ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೇತನವಿಲ್ಲದೆ ಹಾಸ್ಟೆಲ್ ಸಿಬ್ಬಂದಿ ಪರದಾಟ

Srinivasa Murthy VN
Updated On : 24 Dec 2013, 10:03 am

ಮುದಗಲ್: ಮೂರು ತಿಂಗಳಿಂದ ವೇತನವಿಲ್ಲ, ಕುಟುಂಬ ನಿರ್ವಹಣೆಗಾಗಿ ಅಂಗಡಿಕಾರರಲ್ಲಿ ಸಾಲ ಮಾಡಿ ರೇಷನ್ ತರುವ ಪರಿಸ್ಥಿತಿ ಎದುರಾಗಿದೆ ಎಂದು ತಾಲೂಕಿನ ಬಿಸಿಎಂ ವಸತಿ ನಿಲಯಗಳಲ್ಲಿ ಮುಖ್ಯ ಅಡುಗೆ, ಅಡುಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಗೋಳಾಡುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ವೇತನ ನೀಡದ ಕಾರಣ ಕೆಲಸಗಾರರು ದಿನನಿತ್ಯ ಪರದಾಡುವಂತಾಗಿದೆ. ತಾಲೂಕು ಬಿಸಿಎಂ ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆ ಇದ್ದುದರಿಂದ ಪೇ ಬಿಲ್ ಬೇರೆಯವರಿಂದ ಬರೆಸುವಂತಾಗಿದೆ ಎಂದು ಹೇಳುತ್ತಿದ್ದಾರೆ. ಪೇ ಬಿಲ್ ಪರೆಯಲು ಪ್ರತಿ ಕೆಲಸಗಾರರಿಂದ 200 ನೀಡಬೇಕು, ಕಾಯಂ ಸಿಬ್ಬಂದಿಗೆ ಡಿಎ, ಹಬ್ಬದ ಮುಂಗಡ ನೀಡಿಲ್ಲ, ಇನ್‌ಕ್ರೀಮೇಂಟ್ ಇಲ್ಲ, ಕಚೇರಿಯಲ್ಲಿ ಪ್ರತಿಯೊಂದಕ್ಕೂ ಲಂಚ ನೀಡಬೇಕಾದ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
2010ರಲ್ಲಿನ ಬಾಕಿ ಹಣ ನೀಡಿಲ್ಲ: 2010ರಲ್ಲಿ 9 ತಿಂಗಳ ವೇತನ ನೀಡಿದ್ದಿಲ್ಲ, ಆಗ ವೇತನ ನೀಡಿ ಅದರಲ್ಲಿ ಬ್ಯಾಂಕ್ ಸಾಲ ಇದ್ದವರ ಬಾಕಿ ಹಣವನ್ನು ಕಟ್ ಮಾಡಿ ಬ್ಯಾಂಕಿಗೆ ಜಮಾ ಮಾಡುವುದಾಗಿ ಹೇಳಿದ ಅಧಿಕಾರಿಗಳು, ಇದುವರಿಗೂ ಬ್ಯಾಂಕಿಗೆ ಜಮಾ ಮಾಡಿಲ್ಲ ಎಂದು ತಿಳಿಸಿದರು. ದಿನಗೂಲಿ ಕೆಲಸ ಮಾಡುತ್ತಿರುವವರಿಗೂ ಕಳೆದ 5 ತಿಂಗಳಿಂದ ವೇತನ ನೀಡಿಲ್ಲ, ಹೀಗಾದರೆ ಕುಟುಂಬ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ತಾಲೂಕಿನ ವಿವಿಧ ವಸತಿ ನಿಲಯಗಳಲ್ಲಿ 100ಕ್ಕೂ ಹೆಚ್ಚು ದಿನಗೂಲಿ ನೌಕರರು, 50ಕ್ಕೂ ಹೆಚ್ಚು ಕಾಯಂ ನೌಕರರಿದ್ದು ವೇತನಕ್ಕಾಗಿ ಪರದಾಡುವಂತಾಗಿದೆ. ತಾಲೂಕು ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾ ಬಿಸಿಎಂ ಅಧಿಕಾರಿಗಳಿಗೆ ಕಳಿಸಲಾಗಿದೆ ಎನ್ನುತ್ತಾರೆ. ವೇತನ ನೀಡಿ ನೌಕರರ ಹಿತ ಕಾಪಾಡಬೇಕೆಂದು ನೊಂದ ಬಿಸಿಎಂ ಸಿಬ್ಬಂದಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement