ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶ್ರೀಕಂಠೇಶ್ವರನ ಗರ್ಭಗುಡಿ ದ್ವಾರಕ್ಕೆ ಬೆಳ್ಳಿ ಬಾಗಿಲು

Srinivasa Murthy VN
Updated On : 9 May 2014, 10:57 am

ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿರುವ ಸ್ವಾಮಿಯವರ ಗರ್ಭಗುಡಿಯ ಪ್ರವೇಶ ದ್ವಾರಕ್ಕೆ ಬೆಳ್ಳಿ ಬಾಗಿಲುಗಳು ಸಿದ್ಧವಾಗಿದ್ದು, ಇದರ ಜೋಡಣಾ ಕಾರ್ಯ ನಡೆದಿದೆ.
ಶುಕ್ರವಾರ ದೇಗುಲದಲ್ಲಿ ಬೆಳ್ಳಿ ಬಾಗಿಲಿಗೆ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಜೋಡನೆ ಕಾರ್ಯ ಆರಂಭಿಸಿದರು. ಬೆಂಗಳೂರಿನ ಉದ್ಯಮಿ ಸಿ.ಅಜಯ್‌ಕುಮಾರ್ ತಮ್ಮ ಹರಕೆಯನ್ನು ಶ್ರೀಕಂಠನಿಗೆ ಸಮರ್ಪಿಸಲು ಅಂದಾಜು 15 ಲಕ್ಷ ವೆಚ್ಚದಲ್ಲಿ 24.5 ಕೆ.ಜಿ ಬೆಳ್ಳಿಯನ್ನು ಉಪಯೋಗಿಸಿ, ತಮಿಳುನಾಡು ರಾಜ್ಯದ ಮಧುರೈನ ಹಳಗಿರಿಯವರ ತಂಡ ನಾಲ್ಕು ತಿಂಗಳ ಪರಿಶ್ರಮದಿಂದ ಸುಂದರ ಕೆತ್ತನೆಯಿಂದ ಆಕರ್ಷಕ ಚಿತ್ತಾರ ಮೂಡಿಸಿ, ಈ ಬೆಳ್ಳಿ ಬಾಗಿಲನ್ನು ಪೂರ್ಣಗೊಳಿಸಿದ್ದಾರೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಬೆಳ್ಳಿಯ ಬಾಗಿಲ ವಿಶೇಷವೇನೆಂದರೆ ಗಣಪತಿ, ಸುಬ್ರಮಣ್ಯ, ದಕ್ಷಿಣಮೂರ್ತಿ, ಈಶ್ವರ ಪಾರ್ವತಿ, ನಾರಾಯಣಸ್ವಾಮಿ, ವಿಷ್ಣು, ನಂದಿ ಸೇರಿದಂತೆ 8 ವಿಗ್ರಹಗಳನ್ನು ಕೆತ್ತಲಾಗಿದೆ. ಇದನ್ನು ನೋಡಲು ಸಾವಿರಾರು ಭಕ್ತರು ಆಗಮಿಸಿ ಶ್ರೀಕಂಠೇಶ್ವರ ದ್ವಾರದ ಬೆಳ್ಳಿ ಬಾಗಿಲ ಕಾಮಗಾರಿ ವೀಕ್ಷಿಸಿ ಪುನೀತರಾದರು.
ಉದ್ಯಮಿ ಸಿ. ಅಜಯ್‌ಕುಮಾರ್ ಪರವಾಗಿ ದೇವರಾಜ್, ಶ್ರೀನಿವಾಸ್, ನರಸಿಂಹ ಅವರು ದೇಗುಲಕ್ಕೆ ಆಗಮಿಸಿ ಶುಕ್ರವಾರ ಬೆಳ್ಳಿಯ ಬಾಗಿಲನ್ನು ನೀಡಿದರು. ಇದೇ ವೇಳೆ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎಸ್. ಮೋಹನ್ ದೇಗುಲದ ಆಗಮಿಕರಾದ ನಾಗಚಂದ್ರ ದೀಕ್ಷಿತ್, ಕೇಂದ್ರ ಪ್ರಾಚ್ಯವಸ್ತು ಸಂರಕ್ಷಣೆ ಇಲಾಖೆಯ ಭಾಷ್ಯಂ, ಸದಸ್ಯರಾದ ಎನ್.ಎಸ್. ಶಿವನಾಗಪ್ಪ, ಮಲ್ಲಿಕಾರ್ಜುನ್, ಡಿ.ರಾಮಣ್ಣ, ದೇಗುಲದ ಪಾರು ಪತ್ತೆಗಾರ ಶಾಮಣ್ಣ, ಪ್ರಮುಖರಾದ ಎನ್.ಎ. ಸದಾಶಿವು, ವಾಸುದೇವ, ಸ್ಥಳ ಪುರೋಹಿತ್ ಎನ್.ಸಿ. ಶ್ರೀಕಂಠಜೋಯಿಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement