ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು, ಮಂಡ್ಯ ಅಭಿವೃದ್ಧಿಗೆ ಶ್ರಮಿಸುವೆ

Srinivasa Murthy VN
Updated On : 30 May 2014, 10:39 am

ಕ.ಪ್ರ.ವಾರ್ತೆ ಮೈಸೂರು ಮೇ 30
ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಂಡ್ಯದ ನೂತನ ಸಂಸದ ಸಿ.ಎಸ್. ಪುಟ್ಟರಾಜು ಹೇಳಿದರು.
ನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಕೆ.ವಿ. ಮಲ್ಲೇಶ್ ನೇತೃತ್ವದಲ್ಲಿ ಪಾಲಿಕೆಯ ಕೊಠಡಿಯಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಜತೆಗೆ ಮೈಸೂರಿನ ಕೆ.ಆರ್.ನಗರ ಸಹ ನನ್ನ ಲೋಕಸಭೆಯ ವ್ಯಾಪ್ತಿಗೆ ಸೇರಿರುವುದರಿಂದ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡುತ್ತೇನೆ. ನಗರ ಪಾಲಿಕೆ ಸದಸ್ಯರು ಅಭಿನಂದಿಸಿರುವುದು ಸಂತಸ ತಂದಿದೆ ಎಂದರು.
ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಜಿಪಂ ಸದಸ್ಯರಾಗಿ ಹಾಗೂ ಎರಡು ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸಿರುವ ಸಿ.ಎಸ್. ಪುಟ್ಟರಾಜು ಅವರನ್ನು ಮಂಡ್ಯದ ಜನತೆ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಪಾಂಡವಪುರ ಅಭಿವೃದ್ಧಿ ಮಾಡಿದಂತೆ, ಮಂಡ್ಯ ಹಾಗೂ ಮೈಸೂರು ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತರಬೇಕು ಎಂದ ಆಶಿಸಿದರು. ಮೇಯರ್ ಎನ್.ಎಂ.ರಾಜೇಶ್ವರಿ, ನಗರ ಪಾಲಿಕೆ ಸದಸ್ಯರಾದ ಆರ್.ಲಿಂಗಪ್ಪ, ಕೆ.ಟಿ.ಚಲುವೇಗೌಡ, ಮಹದೇವಪ್ಪ, ಶಿವಣ್ಣ, ಎಂ.ಜೆ.ರವಿಕುಮಾರ್, ರಮೇಶ್, ಚನ್ನಪ್ಪ, ಎಸ್.ಬಾಲು, ಬಿ.ಎಂ.ನಟರಾಜು, ಫೈರೋಜ್‌ಖಾನ್, ಇಂದಿರಾ ರಮೇಶ್, ಡಿ.ರಾಮು, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರ ಮಹಿಳಾಧ್ಯಕ್ಷೆ ಪ್ರೇಮಾ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಮುದ್ದುರಾಜ್, ಖಜಾಂಚಿ ಸತ್ಯನಾರಾಯಣ, ಮುಖಂಡರಾದ ಸೋಮು, ಅನಂತನಾರಾಯಣ, ಪ್ರಭುರಾಜ್, ರಿಜ್ವಾನ್ ಅಹಮದ್, ರಾಧಾಕೃಷ್ಣ ಮುಂತಾದವರು ಇದ್ದರು. ಪಾಲಿಕೆಯ ಆಡಳಿತ ಪಕ್ಷದ ನಾಯಕ ಕೆ.ವಿ. ಮಲ್ಲೇಶ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement