ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

80 ವರ್ಷ ದಾಟಿದ 39 ಹಿರಿಯರಿಗೆ ಸನ್ಮಾನ

Srinivasa Murthy VN
Updated On : 13 Aug 2013, 10:17 am

ಯುವಕ-ಯುವತಿಯರು ಭಾರತ ಸಂಸ್ಕೃತಿ ಮರೆಯಬಾರದು: ಶಾಸಕ ಬಾದರ್ಲಿ
ಕನ್ನಡಪ್ರಭ ವಾರ್ತೆ ಸಿಂಧನೂರು ಆ.12
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಸಂಸ್ಕೃತಿ ಜಗತ್ತಿಗೇ ಮಾದರಿಯಾಗಿದ್ದು, ಆದರೆ ಇಂದಿನ ಯುವಕ-ಯುವತಿಯರು ಪಾಶ್ಚಾತ್ಯ ಸಂಸ್ಕೃತಿ ಮಾರು ಹೋಗಿ ಭಾರತ ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಕಳವಳ ವ್ಯಕ್ತಪಡಿಸಿದರು.
ಅವರು ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ಚನ್ನಬಸವ ತಾತನವರ 5ನೇ ವರ್ಷದ ಪುರಾಣ ಪ್ರವಚನದ ಅಂಗವಾಗಿ ಹಮ್ಮಿಕೊಂಡಿದ್ದ 80 ವರ್ಷ ದಾಟಿದ 39 ಹಿರಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೀತಿ ಮನೋಭಾವ: ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಕೋಟೆ ನಿವಾಸಿಗಳಲ್ಲಿ ಒಗ್ಗಟ್ಟಿದ್ದು, ಇದು ಇತರರಿಗೆ ಮಾದರಿಯಾಗಿದೆ. ಇಂತಹ ಸನ್ಮಾನ ಸಮಾರಂಭಗಳು ಜರುಗುವುದರಿಂದ ಒಬ್ಬರನ್ನೊಬ್ಬರ ದ್ವೇಷವನ್ನು ಮರೆತು ಪ್ರೀತಿಸುವ ಮನೋಭಾವ ಹೆಚ್ಚುಸುತ್ತದೆ ಎಂದರು. ಕೋಟೆ ಓಣಿಯು ಇತರ ಓಣಿಗಳಿಗೆ ಮಾದರಿಯಾಗಿದೆ. ಪ್ರತಿವರ್ಷವೂ ವಿವಿಧ ತರಹದ ಕಾರ್ಯಕ್ರಮಗಳು ಮಾಡುವುದರಿಂದ ಸಂಘಟಿಸುವ ತಾರುಣ್ಯ ಹೊಂದಿದೆ ಎಂದರು.
ಕರಿಬಸವನಗರದ ಖಾಸಾಶಾಖಾಮಠದ ಸೋಮನಾಥ ಶಿವಾಚಾರ್ಯ, ಯದ್ದಲದೊಡ್ಡಿ ಶ್ರೀಗಳು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ನೇತೃತ್ವವನ್ನು ಕೋಟೆ ಈರಣ್ಣ ದೇವಸ್ಥಾನದ ಅಧ್ಯಕ್ಷ ಬೆನ್ನೂರು ಶರಣೇಗೌಡ, ಎಪಿಎಂಸಿ ರಾಜ್ಯ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್, ಪಿಎಸ್‌ಐ ಎನ್.ಆರ್. ನಿಂಗಪ್ಪ, ಜಿ.ಪಂ. ಸದಸ್ಯೆ ಶಾಂತಾ ದಯಾನಂದ ರೆಡ್ಡಿ, ಕೋಟೆ ಮುಖಂಡರಾದ ತಿಪ್ಪಯ್ಯಸ್ವಾಮಿ, ನಾಗಪ್ಪ ಹೊಸಮನಿ, ಬಿ.ಅಮರೇಯ್ಯಸ್ವಾಮಿ ಮತ್ತಿತರ ಮುಖಂಡರು ಹಾಗೂ ಗೆಳೆಯರ ಬಳಗದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement