ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಟಿಬಿ ಎಡದಂಡೆ: ಏ.10ರವರೆಗೆ ನೀರು ಹರಿಸಲು ಕೆಜೆಪಿ ಆಗ್ರಹ

Srinivasa Murthy VN
Updated On : 9 Mar 2013, 10:30 am

ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಏ.10ರ ವರೆಗೆ ನೀರು ಹರಿಸದಿದ್ದರೆ ಹೋರಾಟ ನಡೆಸಲಾಗುತ್ತದೆ ಎಂದು ಕೆಜೆಪಿ ಮುಖಂಡ, ಜಿಪಂ ಸದಸ್ಯ ಮಹದೇವಪ್ಪಗೌಡ ಪೊಲೀಸ್ ಪಾಟೀಲ್ ಎಚ್ಚರಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬತ್ತ ಬೆಳೆದಿದ್ದು, ಏ.10ರ ವರೆಗೆ ನೀರು ಹರಿಸದಿದ್ದರೆ ಬೆಳೆ ಹಾನಿಯಾಗಲಿದೆ. ಅದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಆರೋಪಿಸಿದರು.
ಕೆಜೆಪಿ ಟಿಕೆಟ್- ವಿಶ್ವಾಸ: ಮುಂಬರುವ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸಲಿದ್ದು, ವಿರೋಧಿಗಳು ತಮ್ಮ ಬಗ್ಗೆ ಅನಗತ್ಯವಾಗಿ ವದಂತಿ ಹರಡುತ್ತಿದ್ದು, ಕ್ಷೇತ್ರದ ಜನತೆ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದ ಅವರು, ಕೆಜೆಪಿ ವರಿಷ್ಠರು ತಮಗೆ ಟಿಕೆಟ್ ನೀಡುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಶಾಸಕ ಪ್ರತಾಪಗೌಡ ಪಾಟೀಲ್ ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೆಸ್ ಮುಖಂಡರೊಂದಿಗೆ ಸಖ್ಯ ಬೆಳೆಸಿದ್ದಾರೆ. ಕಾಂಗ್ರೆಸ್ ಮುಖಂಡರೊಂದಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಪಕ್ಷಕ್ಕೆ ಯುವಕರ ಒಲವು: ಮಸ್ಕಿ ಪಟ್ಟಣ ಸೇರಿ ಗ್ರಾಮಾಂತರ ಪ್ರದೇಶದಲ್ಲಿ ತಮಗೆ ಅಪಾರ ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಸಂಘಟನೆಗೆ ಯುವಕರು ಅಪಾರ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೆಜೆಪಿ ತನ್ನ ಬಲಪ್ರದರ್ಶನ ಮಾಡಲಿದೆ ಎಂದರು.
ಮುಖಂಡರಾದ ಕೆ.ವೀರನಗೌಡ, ಸಂಚಾಲಕ ಬಸಣ್ಣ ತೊಂತನಾಳ, ಸೂಗಣ್ಣ ಬಾಳೇಕಾಯಿ, ಮಲ್ಲಿಕಾರ್ಜುನ ಗೋನಾಳ, ಶಂಭಣ್ಣ ಕುರಕುಂದಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement