ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆರಾಧನೆಗೆ ವಿಧ್ಯುಕ್ತ ಚಾಲನೆ

Srinivasa Murthy VN
Updated On : 21 Aug 2013, 11:44 am

ಭಕ್ತರ ಮಹಾಪೂರ, ಶ್ರೀಮಠದಲ್ಲಿ ವೇದ ಮಂತ್ರಘೋಷ, ವಿದ್ಯುದ್ದೀಪ, ಹೂವಿನಿಂದ ಅಲಂಕೃತ ರಾಯರ ಮಠ. ಸಡಗರ, ಸಂಭ್ರಮದ ವಾತಾವರಣದ ಮಧ್ಯೆ ಮಂತ್ರಾಲಯದಲ್ಲಿ ಬುಧವಾರ ಶ್ರೀರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆಗೆ ಚಾಲನೆ ನೀಡಲಾಯಿತು. ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಶ್ರೀ ಉತ್ಸವ ರಾಯರ ಪಾದಪೂಜೆಯನ್ನು ಉತ್ತರಾಧಿಕಾರಿಗಳಾದ ಶ್ರೀಸುಬುಧೇಂದ್ರ ತೀರ್ಥರು ನೆರವೇರಿಸಿದರು. ನಂತರ ಶ್ರೀರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಯತೀಂದ್ರ ತೀರ್ಥರ ನೇತೃತ್ವದಲ್ಲಿ ಅವರ ಉತ್ತರಾಧಿಕಾರಿ ಶ್ರೀಸುಬುಧೇಂದ್ರತೀರ್ಥರು ಶ್ರೀಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ಶ್ರೀರಾಯರ ಮೂಲಬೃಂದಾವನಕ್ಕೆ ಶ್ರೀಸುಯತೀಂದ್ರತೀರ್ಥರು ಮಹಾಮಂಗಳಾರತಿ ನೆರವೇರಿಸಿದರು.
ಇಂದು ಮಧ್ಯಾರಾಧನೆ: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಆ.22ರಂದು ಜರುಗಲಿದ್ದು, ಶ್ರೀಮಠ ದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement