ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಂದಿ ಜೋಗಿಗಳ ಕುಟುಂಬ ಸ್ಥಳಾಂತರಿಸಿ

Srinivasa Murthy VN
Updated On : 29 May 2014, 11:55 am

ಹುಣಸೂರು: ಪಟ್ಟಣದ ಜೂನಿಯರ್ ಕಾಲೇಜಿನ ಹಿಂಭಾಗ 20 ಹಂದಿ ಜೋಗಿಗಳ ಕುಟುಂಬ ವಾಸಿಸುತ್ತಿದ್ದು, ಹಂದಿ ಸಾಕುವುದರಿಂದ ರೋಗರುಜಿನಗಳ ತಾಣವಾಗುತ್ತಿದೆ ಎಂದು ದೂರು ಬಂದಿದೆ. ದಯಮಾಡಿ ಈ ಕುಟುಂಬಕ್ಕೆ ಬೇರೆ ಸ್ಥಳ ಗುರುತಿಸಿಕೊಡುವಂತೆ ಲೋಕಾಯುಕ್ತ ಅಧಿಕಾರಿಗಳನ್ನು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ ಮಲ್ಲಾಡಿ ಮನವಿ ಮಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ, ಈ ಅರ್ಜಿ ಸಲ್ಲಿಸಲಾಯಿತು. ಅಲ್ಲದೇ ಪಟ್ಟಣದ ನರಸಿಂಹಸ್ವಾಮಿ ತಿಟ್ಟಿನಲ್ಲಿರುವ 22 ಅಲೆಮಾರಿ ಕುಟುಂಬಗಳ ಪೈಕಿ 17 ಕುಟುಂಬಗಳಿಗೆ ನಿವೇಶನ ಗುರುತಿಸಿಕೊಡಲಾಗಿದೆ. ಮಿಕ್ಕ 5 ಕುಟುಂಬಗಳಿಗೆ ನಿವೇಶನ ಗುರುತಿಸಿ ಕಾಲೋನಿಯಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಿಸಿಕೊಡಬೇಕೆಂದು ಮಲ್ಲಾಡಿ ಕೋರಿದಾಗ, ಇನ್ನೊಂದು ವಾರದಲ್ಲಿ ಉಳಿದ 5 ಕುಟುಂಬಗಳಿಗೆ ನಿವೇಶನ ಗುರುತಿಸಿಕೊಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಎ.ರಮೇಶ್ ತಿಳಿಸಿದರು.
ತಾಲೂಕಿನ ಗಾವಡಗೆರೆಯ ಪುರೋಹಿತರ ಬೀದಿಯಲ್ಲಿ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಮನೆ ಹಾಗೂ ಶೆಡ್ ನಿರ್ಮಿಸಿದ್ದಾರೆಂದು ಪಾಂಡುರಂಗ ದಂಡೋಜಿ ಬರ್ಗೆಯವರು ಕಳೆದ ಜನವರಿಯಲ್ಲಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ, ಜಿಪಂ ಮುಖ್ಯ ಯೋಜನಾಧಿಕಾರಿ ಬಂದು ಸ್ಥಳ ಪರೀಕ್ಷೆ ನಡೆಸಿದ್ದರು. ಆದರೆ ಅಧಿಕಾರಿಯು ಬಿಳಿ ಹಾಳೆಯ ಮೇಲೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಹೋಗಿದ್ದಾರೆ. ಇದು ಅಧಿಕೃತವೇ ಸರ್ಕಾರಿ ಅಧಿಕಾರಿ ಈ ರೀತಿ ಕೊಡಬಹುದೇ? ಅದೂ ಅಲ್ಲದೇ ವರದಿಯಲ್ಲಿ ಒತ್ತುವರಿಯಾಗಿಲ್ಲವೆಂದು ಬರೆದಿದ್ದಾರೆ. ಗಾವಡಗೆರೆ ಪಂಚಾಯಿತಿಯವರೇ ಒತ್ತುವರಿಯಾಗಿದೆಯೆಂದು ತಿಳಿಸಿದ್ದಾರೆ. ದಯವಿಟ್ಟು ಇನ್ನೊಮ್ಮೆ ಸ್ಥಳ ಪರಿಶೀಲನೆ ನಡೆಸಿ, ನ್ಯಾಯ ದೊರಕಿಸಿಕೊಡಲು ಕೋರಿದರು.
ಸಭೆಯಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement