ತುರ್ತು ಚಿಕಿತ್ಸಾ ಕೇಂದ್ರ ಆರಂಭ
ಸಿಂಧನೂರು: ತಾಲೂಕಿನ ಆರ್.ಎಚ್. ಕ್ಯಾಂಪ್ ನಂ. 5ರಲ್ಲಿ ಶಂಕಿತ ಡೆಂಘೀ ನಿಯಂತ್ರಣಕ್ಕಾಗಿ ಹಾಗೂ ಹೊರ ರೋಗಿಗಳನ್ನು ಪರೀಕ್ಷಿಸಲು ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಲಾಯಿತು. ಆರ್ಎಚ್ ಕ್ಯಾಂಪ್ನ್ಂ.2ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಎಸ್.ಸುಂಕದ ಅವರು ಹೊರರೋಗಿಗಳ ಆರೋಗ್ಯ ತಪಾಸಣೆ ಮಾಡಿದರು. ಸುಮಾರು 19ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ರಾಯಚೂರಿಗೆ ಕಳುಹಿಸಲಾಯಿತು. ಅಲ್ಲದೇ ಗ್ರಾಪಂ ವತಿಯಿಂದ ಗ್ರಾಮಸ್ಥರ ಮನೆಗಳಲ್ಲಿ ಫಾಗಿಂಗ್ ಮಾಡಲಾಯಿತು. ಮನೆಗಳಲ್ಲಿ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿಗಳನ್ನು ಶುಚಿಗೊಳಿಸುವ ಕಾರ್ಯವನ್ನು ಜಿಲ್ಲಾ ಸಮೀಕ್ಷಾ ತಂಡದವರು ನಿರ್ವಹಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ್ ನೇತೃತ್ವದಲ್ಲಿ ಗ್ರಾಮದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಈ ವೇಳೆ ನಡೆಸಲಾಯಿತು. ಗ್ರಾಪಂ ಸದಸ್ಯ ಸುಮಂತೊ ಮಂಡಲ್, ನರೋದ್ ಬೈರಾಗಿ, ಸರಳಾ ಶಿಶು ಮಂಡಲ್, ಶಶಿಕುಮಾರ, ಮುಖಂಡರಾದ ಸಪನ್ ಬಿಸ್ವಾಸ್, ಪ್ರಹ್ಲಾದ ಬಿಸ್ವಾಸ್, ಜಗನ್ನಾಥ, ಅಮರ, ದಿಲೀಪ್ ಮತ್ತಿತರರು ಸಹಕರಿಸಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಚಂದ್ರಣ್ಣ, ರೋಷನ್, ಪ್ರಯೋಗ ತಂತ್ರಜ್ಞೆ ಕನಕಾಚಲ ಭಾಗವಹಿಸಿದ್ದರು.