ನ್ಯಾಯಾಧಿಕರಣ ಪೀಠದ ಕಲಾಪ ಅಂತ್ಯ
ಮೈಸೂರು: ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧಿಕರಣ ಪೀಠದ ಎರಡು ದಿನಗಳ ಕಲಾಪವು ಗುರುವಾರ ಅಂತ್ಯವಾಯಿತು. ಮೈಸೂರಿನ ನಜರ್ಬಾದ್ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ಬುಧವಾರ ಮತ್ತು ಗುರುವಾರ ದೆಹಲಿ ಹೈಕೋರ್ಟ್ನ ನ್ಯಾಯಾಧೀಶರಾದ ಸುರೇಶ್ ಕೈಟ್ ಅವರ ಅಧ್ಯಕ್ಷತೆಯಲ್ಲಿ ಕಲಾಪ ನಡೆಯಿತು. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಸಿಮಿ ಸಂಘಟನೆಯನ್ನು ಕಾನೂನು ಬಾಹಿರ ಸಂಸ್ಥೆ ಎಂದು ಪರಿಗಣಿಸುವ ಬಗ್ಗೆ ಎರಡು ದಿನ ಮೈಸೂರಿನಲ್ಲಿ ವಿಚಾರಣೆ ನಡೆಯಿತು.