ಆರ್ಟಿಪಿಎಸ್: 5ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5ನೇ ಘಟಕ ಶುಕ್ರವಾರ ಬೆಳಗ್ಗೆ ದುರಸ್ತಿಗೀಡಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ವಿದ್ಯುತ್ ಕೇಂದ್ರದ ಮೂರನೇ ಘಟಕವನ್ನು ವಾರ್ಷಿಕ ದುರಸ್ತಿಗೆ ತೆಗೆದುಕೊಂಡಿದ್ದು, 7ನೇ ಘಟಕ ಕೂಡ ಕಳೆದ ಕೆಲವು ದಿನಗಳಿಂದ ದುರಸ್ತಿಯಲ್ಲಿದೆ. ಈಗ ಐದನೇ ಘಟಕದ ಬಾಯ್ಲರ್ ಟ್ಯೂಬ್ನಲ್ಲಿ ಕಂಡು ಬಂದ ಸೋರಿಕೆಯಿಂದಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಒಟ್ಟು 8 ಘಟಕಗಳ ಪೈಕಿ ಮೂರು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಂತಾಗಿದೆ. ಶುಕ್ರವಾರ ಬೆಳಗ್ಗೆವರೆಗೆ ವಿದ್ಯುತ್ ಕೇಂದ್ರದಿಂದ 1100 ಮೆವ್ಯಾ ವಿದ್ಯುತ್ ರಾಜ್ಯ ಜಾಲಕ್ಕೆ ರವಾನಿಸಲಾಗಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.