್ವದ ಕಥೆ ಕುರಿತು ನಿರ್ಮಿಸಿದ ನೆಮ್ಮದಿ ಕನ್ನಡ ಕಿರುಚಿತ್ರಕ್ಕೆ ಮುಖ್ಯ ತಾರಾಗಣದಲ್ಲಿ ಆರ್ಯಭಟ ಪ್ರಶಸ್ತಿ ವಿಜೇತ ಬಾಲಸುಬ್ರಮಣ್ಯ ಮತ್ತು ರೂಪಾ ಅಭಿನಯಿಸಿದ್ದಾರೆ.

ಮಗುವಿನೊಂದಿಗೆ ತಾಯಿ ನಾಪತ್ತೆ
ಮೈಸೂರು:
ಚಾಮರಾಜ ಮೊಹಲ್ಲಾ ತುಳಸಿಮಠ ರಸ್ತೆ ನಿವಾಸಿ ಬಿ.ಎಂ.ಶ್ರೀಧರ್ ಎಂಬವರ ಪತ್ನಿ ಲಕ್ಷ್ಮಿ(20) ಮತ್ತು ಒಂದೂವರೆ ವರ್ಷದ ಮಗು ಎಸ್. ಕೃತಿಕಾ ಬುಧವಾರದಿಂದ ನಾಪತ್ತೆಯಾಗಿದ್ದಾರೆ. ಲಕ್ಷ್ಮಿ ಚಹರೆ- 5.3 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ತೋಳಿನ ಮೇಲೆ ಹಚ್ಚೆ ಇದೆ. ಕೃತಿಕಾ ಚಹರೆ- ಒಂದೂವರೆ ಅಡಿ ಎತ್ತರ, ಗುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418320 ಸಂಪರ್ಕಿಸಲು ಲಕ್ಷ್ಮಿಪುರಂ ಠಾಣೆಯ ಎಸ್ಐ ಕುಮಾರ ಕೋರಿದ್ದಾರೆ.

ಕಳ್ಳನ ಬಂಧನ: 9 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಸ್ತು ವಶ
ಮೈಸೂರು:
ನಗರದ ಸಿಸಿಬಿ ಘಟಕದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, 9 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಎಂಎಸ್ ಪಾಳ್ಯ ನಿವಾಸಿ ಮುನಿಯಪ್ಪ ಎಂಬವರ ಪುತ್ರ ಲಿಂಗರಾಜು ಅ. ಸೈಯ್ಯದ್ ಶಾಹಿದ್ (31) ಬಂಧಿತ. ಈತನಿಂದ 285 ಗ್ರಾಂ. ಚಿನ್ನ ಹಾಗೂ 700 ಗ್ರಾಂ. ಬೆಳ್ಳಿ ವಸ್ತುಗಳು ಸೇರಿ 9 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ ನಜರಾಬಾದ್, ನರಸಿಂಹರಾಜ , ಜಯಲಕ್ಷ್ಮಿಪುರಂ, ಕೃಷ್ಣರಾಜ, ಸರಸ್ವತಿಪುರಂ ಹಾಗೂ ಮೇಟಗಳ್ಳಿ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 6 ಮನೆ ಕಳವು ಪ್ರಕರಣಗಳು ಪತ್ತೆಯಾಗಿದೆ. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಂ.ಎಂ. ಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ, ಇನ್ಸ್ಪೆಕ್ಟರ್ಗಳಾದ ಪಿ.ಎ. ಸೂರಜ್, ಆರ್.ಜಗದೀಶ್, ಎಸ್ಐ ಶ್ರೀನಿವಾಸಗೌಡ, ಎಎಸ್ಐಗಳಾದ ಎಂ.ಜೆ. ಜಯಶೀಲನ್, ಎಂ.ಡಿ. ಶಿವರಾಜು, ಎ.ಜಾರ್ಜ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement