ಶೇ.58.67 ಮತದಾರರಿಂದ ಹಕ್ಕು ಚಲಾವಣೆ
ರಾಯಚೂರು: ಜಿಲ್ಲೆಯಲ್ಲಿ ಮಾ. 7ರಂದು ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು ಶೇ. 58.67ರಷ್ಟು ಮತದಾನವಾಗಿದೆ. ಒಟ್ಟು 3,24,203 ಮತದಾರರ ಪೈಕಿ 1,90,204 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಚುನಾವಣೆಯ ಮತದಾನದ ವಿವರ ಇಂತಿದೆ.
ರಾಯಚೂರು ನಗರಸಭೆ: ಇಲ್ಲಿನ 35 ವಾರ್ಡುಗಳಿಗೆ 237 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಟ್ಟು 1,67,786 ಮತದಾರರ ಪೈಕಿ 88,860 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 45,532 ಪುರುಷರು ಹಾಗೂ 43,328 ಮಹಿಳೆಯರಿದ್ದಾರೆ. ಶೇ. 52.96ರಷ್ಟು ಮತದಾರರು ಮತದಾನ ಮಾಡಿದ್ದಾರೆ.
ಸಿಂಧನೂರು ನಗರಸಭೆ: 31 ವಾರ್ಡುಗಳಿಗೆ 171 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 62,470 ಮತದಾರರಲ್ಲಿ 38,243 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 20,109 ಪುರುಷ ಮತ್ತು 18,134 ಮಹಿಳಾ ಮತದಾರರಿದ್ದಾರೆ. ಶೇ. 61.22 ರಷ್ಟು ಮತದಾನವಾಗಿದೆ.
ಮಾನವಿ ಪುರಸಭೆ: 23 ವಾರ್ಡುಗಳಿಗೆ ಚುನಾವಣೆ ಕಣದಲ್ಲಿ 111 ಅಭ್ಯರ್ಥಿಗಳಿದ್ದಾರೆ. ಒಟ್ಟು 31,191 ಮತದಾರರ ಪೈಕಿ 20,019 ಮತದಾರರು ಮತಚಲಾಯಿಸಿದ್ದಾರೆ. ಇದರಲ್ಲಿ 10,306 ಪುರುಷ ಹಾಗೂ 9,713 ಮಹಿಳಾ ಮತದಾರರು ಮತ ಹಾಕಿದ್ದಾರೆ. ಶೇ. 64.18ರಷ್ಟು ಮತದಾನವಾಗಿದೆ.
ದೇವದುರ್ಗ ಪುರಸಭೆ: ಇಲ್ಲಿನ 23 ವಾರ್ಡುಗಳಿಗೆ 68 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 18,485 ಮತದಾರರಿದ್ದಾರೆ. ಅವರಲ್ಲಿ 13,156 ಮತದಾರರು ಮತ ಹಾಕಿದ್ದಾರೆ. ಇದರಲ್ಲಿ 6,789 ಪುರುಷ ಹಾಗೂ 6,367 ಮಹಿಳಾ ಮತದಾರರಿದ್ದಾರೆ. ಶೇ. 71.17ರಷ್ಟು ಮತದಾನವಾಗಿದೆ.
ಲಿಂಗಸ್ಗೂರು ಪುರಸಭೆ: 23 ವಾರ್ಡುಗಳಲ್ಲಿ 103 ಅಭ್ಯರ್ಥಿಗಳಿದ್ದು, 25,436 ಮತದಾರರಿದ್ದಾರೆ. ಅವರಲ್ಲಿ 16,751 ಮತದಾರರು ಮತದಾನ ಮಾಡಿದ್ದು, 8,623 ಪುರುಷ ಹಾಗೂ 8,128 ಮಹಿಳಾ ಮತದಾರರು ಮತದಾನ ಮಾಡದ್ದಾರೆ. ಶೇ.65.86 ರಷ್ಟು ಮತದಾನವಾಗಿದೆ.
ಮುದಗಲ್ ಪಟ್ಟಣ ಪಂಚಾಯಿತಿ: ಇಲ್ಲಿನ 19 ವಾರ್ಡುಗಳಿಗೆ 67 ಜನ ಅಭ್ಯರ್ಥಿಗಳಿದ್ದು 18,835 ಮತದಾರರಿದ್ದಾರೆ. ಅವರಲ್ಲಿ 6,873 ಪುರುಷ ಹಾಗೂ 6,302 ಮಹಿಳಾ ಮತದಾರರು ಸೇರಿದಂತೆ ಒಟ್ಟು 13,175 ಮತದಾರರು ಮತ ಹಾಕಿದ್ದಾರೆ. ಶೇ. 69.95ರಷ್ಟು ಮತದಾನವಾಗಿದೆ.
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಗಳ ಎಣಿಕೆ ಕಾರ್ಯ ಮಾ.11ರಂದು ನಡೆಯಲಿದೆ.