ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅನುದಾನಕ್ಕೆ ಕ್ರಿಯಾ ಯೋಜನೆ

Srinivasa Murthy VN
Updated On : 28 May 2014, 10:48 am

ನಂಜನಗೂಡು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ರು. 86.41 ಕೋಟಿ ಅನುದಾನ ಕುರಿತಂತೆ ಕ್ರಿಯಾ ಯೋಜನೆ ರೂಪಿಸಲು ಇಲ್ಲಿನ ತಾಪಂ ತನ್ನ ಅನುಮೋದನೆ ನೀಡಿದೆ. ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ತಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ ಕ್ರಿಯಾಯೋಜನೆಗೆ ಅನುಮತಿ ಕೋರಿ ಸದಸ್ಯರು ತಮ್ಮ ಒಪ್ಪಿಗೆ ನೀಡಿದರು.
ತಾಲೂಕಿನಲ್ಲಿ 73 ಸಾವಿರ, ಪಟ್ಟಣದಲ್ಲಿ 18.5 ಸಾವಿರ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ದಾಖಲಾಗಿದ್ದು, ಜೂ. 5ರ ನಂತರ ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಆಹಾರ ಇಲಾಖೆಯ ರಾಜೇಂದ್ರ ಪ್ರಸಾದ್ ತಿಳಿಸಿದರು.
ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಿಟಿಜನ್ ಶಾಲೆಯಲ್ಲಿ ಮನಬಂದಂತೆ ಶುಲ್ಕ ಹಾಗೂ ಕಳಪೆ ಗುಣಮಟ್ಟದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ. ಆ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯ ಶ್ರೀಕಂಠು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ಪುರುಷೋತ್ತಮ್ ಶಾಲೆಗೆ ನಾಳೆಯೆ ಭೇಟಿ ನೀಡಿ ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಲೂಕಿನ ಹರದನಹಳ್ಳಿ ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಅಲ್ಲಿನ ನೀವಾಸಿಗಳು ಕಾಡು ಜನರಂತೆ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಸೆಸ್ಕ್‌ನವರು ತೋರಿಕೆಗಾಗಿ ಕಂಬ ಹಾಕಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಸದಸ್ಯೆ ಗೀತಾ ಗೋವಿಂದರಾಜು ಆರೋಪಿಸಿದಾಗ ಸೆಸ್ಕ್ ಅಧಿಕಾರಿಗಳು ಕೂಡಲೆ ಸಂಪರ್ಕ ಕೊಡಿಸುವ ಭರವಸೆ ನೀಡಿದರು. ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ 234 ಮಕ್ಕಳಿಗೆ ಅಪೌಷ್ಟಿಕತೆ ಕೊರತೆ ಕಂಡುಬಂದಿದ್ದು, ಅವರಿಗೆ ರಕ್ತದ ಮಾದರಿಯನ್ನು ಪರಿಶೀಲಿಸಿ, ಸಿಎಫ್‌ಟಿಆರ್‌ಐ ನಿಂದ ಆಹಾರ ವಿತರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಜೊತೆ ಚರ್ಚಿಸಿ, ಪ್ರಸ್ತುತ ಅಲ್ಲಿನ ಮಕ್ಕಳಿಗೆ, ಹಾಲು ಮೊಟ್ಟೆ ನೀಡುತ್ತಿದ್ದೇವೆ ಎಂದು ಸೀತಾಲಕ್ಷ್ಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement