ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿವೇಕ ಇಲ್ಲದ ಜ್ಞಾನ ಅಪ್ರಯೋಜಕ

Srinivasa Murthy VN
Updated On : 28 May 2014, 10:47 am

ಮೈಸೂರು: ಮನುಷ್ಯನಿಗೆ ವಿವೇಕ ಇಲ್ಲದ ಜ್ಞಾನವು ಅಪ್ರಯೋಜಕ ಎಂದು ಸಂಸ್ಕೃತಿ ಚಿಂತಕ ಪ್ರೊ.ಕಿಕ್ಕೇರಿ ನಾರಾಯಣ ಹೇಳಿದರು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯು ಲಕ್ಷ್ಮಿಪುರಂನ ವಿವಿಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಭಗವಾನ್ ಬುದ್ಧ ಮತ್ತು ಮಹಾ ಮಾನವತಾವಾದಿ ಬಸವಣ್ಣನವರ ಜಯಂತ್ಯುತ್ಸವ ಉದ್ಘಾಟಿಸಿ ಉಪನ್ಯಾಸ ನೀಡಿದರು.
ಅಂಧಾಕಾರವೆಂಬ ಅಜ್ಞಾನ ತೊಲಗಿಸಬೇಕಾದರೆ ಜ್ಞಾನದ ಬೆಳಕು ಅವಶ್ಯಕವೆಂದು ಭಗವಾನ್ ಬುದ್ಧ ಸಾರಿದ್ದಾರೆ. ಅಂತೆಯೇ ಪಂಚೇಂದ್ರಿಯ ನಿಗ್ರಹಿಸಬೇಕಾದರೆ ಆರನೇ ಇಂದ್ರೀಯ ಮನಸ್ಸೆಂಬ ಪ್ರಜ್ಞೆಯೂ ಇರಬೇಕು. ಮನಸ್ಸು ಪಕ್ವವಾದಾಗ ವಿವೇಕ ಜಾಗೃತಿಯಾಗಲಿದೆ. ವಿವೇಕ ಇಲ್ಲದ ಜ್ಞಾನವೂ ಪ್ರಯೋಜನವಾಗಲಾರದು ಎಂದರು.
ಆಸೆಗಳನ್ನು ನಿಗ್ರಹಿಸಿದಾಗ ಮಾತ್ರ ಮನಸ್ಸಿಗೆ ಶಾಂತಿ ತಂದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಕರುಣೆಯಿಂದ ಎಲ್ಲರನ್ನೂ ಕಂಡು ಪ್ರೀತಿಸಿದಾಗ ದ್ವೇಷ ದೂರವಾಗಲಿದೆ. ಅಂತಹ ವಾತಾವರಣ ಹೊಂದಬೇಕಾದರೆ ಮೊದಲು ನನ್ನೊಳಗೆ ನನ್ನನ್ನು ಕಂಡುಕೊಳ್ಳಬೇಕು ಎಂದು ಬುದ್ಧ ಹೇಳಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬುದ್ಧ ಮತ್ತು ಬಸವ ಅವರ ಆಲೋಚನೆಗಳಿಗೆ ತೀರ ಸಾಮೀಪ್ಯವಿದ್ದು, ಇಬ್ಬರು ಮಹನೀಯರು ಕಾಯಕಕ್ಕೆ ಒತ್ತು ನೀಡಿದವರು. ದಯೆಯೇ ಧರ್ಮದ ಮೂಲವೆಂದು ಬಸವಣ್ಣ ಸಾರಿದರೆ, ಪ್ರತಿಯೊಬ್ಬರಲ್ಲೂ ಕರುಣೆ ಇರಬೇಕು ಎಂದು ಬುದ್ಧನ ಸಂದೇಶವನ್ನು ಸ್ಮರಿಸಬೇಕು ಎಂದರು.
ಕುಲಪತಿ ಪ್ರೊ.ಸರ್ವಮಂಗಳಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ವೈ.ಎಸ್. ಸಿದ್ದೇಗೌಡ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಎಸ್. ಶೇಖರ್ ಪ್ರಾಸ್ತಾವಿಕ ಮಾತುಗಳಾಡಿದರು. ಅತಿಥಿ ಉಪನ್ಯಾಸಕಿ ಡಾ. ಚೇತನ ರಾಮಕೃಷ್ಣ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement