ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೇಂದ್ರದಿಂದ ಉತ್ತಮ ಸಹಕಾರ

Srinivasa Murthy VN
Updated On : 1 Jun 2014, 12:06 pm

ಮೈಸೂರು: ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷ ಬದಲಾಗಿದ್ದರೂ ಸಹ ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಉತ್ತಮ ಸಹಕಾರ ಸಿಗುವ ಆಶಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು. ಹುಣಸೂರಿನ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಪ್ರಕಾರ ಕೆಲಸ ಮಾಡಬೇಕಾಗುತ್ತದೆ. ಒಂದು ರಾಜ್ಯದ ಅಭಿವೃದ್ಧಿ ಎಂದರೇ ಅದು ದೇಶದ ಅಭಿವೃದ್ಧಿ ಕೂಡ ಆಗುತ್ತದೆ ಎಂದರು. ವೆಂಕಯ್ಯ ನಾಯ್ಡು ಸೇರಿದಂತೆ ರಾಜ್ಯದಿಂದ ನಾಲ್ವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಅವರು ಹಾಗೂ ಎಲ್ಲಾ ಸಂಸದರ ಸಹಕಾರ ಪಡೆದು, ರಾಜ್ಯಕ್ಕೆ ಕೇಂದ್ರದಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತೇವೆ ಎಂದರು. ಮೋದಿ ಭೇಟಿ: ದೆಹಲಿಗೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ರಾಜಿನಾಮೆ ಕೊಡಲ್ಲ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ನೀಡಿರುವ ತೀರ್ಪನ್ನು ತಲೆಬಾಗಿ ಒಪ್ಪುತ್ತೇನೆ. ಅದೇ ಅಂತಿಮ. ಅದನ್ನು ಪ್ರಶ್ನೆ ಮಾಡುವ ಹಕ್ಕಿಲ್ಲ. ಆದರೆ ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜಿನಾಮೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹುಣಸೂರಿನ ಪುರಸಭಾ ಮೈದಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮೈಸೂರಲ್ಲಿ ಸೋತಿರಬಹುದು. ಆದರೆ ಹುಣಸೂರಿನಲ್ಲಿ ಸೋತಿಲ್ಲ. ಹುಣಸೂರಿನಲ್ಲಿ 17 ಸಾವಿರ, ಪಿರಿಯಾಪಟ್ಟಣದಲ್ಲಿ 18 ಸಾವಿರ, ಚಾಮುಂಡೇಶ್ವರಿಯಲ್ಲಿ 8 ಸಾವಿರ ಮತ್ತು ನರಸಿಂಹರಾಜ ಕ್ಷೇತ್ರದಲ್ಲಿ 37 ಸಾವಿರ ಲೀಡ್ ಬಂದಿದೆ. ಆದರೂ ನಾವು ಸೋತಿದ್ದೇವೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಲೀಡ್ ಬರದಿದ್ದುದು ಇದಕ್ಕೆ ಕಾರಣ. ಸೋಲು ಏಕಾಯ್ತು ಎಂಬ ಬಗ್ಗೆ ಮಾತನಾಡಲ್ಲ ಎಂದರು.

ಟೋಲ್ ದರ ನಿಗದಿ ವಿರೋಧ
ಮೈಸೂರು: ಬೆಂಗಳೂರು- ಮೈಸೂರು- ಬಂಟ್ವಾಳ, ಮೂಲೆಹೊಳೆ- ಗುಂಡ್ಲುಪೇಟೆ- ನಂಜನಗೂಡು-ಮೈಸೂರು- ಟಿ.ನರಸೀಪುರ- ಕೊಳ್ಳೇಗಾಲ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿದ ನಂತರ ಟೋಲ್ ದರ ಸಂಗ್ರಹಿಸಲಾಗುವುದು ಎಂಬ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಭೆ ನಾಳೆ
ಮೈಸೂರು: 2014-15ನೇ ಶೈಕ್ಷಣಿಕ, ಆಡಳಿತ, ದಾಖಲತಿ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿಸಲು ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಪ್ರಥಮ ಶೈಕ್ಷಣಿಕ ಸಭೆಯು ಜೂ.2ರ ಬೆಳಗ್ಗೆ 11ಕ್ಕೆ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ.ಪುಟ್ಟು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಸಭೆಗೆ ಹಾಜರಾಗುವಾಗ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದ ಅನುಬಂಧ-1 ರಿಂದ 6 ರವರೆಗೆ ವಿವರ ತರಬೇಕು. ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹೈದ್ರಾಬಾದ್-ಕರ್ನಾಟಕ ವಿಷಯಕ್ಕೆ ಸಂಬಂಧಿಸಿದ ನಮೂನೆಗಳನ್ನು ಸಹ ತರುವಂತೆ ಸೂಚಿಸಿದ್ದಾರೆ.

ಎಂ.ಎಸ್ಸಿ ಕೋರ್ಸ್
ಮೈಸೂರು: ಯುವರಾಜ ಕಾಲೇಜು (ಸ್ವಾಯತ್ತ) ಐದು ವರ್ಷಗಳ ಇಂಟಿಗ್ರೇಟೆಡ್ ಎಂ.ಎಸ್ಸಿ ಮಾಲಿಕ್ಯುಲರ್ ಬಯಾಲಜಿ ಕೋರ್ಸ್‌ಗಾಗಿ ಪಿಯುಸಿ, 10/2 ಸಮಾನ ವಿದ್ಯಾರ್ಹತೆಯುಳ್ಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಂದು www.yuvarajacollege.org ಅಥವಾ www.ycmmb.webs.com ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಜೂ.10 ಕಡೆ ದಿನ. ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ, ಮೊ. 9448933006 ಅಥವಾ 08221-2419236 ಸಂಪರ್ಕಿಸಬಹುದು. ಇ-ಮೇಲ್- Ycmmb2010@gmail.com.Ú

ಈತನ ಪತ್ತೆ ಗೊತ್ತೆ
ಮೈಸೂರು: ಮೈಸೂರು: ಮನೆಯಿಂದ ಹೊರಟ ವ್ಯಕ್ತಿಯೊಬ್ಬ ಕಾಣೆಯಾಗಿರುವ ಘಟನೆ ಎನ್.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಅಬಿದಾಬಾನು ಅವರ ಪತಿ ಫಾಜಿಲ್ ಪಾಷ (28) ಕಾಣೆಯಾದ ವ್ಯಕ್ತಿ. ಈತನ ಚಹರೆ ಹೀಗಿದೆ- 5.8 ಅಡಿ ಎತ್ತರ, ಸಾದಾರಣ ಶರೀರ, ಬಿಲಿ ಮೈ ಬಣ್ಣ, ಕೋಲು ಮುಖ, ಕಪ್ಪು ತಲೆ ಕೂದಲು, ಕನ್ನಡ, ಹಿಂದಿ ಮಾತನಾಡುತ್ತಾರೆ. ದೂ.2418112 , 2418339 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement