ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಿಗ್ಗಾಂವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿರುಸಿನ ಪ್ರಚಾರ

Srinivasa Murthy VN
Updated On : 30 Apr 2013, 10:48 am

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.28
ತಾಲೂಕಿನ ಅಭಿವೃದ್ಧಿಗಾಗಿ, ಸ್ವಚ್ಛ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿ ಮಿತಿಮೀರಿದ ಭ್ರಷ್ಟಾಚಾರ ನಡೆಸುವ ಮೂಲಕ ಜೈಲು ಹಾಗೂ ಬೇಲು ಎನ್ನುತ್ತಾ ರಾಜ್ಯದ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಕೆಜೆಪಿಯು ಬಿಜೆಪಿಯ ಪಾಪದ ಕೂಸು ಇದ್ದು, ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದ ಅವರು, 5 ವರ್ಷಗಳಿಂದ ಬಿಜೆಪಿಗೆ ಅಭಿವೃದ್ಧಿ ಮಾಡಲ್ಲಿಕ್ಕೆ ಆಗದೆ ಇದ್ದವರು ಕೆಜೆಪಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅವರು ಜೈಲಿಗೆ ಹೋಗುವುದು ತಪ್ಪಿಸಿಕೊಳ್ಳಲಿ ಎಂದು ಹೇಳಿದರು.
ಸುಭದ್ರ ಸರ್ಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದ ಅವರು ಕಾಂಗ್ರೆಸ್‌ಗೆ ಮತ ನೀಡಲು ಕೋರಿದರು.
ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಜಿಪಂ ಸದಸ್ಯ ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್ ಕರದಾಳ, ಡಾ. ಪ್ರಭುರಾಜ ಕಾಂತಾ, ನಾಗಯ್ಯ ಗುತ್ತೇದಾರ, ಸೋಮಶೇಖರ ಬೆಳಗುಂಪಾ, ಮುಕ್ತಾರ ಪಟೇಲ್, ರವೀಂದ್ರ ಸಜ್ಜನಶೆಟ್ಟಿ, ಶರಣು ಸಜ್ಜನ್, ಬಸವರಾಜ ಸಂಗಾವಿ, ಮಲ್ಲಿನಾಥ ಭಾಗೋಡಿ, ವಿಠ್ಠಲ್ ಗೌಡ, ಸಿದ್ದಣಗೌಡ ಆರ್.ಡಿ, ದೇವಿಂದ್ರ ಜಮಶೆಟ್ಟಿ, ಸಿದ್ದಣಗೌಡ ಮಾಲಿಪಾಟೀಲ್, ದೇವಿಂದ್ರ ಹಣ್ಣಿಕೇರಿ, ಪಾಶಾಮಿಯ್ಯ ಬಂಕಲಗಿ ಇದ್ದರು. ಶಿವರುದ್ರ ಭೀಣಿ ನೀರೂಪಿಸಿದರು. ತಿಪ್ಪಣ್ಣ ಸಂಗಾವಿ ಸ್ವಾಗತಿಸಿದರು. ಶ್ರೀಮಂತ ಗುತ್ತೇದಾರ ವಂದಿಸಿದರು.
ಸೇರ್ಪಡೆ: ದಿಗ್ಗಾಂವ ಗ್ರಾಪಂ ಸದಸ್ಯ ಸಿದ್ದು ಸಜ್ಜನಶೆಟ್ಟಿ, ದೇವಿಂದ್ರ ಚೌದರಿ, ರಜನಿಕಾಂತ ಪೂಜಾರಿ, ಮಲ್ಲಿನಾಥ ಅಚ್ಚಲಿ, ಶರಣಪ್ಪ ಹಣ್ಣಿಕೇರಿ, ಮಹಾದೇವಪ್ಪ ಹಣ್ಣಿಕೇರಿ, ದೇವಿಂದ್ರಪ್ಪ ಗುಂಡಗುರ್ತಿ, ಶಾಮು ಸಂಗಾವಿ, ಶಂಭು ಹಡಪದ, ಸೂರ್ಯಕಾಂತ ಜಮಶೆಟ್ಟಿ, ಶರಣಪ್ಪ ಹಾಗರಗಿ, ಶರಣಪ್ಪ ಪಲ್ಲೆದ್, ಚಂದ್ರಶೇಖರ ಸಂಗಾವಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

'ಕ್ಷೇತ್ರ ಅಭಿವೃದ್ಧಿಗಾಗಿ 'ಕೈ' ಅನಿವಾರ್ಯ'
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.28

ಕ್ಷೇತ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಗೆಲವು ಅನಿವಾರ್ಯ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರ ಹಿಂದುಳಿದಿದೆ ಎಂಬ ಹಣೆಪಟ್ಟಿ ಅಳಿಸಲು ಹೆಚ್ಚು ಅಭಿವೃದ್ಧಿ ಗೊಳಿಸಬೇಕಿದೆ ಎಂದರು.
ಜನತೆ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಮೂರು ಹೋಳಾಗಿ ಕೇವಲ ಜೈಲಿಗೆ ಹೋಗಿ ಬರುವುದರಲ್ಲಿ ಕಾಲ ಹರಣಗೊಳಿಸಿದ್ದಾರೆ. ರಾಜ್ಯದ ಹಣ ಲೂಟಿ ಮಾಡಿ ಜನತೆಗೆ ಮೋಸ ಮಾಡಿದ್ದಾರೆ ಎಂದರು.
ಬಿಜೆಪಿ, ಕೆಜೆಪಿ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ. ಕೇವಲ ಕುರ್ಚಿ ಅಧಿಕಾರದ ಆಸೆಗೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅಭಿವೃದ್ಧಿ ಪರ ಚಿಂತನೆ ಮಾಡುವ ಖರ್ಗೆ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸೋಮಶೇಖರ ಪಾಟೀಲ್, ಬಾಬುಮಿಯ್ಯ ಕಲಗುರ್ತಿ, ನಾಗಣ್ಣ ಕಂಠಿ, ರವೀಂದ್ರ ಸಜ್ಜನಶೆಟ್ಟಿ ಮಾತನಾಡಿದರು. ಮುಖಂಡರಾದ ಬಸವರಾಜ ಸಂಗಾವಿ, ಪಂಪಣ್ಣ ಗೌಡ ಪೊಲೀಸ್ ಪಾಟೀಲ್, ಪಂಪಣ್ಣಗೌಡ ಸಜ್ಜನಶೆಟಿ, ಶಿವಣ್ಣ ಹಿಟ್ಟಿನ, ವಿಠ್ಠಲಗೌಡ, ಸಿದ್ದಣ್ಣಗೌಡ ಪಾಟೀಲ್, ಶಿವಮೂರ್ತಿ ಶಾಸ್ತ್ರೀ, ಶಿವಶರಣಪ್ಪ ಉಟಗೂರ, ರಾಮರೆಡ್ಡಿ ಕೊಳ್ಳಿ, ಪ್ರಭಾಕರ ತುರೆ, ಖಾದರಸಾಬ್ ಸಂದೂರಿ, ತಿಪ್ಪಣ್ಣ ಸಂಗಾವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement